Site icon Vistara News

Rashid Khan: ಗಿಲ್​ ಪಡೆಗೆ ಬಂತು ಆನೆ ಬಲ; ತಂಡಕ್ಕೆ ಮರಳಿದ ರಶೀದ್​ ಖಾನ್

Rashid Khan

ಮುಂಬಯಿ: ಗುಜರಾತ್ ಟೈಟಾನ್ಸ್(Gujarat Titans) ಮತ್ತು ಅಫ್ಘಾನಿಸ್ತಾನದ ಸ್ಟಾರ್​ ಆಲ್​ರೌಂಡರ್​​ ರಶೀದ್ ಖಾನ್(Rashid Khan) ಅವರು ಏಕದಿನ ವಿಶ್ವಕಪ್​ ಬಳಿಕ ಮೊದಲ ಬಾರಿಗೆ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ವಿಶ್ವಕಪ್‌ನಲ್ಲಿ ಬೆನ್ನುನೋವಿಗೆ ಒಳಗಾಗಿದ್ದ ರಶೀದ್​ ಖಾನ್​ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪಾಕಿಸ್ತಾನ್ ಸೂಪರ್ ಲೀಗ್ (PSL) ಮತ್ತು ಎಲ್ಲಾ ಅಂತಾರಾಷ್ಟ್ರೀಯ ಕ್ರಿಕೆಟ್ ಸೇರಿದಂತೆ ಅನೇಕ ಟಿ20 ಪಂದ್ಯಾವಳಿಗಳನ್ನು ರಶೀದ್ ತಪ್ಪಿಸಿಕೊಂಡಿದ್ದರು. ಇದೀಗ ಐಪಿಎಲ್(IPL 2024)​ ಮೂಲಕ ಮತ್ತೆ ಕಮ್​ಬ್ಯಾಕ್​ ಮಾಡಲು ಸಿದ್ಧರಾಗಿದ್ದಾರೆ.

ನಿಟ್ಟುಸಿರು ಬಿಟ್ಟ ಗುಜರಾತ್​


ರಶೀದ್​ ಖಾನ್​ ಐಪಿಎಲ್​ ಆಡಲು ಫಿಟ್​ ಆಗಿದ್ದಾರೆ ಎನ್ನುವು ಸುದ್ದಿ ಕೇಳಿ ಗುಜರಾತ್​ ಟೈಟಾನ್ಸ್​ ನಿಟ್ಟುಸಿರು ಬಿಟ್ಟಿದೆ. ಸ್ಟಾರ್​ ಆಟಗಾರ ಮೊಹಮ್ಮದ್​ ಶಮಿ ಅವರಿ ಗಾಯದಿಂದ ಟೂರ್ನಿ ಆಡುವುದು ಬಹುತೇಕ ಅನುಮಾನವಾಗಿದೆ. ರಶೀದ್​ ಖಾನ್​ ಕೂಡ ಗಾಯದಿಂದ ಈ ಬಾರಿ ಐಪಿಎಲ್​ನಲ್ಲಿ ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿತ್ತು. ಸ್ಟಾರ್​ ಆಟಗಾರರಿಬ್ಬರ ಸೇವೆ ತಂಡಕ್ಕೆ ಲಭ್ಯವಾಗುವುದಿಲ್ಲ ಎಂದು ಗುಜರಾತ್​ ತಂಡ ಚಿಂತೆಯಲ್ಲಿತ್ತು. ಇದೀಗ ರಶೀದ್​ ಲಭ್ಯರಿದ್ದಾರೆ ಎನ್ನುವ ಸುದ್ದಿ ಕೇಳಿ ತಂಡದ ಚಿಂತೆ ಕೊಂಚ ಕಡಿಮೆಯಾಗಿದೆ. ಹಾರ್ದಿಕ್​ ಪಾಂಡ್ಯ ಮುಂಬೈ ಸೇರಿದ ಕಾರಣ ಈ ಬಾರಿ ಶುಭಮನ್​ ಗಿಲ್​ ಅವರು ಗುಜರಾತ್​ ತಂಡವನ್ನು ಮುನ್ನಡೆಸಲಿದ್ದಾರೆ.

ಸದ್ಯ ರಶೀದ್ ಖಾನ್ ಶಸ್ತ್ರಚಿಕಿತ್ಸೆಯ ನಂತರ ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ರಶೀದ್ ಖಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಭಾರತ ವಿರುದ್ಧ ಇತ್ತೀಗೆಗೆ ನಡೆದಿದ್ದ 3 ಪಂದ್ಯಗಳ ಟಿ20 ಸರಣಿಗೆ ರಶೀದ್​ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನವೇ ಅವರು ಫಿಟ್​ ಆಗಿಲ್ಲ ಎಂದು ಅವರನ್ನು ಸರಣಿಯಿಂದ ಕೈ ಬಿಡಲಾಗಿತ್ತು.

ರಶೀದ್ ಖಾನ್‌ 2017ರಲ್ಲಿ ಐಪಿಎಲ್‌ ಪದಾರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ರಶೀದ್ ಒಟ್ಟು 109 ಪಂದ್ಯಗಳನ್ನು ಆಡಿದ್ದು 139 ವಿಕೆಟ್‌ ಕಬಳಿಸಿದ್ದಾರೆ. ಕಳೆದ ಎರಡು ಆವೃತ್ತಿಯಲ್ಲಿ ಸ್ಥಿರ ಬೌಲಿಂಗ್​ ಮತ್ತು ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ಗುಜರಾತ್​ಗೆ ಹಲವು ಪಂದ್ಯಗಳಲ್ಲಿ ಗೆಲುವು ತಂದು ಕೊಟ್ಟಿದ್ದರು.

ಇದನ್ನೂ ಓದಿ IPL 2024: ಡ್ರೆಸ್ಸಿಂಗ್ ರೂಮ್‌ನಲ್ಲಿ ಪೂಜೆ ಮಾಡಿ ಅಭ್ಯಾಸ ಆರಂಭಿಸಿದ ಮುಂಬೈ ನಾಯಕ ಹಾರ್ದಿಕ್​ ಪಾಂಡ್ಯ

ಗುಜರಾತ್ ಟೈಟಾನ್ಸ್ ಖರೀದಿಸಿದ ಆಟಗಾರರು: ಅಜ್ಮತುಲ್ಲಾ ಒಮರ್ಜೈ (0.5 ಕೋಟಿ), ಉಮೇಶ್ ಯಾದವ್ (5.8 ಕೋಟಿ), ಶಾರುಖ್ ಖಾನ್ (7.4 ಕೋಟಿ), ಸುಶಾಂತ್ ಮಿಶ್ರಾ (2.2 ಕೋಟಿ), ಕಾರ್ತಿಕ್ ತ್ಯಾಗಿ (0.6 ಕೋಟಿ), ಸ್ಪೆನ್ಸರ್ ಜಾನ್ಸನ್ (10 ಕೋಟಿ), ರಾಬಿನ್ ಮಿಂಜ್ (3.6 ಕೋಟಿ), ಮಾನವ್ ಸುತಾರ್ (0.2 ಕೋಟಿ).

ಗುಜರಾತ್ ಟೈಟಾನ್ಸ್ ತಂಡ: ಶುಬ್ಮನ್ ಗಿಲ್ (ನಾಯಕ), ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ವೃದ್ಧಿಮಾನ್ ಸಹಾ, ಕೇನ್ ವಿಲಿಯಮ್ಸನ್, ಅಭಿನವ್ ಮನೋಹರ್, ಬಿ ಸಾಯಿ ಸುದರ್ಶನ್, ದರ್ಶನ್ ನಲ್ಕಂಡೆ, ವಿಜಯ್ ಶಂಕರ್, ಜಯಂತ್ ಯಾದವ್, ರಾಹುಲ್ ತೆವಾಟಿಯಾ, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಸಾಯಿ ಕಿಶೋರ್, ರಶೀದ್ ಖಾನ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ, ಅಜ್ಮತುಲ್ಲಾ ಒಮರ್ಜೈ, ಉಮೇಶ್ ಯಾದವ್, ಶಾರುಖ್ ಖಾನ್, ಸುಶಾಂತ್ ಮಿಶ್ರಾ, ಕಾರ್ತಿಕ್ ತ್ಯಾಗಿ, ಸ್ಪೆನ್ಸರ್ ಜಾನ್ಸನ್, ರಾಬಿನ್ ಮಿಂಜ್, ಮಾನವ್ ಸುತಾರ್.

Exit mobile version