ಬೆಂಗಳೂರು: ಮುಂಬರುವ ರಣಜಿ ಟ್ರೋಫಿ(RANJI TROPHY) ಋತುವಿನ ಮೊದಲೆರಡು ಪಂದ್ಯಗಳಿಗೆ ಕರ್ನಾಟಕ ತಂಡ(Karnataka team) ಪ್ರಕಟಗೊಂಡಿದೆ. ಅನುಭವಿ ಆರಂಭಿಕ ಆಟಗಾರ ಮಾಯಾಂಕ್ ಅಗರ್ವಾಲ್(MAYANK AGARWAL) ನಾಯಕನಾದರೆ, ಯುವ ಬ್ಯಾಟರ್ ನಿಕಿನ್ ಜೋಸ್ ಉಪನಾಯಕರಾಗಿದ್ದಾರೆ.
ಇತ್ತೀಚೆಗಷ್ಟೇ ಪ್ರಕಟೊಂಡಿದ್ದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಕೆ.ಎಲ್ ರಾಹುಲ್ ಹೆಸರು ಕೂಡ ಕಂಡುಬಂದಿತ್ತು. ಆದರೆ ಅಂತಿಮ 16 ಸದಸ್ಯರ ತಂಡದಲ್ಲಿ ಅವರ ಹೆಸರಿಲ್ಲ. ರಣಜಿ ಟೂರ್ನಿಯ ವೇಳೆ ಭಾರತ ತಂಡಕ್ಕೆ ಅಫಘಾನಿಸ್ತಾನ ಮತ್ತು ಇಂಗ್ಲೆಂಡ್ ವಿರುದ್ಧ ಸರಣಿ ಇರುವ ಕಾರಣ ರಾಹುಲ್ ಅವರು ಆ ಸರಣಿಯಲ್ಲಿ ಆಡಲಿದ್ದಾರೆ. ಹೀಗಾಗಿ ಅವರನ್ನು ರಣಜಿ ಪರಿಗಣಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರವಿಕುಮಾರ್ ಸಮರ್ಥ್, ದೇವದತ್ತ ಪಡಿಕ್ಕಲ್, ನಿಕಿನ್ ಜೋಸ್, ಮನಿಷ್ ಪಾಂಡೆ, ಶುಭಾಂಗ್ ಪಾಂಡೆ, ಶರತ್ ಶ್ರೀನಿವಾಸ್, ವೈಶಾಖ್ ವಿಜಯಕುಮಾರ್, ವಾಸುಕಿ ಕೌಶಿಕ್, ವಿದ್ವತ್ ಕಾವೇರಪ್ಪ, ಕೆ. ಶಶಿಕುಮಾರ್, ಸುಜಯ್ ಸಟೆರಿ, ಡಿ. ನಿಶ್ಚಲ್, ಎಂ. ವೆಂಕಟೇಶ್, ಕಿಶನ್ ಎಸ್. ಬದರೆ, ಎ.ಸಿ. ರೋಹಿತ್ ಕುಮಾರ್.
ಗೌತಮ್ಗೆ ಕೊಕ್!
ಆಲ್ ರೌಂಡರ್ ಕೃಷ್ಣಪ್ಪ ಗೌತಮ್ ಅವರನ್ನು ಈ ಬಾರಿ ತಂಡದಿಂದ ಕೈಬಿಡಲಾಗಿದೆ. ಭವಿಷ್ಯದ ತಂಡವನ್ನು ಕಟ್ಟುವ ಸಲುವಾಗಿ 36 ವರ್ಷದ ಆಟಗಾರರಿಗೆ ಈ ಬಾರಿ ಅವಕಾಶ ನೀಡಲಿಲ್ಲ. ಹೀಗಾಗಿ ಗೌತಮ್ ಅವರನ್ನು ಪರಿಗಣನೆಗೆ ತೆದುಕೊಳ್ಳಲಿಲ್ಲ. ಅವರ ಬದಲಿಗೆ ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿದ್ದೇವೆ ಎಂದು ಕೆಎಸ್‌ಸಿಎ ಆಯ್ಕೆ ಸಮಿತಿ ಅಧ್ಯಕ್ಷ ಜೆ. ಅಭಿರಾಮ್ ತಿಳಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಎಲೈಟ್ ಮತ್ತು ಪ್ಲೇಟ್ ಎಂಬ ಎರಡು ವಿಭಾಗಗಳು ಇರಲಿದ್ದು, ಅಗ್ರ ವಿಭಾಗದಲ್ಲಿ ಎಂಟು ತಂಡಗಳ ನಾಲ್ಕು ಗುಂಪುಗಳು ಇರಲಿವೆ ಮತ್ತು ಕೆಳಗಿನ ವಿಭಾಗವು ಆರು ತಂಡಗಳ ಒಂದು ಗುಂಪನ್ನು ಒಳಗೊಂಡಿರುತ್ತದೆ. ಎಲೈಟ್ ವಿಭಾಗದ ಒಂದು ತಂಡವು ಚಾಂಪಿಯನ್ ಆಗಲು 10 ಪಂದ್ಯಗಳನ್ನು ಆಡಬೇಕು. ಇದರಲ್ಲಿ ಏಳು ಲೀಗ್ ಪಂದ್ಯಗಳು ಸೇರಿವೆ, ನಂತರ ಕ್ವಾರ್ಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್.
ಇದನ್ನೂ ಓದಿ IND vs SA: ಡೀನ್ ಎಲ್ಗರ್ ಶತಕ; ಮುನ್ನಡೆ ಕಾಯ್ದುಕೊಂಡ ದಕ್ಷಿಣ ಆಫ್ರಿಕಾ
ನಾಲ್ಕು ಎಲೈಟ್ ಗುಂಪುಗಳಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಪ್ಲೇಟ್ ವಿಭಾಗದಲ್ಲಿ ಅಗ್ರ ನಾಲ್ಕು ತಂಡಗಳು ಸೆಮಿಫೈನಲ್ನಲ್ಲಿ ಮುಖಾಮುಖಿಯಾಗಲಿವೆ. ಪ್ಲೇಟ್ ಗ್ರೂಪ್ ಫೈನಲಿಸ್ಟ್ಗಳನ್ನು 2024-25ರ ಋತುವಿನಲ್ಲಿ ಎಲೈಟ್ ಗ್ರೂಪ್ಗೆ ಬಡ್ತಿ ನೀಡಲಾಗುತ್ತದೆ. ಎಲೈಟ್ ಗುಂಪುಗಳಿಂದ ಕೊನೆಯ ಎರಡು ತಂಡಗಳನ್ನು ಅಂಕಗಳು, ಬೋನಸ್ ಅಂಕಗಳು, ಗೆಲುವುಗಳು ಮತ್ತು ಅಂಶಗಳ ಆಧಾರದ ಮೇಲೆ ಪ್ಲೇಟ್ ಗ್ರೂಪ್ಗೆ ಪ್ರವೇಶ ಪಡೆಯುತ್ತದೆ.
ಕರ್ನಾಟಕ ತಂಡ ಮೊದಲ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಈ ಪಂದ್ಯ ಜನವರಿ 5ರಿಂದ 8ರ ವರೆಗೆ ಹುಬ್ಬಳ್ಳಿಯಲ್ಲಿ ನಡೆಯಲಿದೆ. ದ್ವಿತೀಯ ಪಂದ್ಯದಲ್ಲಿ ಅಹ್ಮದಾಬಾದ್‌ನಲ್ಲಿ ಗುಜರಾತ್ ವಿರುದ್ಧ ಆಡಲಿದೆ. ಈ ಪಂದ್ಯ ಜನವರಿ 12ರಿಂದ 15ರ ವರೆಗೆ ನಡೆಯಲಿದೆ.