Site icon Vistara News

ರಣಜಿ ಟ್ರೋಫಿ: ಕರ್ನಾಟಕ ಸಂಭವನೀಯ ತಂಡ ಪ್ರಕಟ, ಕೆ.ಎಲ್​ ರಾಹುಲ್​ಗೆ ಸ್ಥಾನ

kl rahul vice captain

ಬೆಂಗಳೂರು: 2023-24ರ ರಣಜಿ ಟ್ರೋಫಿಗೆ(Ranji Trophy) ಕರ್ನಾಟಕ ಸಂಭವನೀಯ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. 32 ಆಟಗಾರರ ಪಟ್ಟಿಯಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(kl Rahul)​ ಮತ್ತು ಬೌಲರ್​ ಪ್ರಸಿದ್ಧ್​ ಕೃಷ್ಣ ಕೂಡ ಕಾಣಿಸಿಕೊಂಡಿದ್ದಾರೆ. ಜ.5ರಿಂದ ರಣಜಿ ಪಂದ್ಯಾವಳಿ ಆರಂಭಗೊಳ್ಳಲಿದೆ.

ಸದ್ಯ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದ್ದು, ಏಕದಿನ ಸರಣಿಯಲ್ಲಿ ನಾಯಕನಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಇದಾದ ಬಳಿಕ ಟೆಸ್ಟ್​ ಸರಣಿಯಲ್ಲಿ ಭಾಗವಹಿಸಲಿದ್ದಾರೆ. ರಣಜಿ ಟ್ರೋಫಿಯ ಸಂದರ್ಭ ಭಾರತ ತಂಡಕ್ಕೆ ಸರಣಿ ಇಲ್ಲವಾದ ಕಾರಣ ರಾಹುಲ್​ ಆಡುವ ನಿರೀಕ್ಷೆ ಇದೆ. ಈ ಹಿಂದೆ ಭಾರತ ಸರಣಿ ಇಲ್ಲದಾಗ ರಾಹುಲ್​ ಕರ್ನಾಟಕ ಪರ ರಣಿಜಿ ಸೇರಿ ಎಲ್ಲ ದೇಶೀಯ ಟೂರ್ನಿಯ ಪಂದ್ಯವಾಳಿಯಲ್ಲಿ ಆಡಿದ್ದರು.

ಸಂಭವನೀಯ ಆಟಗಾರರ ಪಟ್ಟಿ

ಕೆ.ಎಲ್ ರಾಹುಲ್‌, ಮಯಾಂಕ್‌ ಅಗರ್ವಾಲ್​, ಪ್ರಸಿದ್ಧ್‌ ಕೃಷ್ಣ, ದೇವದತ್ ಪಡಿಕ್ಕಲ್‌, ಮನೀಶ್‌ ಪಾಂಡೆ, ಕೆ.ಗೌತಮ್‌, ರವಿಕುಮಾರ್ ಸಮರ್ಥ್‌, ವಿದ್ವತ್‌ ಕಾವೇರಪ್ಪ, ನಿಕಿನ್‌ ಜೋಸ್, ವಾಸುಕಿ ಕೌಶಿಕ್‌, ವೈಶಾಖ್‌, ಶರತ್‌ ಶ್ರೀನಿವಾಸ್‌, ಜಗದೀಶ್ ಸುಚಿತ್‌, ಶುಭಾಂಗ್‌ ಹೆಗ್ಡೆ, ವೆಂಕಟೇಶ್‌, ಮನೋಜ್‌, ಶರತ್‌ ಬಿ.ಆರ್‌., ಹಾರ್ದಿಕ್‌ ರಾಜ್‌, ನಿಶ್ಚಲ್‌, ಕಿಶನ್‌, ವಿಶಾಲ್‌, ರೋಹಿತ್‌, ಯಶೋವರ್ಧನ್‌, ಕೃತಿಕ್‌, ಸ್ಮರಣ್‌, ಅಭಿಲಾಷ್‌, ಶಶಿಕುಮಾರ್‌, ಮೊಹ್ಸಿನ್‌, ಅನೀಶ್‌, ಅನೀಶ್ವರ್‌, ಅಭಿನವ್‌, ಸುಜಯ್‌.

ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿದ್ದು, ಅಗ್ರ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಇರಲಿವೆ ಮತ್ತು ಕೆಳಗಿನ ವಿಭಾಗವು ಆರು ತಂಡಗಳ ಒಂದು ಗುಂಪನ್ನು ಒಳಗೊಂಡಿರುತ್ತದೆ. ಎಲೈಟ್ ವಿಭಾಗದ ಒಂದು ತಂಡವು ಚಾಂಪಿಯನ್​ ಆಗಲು 10 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಏಳು ಲೀಗ್ ಪಂದ್ಯಗಳು ಸೇರಿವೆ, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್.

ಇದನ್ನೂ ಓದಿ KL Rahul: ಧೋನಿ ನಾಯಕತ್ವದ ದಾಖಲೆ ಮುರಿದ ಕನ್ನಡಿಗ ಕೆ.ಎಲ್ ರಾಹುಲ್​

ನಾಲ್ಕು ಎಲೈಟ್ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಪ್ಲೇಟ್ ವಿಭಾಗದಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್​ನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಟ್ ಗ್ರೂಪ್ ಫೈನಲಿಸ್ಟ್​ಗಳನ್ನು 2024-25ರ ಋತುವಿನಲ್ಲಿ ಎಲೈಟ್ ಗ್ರೂಪ್​​​ಗೆ ಬಡ್ತಿ ನೀಡಲಾಗುತ್ತದೆ. ಎಲೈಟ್ ಗುಂಪುಗಳಿಂದ ಕೊನೆಯ ಎರಡು ತಂಡಗಳನ್ನು ಅಂಕಗಳು, ಬೋನಸ್ ಅಂಕಗಳು, ಗೆಲುವುಗಳು ಮತ್ತು ಅಂಶಗಳ ಆಧಾರದ ಮೇಲೆ ಪ್ಲೇಟ್ ಗ್ರೂಪ್​​ಗೆ ಪ್ರವೇಶ ಪಡೆಯುತ್ತದೆ.

ತಂಡಗಳನ್ನು ಈ ರೀತಿ ಗುಂಪು ಮಾಡಲಾಗಿದೆ

ಎಲೈಟ್ ಗ್ರೂಪ್ ಎ: ಸೌರಾಷ್ಟ್ರ, ಜಾರ್ಖಂಡ್, ಮಹಾರಾಷ್ಟ್ರ, ರಾಜಸ್ಥಾನ, ವಿದರ್ಭ, ಹರ್ಯಾಣ, ಸರ್ವಿಸಸ್ ಮತ್ತು ಮಣಿಪುರ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಬಿ: ಈ ಗುಂಪಿನಲ್ಲಿ ಬಂಗಾಳ, ಆಂಧ್ರ, ಮುಂಬೈ, ಕೇರಳ, ಛತ್ತೀಸ್ ಗಢ, ಉತ್ತರ ಪ್ರದೇಶ, ಅಸ್ಸಾಂ ಮತ್ತು ಬಿಹಾರ ತಂಡಗಳಿವೆ.

ಎಲೈಟ್ ಗ್ರೂಪ್ ಸಿ: ಕರ್ನಾಟಕ, ಪಂಜಾಬ್, ರೈಲ್ವೆ, ತಮಿಳುನಾಡು, ಗೋವಾ, ಗುಜರಾತ್, ತ್ರಿಪುರಾ ಮತ್ತು ಚಂಡೀಗಢ ತಂಡಗಳು ಈ ಗುಂಪಿನಲ್ಲಿವೆ.

ಎಲೈಟ್ ಗ್ರೂಪ್ ಡಿ: ಮಧ್ಯಪ್ರದೇಶ, ಉತ್ತರಾಖಂಡ್, ಹಿಮಾಚಲ ಪ್ರದೇಶ, ಬರೋಡಾ, ದೆಹಲಿ, ಒಡಿಶಾ, ಪಾಂಡಿಚೆರಿ ಮತ್ತು ಜಮ್ಮು ಮತ್ತು ಕಾಶ್ಮೀರ ತಂಡಗಳು ಈ ಗುಂಪಿನಲ್ಲಿವೆ.

ಪ್ಲೇಟ್ ಗ್ರೂಪ್: ಎಲೈಟ್ 31, 32ನೇ ಸ್ಥಾನ; ಪ್ಲೇಟ್ ರ್ಯಾಂಕ್ 3, 4, 5, 6. ನಾಗಾಲ್ಯಾಂಡ್, ಹೈದರಾಬಾದ್, ಮೇಘಾಲಯ, ಸಿಕ್ಕಿಂ, ಮಿಜೋರಾಂ ಮತ್ತು ಅರುಣಾಚಲ ಪ್ರದೇಶ ತಂಡಗಳು ಈ ಗುಂಪಿನಲ್ಲಿವೆ.

Exit mobile version