Site icon Vistara News

ರಶೀದ್​ ಖಾನ್​ಗೆ 10 ಕೋಟಿ ರೂ. ನಗದು ಬಹುಮಾನ ನೀಡಲಿದ್ದಾರಾ ರತನ್ ಟಾಟಾ?

ratan tata and rashid khan

ಮುಂಬಯಿ: ಪಾಕಿಸ್ತಾನ ತಂಡವನ್ನು ಸೋಲಿಸಿದ್ದಕ್ಕಾಗಿ ಅಫಘಾನಿಸ್ತಾನ ತಂಡ ಕ್ರಿಕೆಟಿಗ ರಶೀದ್​ ಖಾನ್​(Rashid Khan) ಅವರಿಗೆ 10 ಕೋಟಿ ರೂ. ನಗದು ಬಹುಮಾನ ನೀಡಲಾಗಿದೆ ಎಂಬ ಸುದ್ದಿಗೆ ಕೈಗಾರಿಕೋದ್ಯಮಿ ರತನ್ ಟಾಟಾ(Ratan Tata) ಅವರು ಸ್ಪಷ್ಟನೆ ನೀಡಿದ್ದಾರೆ. ಇದೊಂದು ಸತ್ಯಕ್ಕೆ ದೂರವಾದ ಸುದ್ದಿ ಎಂದು ಹೇಳಿದ್ದಾರೆ. ಜತೆಗೆ ಕ್ರಿಕೆಟ್​ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಮತ್ತು ವಾಟ್ಸ್​ಆ್ಯಪ್​ನಲ್ಲಿ ರತನ್ ಟಾಟಾ ಅವರು ಪಾಕಿಸ್ತಾನ ತಂಡವನ್ನು ಸೋಲಿಸಿದ್ದಕ್ಕೆ ಆಫ್ಘನ್​ ಕ್ರಿಕೆಟಿಗ ರಶೀದ್ ಖಾನ್‌ ಅವರಿಗೆ ನಗದು ಬಹುಮಾನ ನೀಡಲು ಮುಂದಾಗಿದ್ದಾರೆ ಎಂದು ಎಲ್ಲಡೆ ಸುದ್ದಿಯಾಗಿತ್ತು. ಮತ್ತು ಇದಕ್ಕೆ ಸಂಬಂಧಿಸಿದ ಹಲವು ಪೋಸ್ಟರ್​ಗಳು ಹರಿದಾಡಿತ್ತು. ಆದರೆ ತಮ್ಮ ಕುರಿತಾದ ಸುದ್ದಿಯನ್ನು ಟಾಟಾ ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ ICC World Cup 2023: ಆಫ್ಘನ್​ ತಂಡದ ಸೆಮಿ ಫೈನಲ್​ ಲೆಕ್ಕಾಚಾರ ಹೇಗಿದೆ?

ಟ್ವಿಟರ್​ ಎಕ್ಸ್‌ನಲ್ಲಿನ ಪೋಸ್ಟ್‌ಗಳ ಬಗ್ಗೆ ಟಾಟಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ‘ನನಗೂ ಕ್ರಿಕೆಟ್​ಗೂ ಯಾವುದೇ ಸಂಬಂಧವಿಲ್ಲ. ಆಟಗಾರರಿಗೆ ಬಹುಮಾನ ನೀಡುವ ಬಗ್ಗೆ ಐಸಿಸಿ ಅಥವಾ ಯಾವುದೇ ಕ್ರಿಕೆಟ್ ಮಂಡಳಿಗೆ ನಾನು ತಿಳಿಸಿಲ್ಲ. ನನ್ನ ಅಧಿಕೃತ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಈ ರೀತಿಯ ಸುದ್ದಿಗಳು ಬಾರದ ಹೊರತು, ಯಾವುದೋ ವಾಟ್ಸಾಪ್ ಫಾರ್ವರ್ಡ್‌ ಸಂದೇಶಗಳು ಮತ್ತು ಅಂತಹ ವಿಡಿಯೊಗಳಲ್ಲಿ ಬಂದ ಸುದ್ದಿಯನ್ನು ದಯವಿಟ್ಟು ನಂಬಬೇಡಿ’ ಎಂದು ಟಾಟಾ ತಿಳಿಸಿದ್ದಾರೆ.

ಇದನ್ನೂ ಓದಿ ICC World Cup 2023 : ಲಂಕಾ ಮಣಿಸಿದ ಅಫಘಾನಿಸ್ತಾನ; ವಿಶ್ವ ಕಪ್​ನಲ್ಲಿ 3ನೇ ಜಯ

ಪಾಕಿಸ್ತಾನದ ವಿರುದ್ಧ ಗೆದ್ದ ನಂತರ ರಶೀದ್ ಖಾನ್ ಅವರು ಭಾರತದ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದರು, ಈ ಬಗ್ಗೆ ಪಾಕಿಸ್ತಾನ ದೂರು ನೀಡುತ್ತಿದ್ದಂತೆ ಐಸಿಸಿ ರಶೀದ್​ ಖಾನ್​ಗೆ 55 ಲಕ್ಷ ದಂಡ ವಿಧಿಸಿದೆ ಎಂದು ಕೆಲವು ಯೂಟ್ಯೂಬ್ ಚಾನೆಲ್‌ಗಳು ಪ್ರಚಾರ ಮಾಡಿದ್ದವು. ಕ್ರೀಡಾಸ್ಫೂರ್ತಿ ತೋರಿದ ಆಟಗಾರನಿಗೆ ದಂಡ ವಿಧಿಸಲಾಗಿದೆ ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತದ ಬಗ್ಗೆ ಗೌರವ ತೋರಿ ದಂಡಕ್ಕೆ ಗುರಿಯಾದ ರಶೀದ್​ಗೆ ಟಾಟಾ ಅವರು 10 ಕೋ.ರೂ ನೀಡಲಿದ್ದಾರೆ ಎಂದು ಎಲ್ಲಡೆ ಸುದ್ದಿ ಹಬ್ಬಿತ್ತು. ಆದರೆ ಈ ಸುಳ್ಳು ಸುದ್ದಿಯನ್ನು ಟಾಟಾ ತಳ್ಳಿಹಾಕಿದ್ದಾರೆ.

8 ವಿಕೆಟ್​ ಸೋಲು ಕಂಡಿದ್ದ ಪಾಕ್​

ಅಕ್ಟೋಬರ್​ 23ರಂದು ಚೆನ್ನೈನ ಚೆಪಾಕ್ ಸ್ಟೇಡಿಯಮ್​ನಲ್ಲಿ(MA Chidambaram Stadium, Chennai) ನಡೆದಿದ್ದ ಹಣಾಹಣಿಯಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಪಾಕಿಸ್ತಾನ, ಆಫ್ಘನ್​ ಬೌಲರ್​ಗಳ ಶಿಸ್ತಿನ ದಾಳಿಗೆ ತಡೆಯೊಟ್ಟುವಲ್ಲಿ ವಿಫಲವಾಗಿ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗೆ 282 ರನ್​ ಬಾರಿಸಿತ್ತು. ಗುರಿ ಬೆನ್ನಟ್ಟಿದ ಅಪಘಾನಿಸ್ತಾನ ಕೇವಲ 2 ವಿಕೆಟ್​ ಕಳೆದುಕೊಂಡು ಇನ್ನೂ ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದು ಬೀಗಿತ್ತು. ಈ ಮೂಕಲ ಏಕದಿನ ಕ್ರಿಕೆಟ್​ ಮಾದರಿಯಲ್ಲಿ ಪಾಕ್ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿತ್ತು. ಅಫಘಾನಿಸ್ತಾನದ ಈ ಗೆಲುವನ್ನು ಭಾರತೀಯ ಅಭಿಮಾನಿಗಳು ಕೂಡ ಸಂಭ್ರಮಿಸಿದ್ದರು.

Exit mobile version