ಮುಂಬಯಿ: ಕ್ರಿಕೆಟಿಗ ವಿರಾಟ್ ಕೊಹ್ಲಿ(Virat Kohli) ಅವರ ಮಗಳು ವಮಿಕಾ(Vamika Kohli) ಮೇಲೆ ಅತ್ಯಾಚಾರದ ಬೆದರಿಕೆಯೊಡ್ಡಿದ ಆರೋಪಿಗೆ ಬಾಂಬೆ ಹೈಕೋರ್ಟ್(Bombay High Court) ರಿಲೀಫ್ ನೀಡಿದೆ. ಆರೋಪಿಯ ಮೇಲೆ ದಾಖಲಾಗಿದ್ದ ಚಾರ್ಜ್‌ಶೀಟ್ ಹಾಗೂ ಎಫ್‌ಐಆರ್ ರದ್ದುಪಡಿಸಿದೆ.
2021ರಲ್ಲಿ ಭಾರತದ ಆತಿಥ್ಯದಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಹೀನಾಯ ಸೋಲು ಕಂಡಿತ್ತು. ಇದರ ಬೆನ್ನಲ್ಲೇ 23 ವರ್ಷದ ಹೈದರಾಬಾದ್‌ನ ರಾಮನಾಗೇಶ್ ಶ್ರೀನಿವಾಸ್ ಅಕುಬಾತಿನಿ ಎಂಬ ವ್ಯಕ್ತಿ ಟೀಮ್ ಇಂಡಿಯಾ ಆಟಗಾರರ ವಿರುದ್ಧ ಆಕ್ರೋಶ ಮತ್ತು ಕೊಹ್ಲಿಯ ಪುತ್ರಿ ವಮಿಕಾ ಮೇಲೆ ಲೈಂಗಿಕ ಬೆದರಿಕೆ ಹಾಕಿದ್ದ. ಈ ಸಂಬಂಧ ದಾಖಲಾಗಿದ್ದ ಎಫ್‌ಐಆರ್ ಹಾಗೂ ಚಾರ್ಜ್‌ಶೀಟ್ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ನ ನ್ಯಾಯಮೂರ್ತಿ ಗಡ್ಕರಿ ಹಾಗೂ ನ್ಯಾಯಮೂರ್ತಿ ಪಿ.ಡಿ. ನಾಯಕ್ ಅವರನ್ನೊಳಗೊಂಡ ನ್ಯಾಯಪೀಠವು ರದ್ದುಪಡಿಸಿದೆ.
ಪ್ರಕರಣದ ಹಿನ್ನೆಲೆ
ಕೊಹ್ಲಿ ನಾಯಕತ್ವದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ಎದುರು ಹೀನಾಯ ಸೋಲು ಕಂಡಿತ್ತು. ಕ್ರಿಕೆಟ್ ಅಭಿಮಾನಿಗಳು ಭಾರತ ಕ್ರಿಕೆಟ್ ತಂಡದ ಮೇಲೆ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ 11 ತಿಂಗಳ ಮಗಳು ವಮಿಕಾ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಮುಂಬೈ ಪೂಲೀಸರು ಈ ಕಿಡಿಗೇಡಿಯನ್ನು ಹೈದರಾಬಾದ್‌ನಲ್ಲಿ(Hyderabad) ಬಂಧಿಸಿದ್ದರು.
ಇದನ್ನೂ ಓದಿ IPL 2023: ಸೋತವರ ಮಧ್ಯೆ ಗೆಲುವಿಗಾಗಿ ಹೋರಾಟ
ಶ್ರೀನಿವಾಸ್ ಎಂಬಾತ ಟ್ವಿಟರ್‌ನಲ್ಲಿ ತನ್ನ ಹೆಸರನ್ನು ಬದಲಾಯಿಸಿ ಉರ್ದುವಿನಲ್ಲಿ ಹೆಸರು ಬರೆದುಕೊಂಡಿದ್ದ. ಆರಂಭದಲ್ಲಿ ಇದು ಪಾಕಿಸ್ತಾನಿಯರ ಕೆಲಸ ಎಂದು ನಂಬಲಾಗಿತ್ತು. ಆದರೆ ತನಿಖೆ ವೇಳೆ ಈತನ ನಿಜ ಬಣ್ಣ ಬಯಾಲಾಗಿತ್ತು. ಬಂಧನದ ಬಳಿಕ ಈತನನ್ನು ಹೆಚ್ಚಿನ ವಿಚಾರಣೆಗೆ ಮುಂಬೈಗೆ ಕರೆದುಕೊಂಡು ಹೋಗಲಾಗಿತ್ತು. ಮೂಲತಃ ಸಾಫ್ಟ್‌ವೇರ್ ಎಂಜನಿಯರ್ ಆಗಿರುವ ಶ್ರಿನಿವಾಸ್, ಫುಡ್ ಡೆಲಿವರಿ ಆ್ಯಪ್‌ನಲ್ಲಿ ಕೆಲಸ ಮಾಡುತ್ತಿದ್ದ. ಸದ್ಯ ಇದೀಗ ಇವರಿಗೆ ಬಾಂಬೆ ಹೈಕೋರ್ಟ್ ರಿಲೀಫ್ ನೀಡಿದೆ. ಮುಂದೆ ಈ ತರದ ತಪ್ಪನ್ನು ಮಾಡುವುದಿಲ್ಲ ಎಂದು ಶ್ರೀನಿವಾಸ್ ತಪ್ಪೊಪ್ಪಿಕೊಂಡಿದ್ದಾರೆ.