Site icon Vistara News

Rashid Khan: ಭಾರತ ವಿರುದ್ಧದ ಟಿ20 ಸರಣಿಯಿಂದ ಹೊರಬಿದ್ದ ರಶೀದ್ ಖಾನ್

Rashid Khan

ಮುಂಬಯಿ: ಭಾರತ ವಿರುದ್ಧದ ಮೊದಲ ಟಿ20 ಪಂದ್ಯ ಆರಂಭಕ್ಕೆ ಒಂದು ದಿನ ಬಾಕಿ ಇರುವಾಗಲೇ ಅಫಘಾನಿಸ್ತಾನ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್​ ಹಾಗೂ ಅನುಭವಿ ಆಟಗಾರ ರಶೀದ್​ ಖಾನ್​(Rashid Khan) ಫಿಟ್​ ಆಗದ ಕಾರಣ ಸರಣಿಯಿಂದ ಹೊರಬಿದ್ದಿದ್ದಾರೆ.

ರಶೀದ್ ಖಾನ್​ 2 ತಿಂಗಳ ಹಿಂದೆ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಂಪೂರ್ಣವಾಗಿ ಚೇತರಿಕೆ ಕಾಣದಿದ್ದರೂ ಅವರುನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ, ಆಡುವುದು ಅನುಮಾನ ಎನ್ನಲಾಗಿತ್ತು. ಇದೀಗ ಅಂತಿಮವಾಗಿ ಅವರು ಸರಣಿಯಿಂದ ಹಿಂದೆ ಹಿಂದೆ ಸರಿದಿದ್ದಾರೆ. ಮೊಹಾಲಿಯಲ್ಲಿ ಬುಧವಾರ ನಡೆದ ಪೂರ್ವ ಸುದ್ದಿಗೋಷ್ಠಿಯಲ್ಲಿ ರಶೀದ್ ಅನುಪಸ್ಥಿತಿಯನ್ನು ನಾಯಕ ಇಬ್ರಾಹಿಂ ಜದ್ರಾನ್ ದೃಢಪಡಿಸಿದರು.

ಸಂಪೂರ್ಣ ಫಿಟ್​ ಆಗಿಲ್ಲ


ರಶೀದ್​ ಖಾನ್​ ಗಾಯದಿಂದ ಚೇತರಿಕೆ ಕಂಡರೂ ಕೂಡ ಸಂಪೂರ್ಣವಾಗಿ ಫಿಟ್ ಆಗಿಲ್ಲ. ಅವರ ಅಲಭ್ಯತೆಯಲ್ಲಿಯೂ ತಂಡದಲ್ಲಿ ಸಮರ್ಥ ಆಟಗಾರರಿದ್ದಾರೆ. ನಾವು ವಿಶ್ವದ ಅತ್ಯುತ್ತಮ ಸ್ಪಿನ್ನರ್​ಗಳನ್ನು ಹೊಂದಿದ್ದೇವೆ ನಮ್ಮಲ್ಲಿ ವೇಗದ ಬೌಲರ್​ಗಳೂ ಕೂಡ ಇದ್ದಾರೆ. ಬ್ಯಾಟಿಂಗ್ ಕೌಶಲ್ಯಗಳನ್ನು ಸುಧಾರಿಸುವುದು ನಮ್ಮ ಗುರಿಯಾಗಿದೆ ಎಂದು ನಾಯಕ ಜದ್ರಾನ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಏಕದಿನ ವಿಶ್ವಕಪ್​ ಬಳಿಕ ರಶೀದ್ ಎಲ್ಲ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್​ನಿಂದ ದೂರ ಉಳಿದಿದ್ದರು. ರಶೀದ್ ಅನುಪಸ್ಥಿತಿಯಲ್ಲಿ ಅಫಘಾನಿಸ್ತಾನ ಇತ್ತೀಚೆಗೆ ಯುಎಇ ವಿರುದ್ಧ ಟಿ20 ಸರಣಿ ಆಡಿತ್ತು. ಇದನ್ನು 2-1 ಅಂತರದಿಂದ ಗೆದ್ದು ಸರಣಿ ಗೆಲುವು ಸಾಧಿಸಿತ್ತು.

ಮೊದಲ ಬಾರಿಗೆ ಭಾರತದಲ್ಲಿ ಮೂರು ಪಂದ್ಯಗಳ ಸರಣಿ ಆಡಲು ತೆರಳುತ್ತಿರುವುದು ಅಪಾರ ಸಂತಸ ತಂದಿದೆ’ ಎಂದು ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮುಖ್ಯಸ್ಥ ಮೀರ್‌ವೈಸ್ ಅಶ್ರಫ್ ಹೇಳಿದ್ದಾರೆ. ಇತ್ತೀಚಿನ ಯುಎಇ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದ ಮುಜೀಬ್‌ ಉರ್‌ ರೆಹಮಾನ್‌, ಯುಎಇ ಸರಣಿ ವೇಳೆ ಮೀಸಲು ಆಟಗಾರನಾಗಿದ್ದ ಇಕ್ರಮ್‌ ಅಲಿಖೀಲ್‌ ಮುಖ್ಯ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಅಫಘಾನಿಸ್ತಾನ ತಂಡ


ಇಬ್ರಾಹಿಂ ಝದ್ರಾನ್ (ನಾಯಕ), ರೆಹಮಾನುಲ್ಲಾ ಗುರ್ಬಾಜ್ (ವಿಕೆಟ್‌ಕೀಪರ್), ಇಕ್ರಂ ಅಲಿಖಿಲ್ (ವಿಕೆಟ್‌ ಕೀಪರ್), ಹಜರತ್‌ವುಲ್ಲಾ ಝಝೈ, ರೆಹಮತ್ ಶಾ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ, ಕರೀಂ ಜನತ್, ಅಜಮುಲ್ಲಾ ಒಮರ್‌ಝೈ, ಶರಾಫುದ್ದೀನ್ ಅಶ್ರಫ್‌, ಮುಜೀಬ್ ಉರ್ ರೆಹಮಾನ್, ಫಜಲ್ ಹಕ್ ಫಾರೂಖಿ, ಫರೀದ್ ಅಹಮದ್, ನವೀನ್ ಉಲ್ ಹಕ್, ನೂರ್‌ ಅಹಮದ್, ಮೊಹಮ್ಮದ್ ಸಲೀಂ, ಖೈಸ್ ಅಹಮದ್, ಗುಲ್ಬದೀನ್‌ ನೈಬ್‌.

Exit mobile version