ಗುವಾಹಟಿ: ಇಲ್ಲಿ ನಡೆಯುತ್ತಿರುವ ರಣಜಿ ಕ್ರಿಕೆಟ್(Ranji Trophy) ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಪೃಥ್ವಿ ಶಾ ಅಜೇಯ ದ್ವಿಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಮತ್ತೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ.
ಮಂಗಳವಾರ ಆರಂಭವಾದ ಈ ಪಂದ್ಯದಲ್ಲಿ ಮೊದಲ ದಿನವೇ ಪೃಥ್ವಿ ಶಾ ಅಜೇಯ 240 ರನ್ ಗಳಿಸಿದರು. ಇವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುಂಬೈ ತಂಡ ದಿನದಾಟದ ಅಂತ್ಯಕ್ಕೆ 90 ಓವರ್‌ಗಳಲ್ಲಿ 2 ವಿಕೆಟ್‌ನಷ್ಟಕ್ಕೆ 397 ರನ್ ಗಳಿಸಿದೆ.
ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ನಡೆಸಿದ ಪೃಥ್ವಿ ಶಾ ಒಟ್ಟು 283 ಎಸೆತಗಳನ್ನು ಎದುರಿಸಿ 33 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ದ್ವಿಶತಕ ಬಾರಿಸಿದರು. ಮುಷೀರ್ ಖಾನ್ ಜತೆ ಮೊದಲ ವಿಕೆಟ್‌ಗೆ 123 ರನ್ ಸೇರಿಸಿದ ಅವರು, ಈ ವಿಕೆಟ್ ಪತನದ ಬಳಿಕ ಮೂರನೇ ವಿಕೆಟ್‌ಗೆ ಅಜಿಂಕ್ಯ ರಹಾನೆ(ಬ್ಯಾಟಿಂಗ್ 73) ಅವರೊಂದಿಗೆ ಮುರಿಯದ 200 ರನ್ ಜತೆಯಾಟ ನಡಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಕಳೆದ 18 ತಿಂಗಳಲ್ಲಿ ಯಾವುದೇ ಮಾದರಿಯಲ್ಲೂ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದ ಅವರು ಈ ಇನಿಂಗ್ಸ್ ಮೂಲಕ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ್ದಾರೆ. ಸದ್ಯ ಬ್ಯಾಟಿಂಗ್ ಕಾಯ್ದುಕೊಂಡಿರುವ ಅವರು ದ್ವಿತೀಯ ದಿನ ದ್ವಿಶತಕವನ್ನು ತ್ರಿಶತಕವನ್ನಾಗಿ ಪರಿವರ್ತಿಸಿದರೂ ಅಚ್ಚರಿ ಇಲ್ಲ.
ಇದನ್ನೂ ಓದಿ | Ranji Trophy Final: ಶತಕ ಸಿಡಿಸಿ 900+ ರನ್‌ಗಳ ಎಲೈಟ್ ಗುಂಪು ಸೇರಿದ ಮುಂಬೈ ತಂಡದ ಸರ್ಫರಾಜ್ ಖಾನ್