Site icon Vistara News

Ravi Bishnoi: ತವರು ತಂಡವನ್ನು ಬಿಟ್ಟು ಗುಜರಾತ್‌ ಪರ ಆಡಲು ಸಜ್ಜಾದ ರವಿ ಬಿಷ್ಣೋಯಿ

ravi bishnoi lucknow super giants

ಜೈಪುರ: ಟೀಮ್​ ಇಂಡಿಯಾದ ಯುವ ಲೆಗ್‌ಸ್ಪಿನ್ನರ್‌ ರವಿ ಬಿಷ್ಣೋಯಿ(Ravi Bishnoi) ತಮ್ಮ ದೇಶಿ ಕ್ರಿಕೆಟ್‌ ತಂಡವನ್ನು ಬದಲಾಯಿಸಿದ್ದಾರೆ. ರಾಜಸ್ಥಾನ(rajasthan team) ಬಿಟ್ಟು ಗುಜರಾತ್‌(Gujarat team) ಪರ ಆಡಲು ನಿರ್ಧರಿಸಿದ್ದಾರೆ. ಆದರೆ ಗುಜರಾತ್‌ ಕ್ರಿಕೆಟ್‌ ಮಂಡಳಿ ಬಿಷ್ಣೋಯಿ ಅವರ ಮನವಿಯನ್ನು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ. ಆದರೆ ರವಿ ಬಿಷ್ಣೋಯಿ ಮಾತ್ರ ಗುಜರಾತ್‌ ಜೆರ್ಸಿ ಧರಿಸಿ “ನ್ಯೂ ಬಿಗಿನಿಂಗ್ಸ್‌…” ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಾಕಿದ್ದಾರೆ.

ಜೋಧ್‌ಪುರ ಮೂಲದ ಲೆಗ್‌ಸ್ಪಿನ್ನರ್‌ ಆಗಿರುವ ರವಿ ಬಿಷ್ಣೋಯಿ ಭಾರತದ ಪರ 10 ಟಿ20 ಹಾಗೂ ಏಕೈಕ ಏಕದಿನ ಪಂದ್ಯವನ್ನು ಆಡಿದ್ದಾರೆ. ಐಪಿಎಲ್‌ನಲ್ಲಿ ಲಕ್ನೋ ಸೂಪರ್‌ ಜೈಂಟ್ಸ್‌(lucknow super giants) ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಬೌಲಿಂಗ್​ ಮತ್ತು ಪೀಲ್ಡಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರುವ ಅವರು ಸದ್ಯದಲ್ಲೇ ಮತ್ತೆ ಟೀಮ್​ ಇಂಡಿಯಾಕ್ಕೆ ಮರಳುವು ನಿರೀಕ್ಷೆಯಲ್ಲಿದ್ದಾರೆ.

ಕಳೆದ ರಣಜಿ ಋತುವಿನಲ್ಲಿ ಬಿಷ್ಣೋಯಿ ಅವರಿಗೆ ರಾಜಸ್ಥಾನ್‌ ಪರ ಹೆಚ್ಚಿನ ಅವಕಾಶ ಸಿಕ್ಕಿರಲಿಲ್ಲ. ತವರಿನ ಜೋಧ್‌ಪುರದಲ್ಲಿ ನಡೆದ 2 ಪಂದ್ಯಗಳಲ್ಲೂ ಅವರು ಬೆಂಚ್‌ ಕಾಯಬೇಕಾದ ಸ್ಥಿತಿ ಎದುರಾಗಿತ್ತು. ಇದು ಅವರ ಅಸಮಾಧಾನಕ್ಕೆ ಕಾರಣವಾಗಿರಬಹುದು. ಆದ್ದರಿಂದ ಅವರು ತಮ್ಮ ಕ್ರಿಕೆಟ್​ ನೆಲೆಯನ್ನು ಬದಲಾಯಿಸುಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಬೇರೆ ತಂಡದ ಪರ ಆಡುತ್ತಿರುವ ಬಗ್ಗೆ ಬಿಷ್ಟೋಯಿ ಯಾವುದೇ ಸ್ಪಷ್ಟ ಕಾರಣವನ್ನು ತಿಳಿಸಿಲ್ಲ.

ಇದನ್ನೂ ಓದಿ IPL 2023 : ಹರ್ಷಲ್​ ಎಡವಟ್ಟು ಮಾಡದಿದ್ದರೆ ಆರ್​ಸಿಬಿಗೆ ಇತ್ತು ಇನ್ನೂ ಗೆಲುವಿನ ಚಾನ್ಸ್​!

ಸದ್ಯ ರವಿ ಬಿಷ್ಣೋಯಿ ಅಹ್ಮದಾಬಾದ್‌ನಲ್ಲಿ ಗುಜರಾತ್‌ ತಂಡದ ರಣಜಿ ಪೂರ್ವ ಶಿಬಿರದಲ್ಲಿ ಪಾಲ್ಗೊಂಡಿದ್ದು ಬೌಲಿಂಗ್​ ಅಭ್ಯಾಸದಲ್ಲಿ ತೊಡಗಿದ್ದಾರೆ. ಈ ತಮಡಕ್ಕೆ ರಮೇಶ್‌ ಪೊವಾರ್‌ ಕೋಚ್‌ ಆಗಿದ್ದಾರೆ. 2022ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂಡರ್​-19 ವಿಶ್ವಕಪ್‌ ತಂಡವನ್ನು ಕೂಡ ಅವರು ಪ್ರತಿನಿಧಿಸಿದ್ದರು. ಭಾರತದ ಭವಿಷ್ಯದ ಸ್ಪಿನ್ನರ್​ ಎಂದೇ ಗುರುತಿಸಲ್ಪಟ್ಟಿರುವ ಅವರು ವಿಂಡೀಸ್​ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ.

ದೇಶೀಯ ಕ್ರಿಕೆಟ್​ನತ್ತ ಮುಖ ಮಾಡಿದ ಪೂಜಾರ

ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯದಲ್ಲಿ ತೋರಿದ ಕಳಪೆ ಬ್ಯಾಟಿಂಗ್​ ಪ್ರದರ್ಶನದಿಂದಾಗಿ ಚೇತೇಶ್ವರ್​ ಪೂಜಾರ(Cheteshwar Pujara) ಅವರನ್ನು ವೆಸ್ಟ್​ ಇಂಡೀಸ್​ ವಿರುದ್ಧದ ಟೆಸ್ಟ್​ ಸರಣಿಯಿಂದ ಕೈ ಬಿಡಲಾಗಿದೆ. ಜತೆಗೆ ಟೆಸ್ಟ್​ ತಂಡದ ಉಪನಾಯಕ ಸ್ಥಾನದಿಂದಲೂ ಕೆಳಗಿಳಿಸಿ ಈ ಸ್ಥಾನವನ್ನು ಅಜಿಂಕ್ಯ ರಹಾನೆಗೆ ನೀಡಲಾಗಿದೆ. ಈ ಎಲ್ಲ ಬೆಳವಣಿಗೆ ಬಳಿಕ ಪೂಜಾರ ಅವರು ದುಲೀಪ್​ ಟ್ರೋಫಿ(Duleep Trophy) ಆಡಲು ನಿರ್ಧರಿಸಿದ್ದಾರೆ. ಅವರು ​ಪಶ್ಚಿಮ ವಲಯ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಇವರ ಜತೆ ಸೂರ್ಯಕುಮಾರ್​ ಯಾದವ್​ ಕೂಡ ಈ ತಂಡದ ಪರ ಆಡಲಿದ್ದಾರೆ. ಈ ಟೂರ್ನಿ ಜೂನ್​ 28ರಿಂದ ಆರಂಭಗೊಳ್ಳಲಿದೆ.

ಕೆಲ ದಿನಗಳ ಹಿಂದಷ್ಟೇ ರಾಜ್​ಕೋಟ್​ನ ಮೈದಾನವೊಂದರಲ್ಲಿ ಬ್ಯಾಟಿಂಗ್​ ಅಭ್ಯಾಸ ನಡೆಸುತ್ತಿರುವ ವಿಡಿಯೊ ವೈರಲ್​ ಆಗಿತ್ತು. ಪೂಜಾರ ಅವರ ತಂದೆ ಹಾಗೂ ಕೋಚ್‌ ಕೂಡ ಆಗಿರುವ ಅರವಿಂದ್‌ ಪೂಜಾರ, “ಮಾನಸಿಕವಾಗಿ ಪೂಜಾರ ಬಲಿಷ್ಠವಾಗಿದ್ದಾನೆ. ಆಯ್ಕೆ ಕುರಿತಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವನೀಗ ದುಲೀಪ್‌ ಟ್ರೋಫಿಗಾಗಿ ಅಭ್ಯಾಸ ನಡೆಸುತ್ತಿದ್ದಾನೆ. ಮತ್ತೆ ಆತ ಟೀಮ್‌ ಇಂಡಿಯಾಕ್ಕೆ ಮರಳುವ ವಿಶ್ವಾಸವಿದೆ” ಎಂದು ಹೇಳಿದ್ದರು.

Exit mobile version