Site icon Vistara News

Virat kohli : ಸಚಿನ್​ ದಾಖಲೆ ಭೇದಿಸು; ಕೊಹ್ಲಿಗೆ ಮಾಜಿ ಕೋಚ್ ಸಲಹೆ

Vira kohli 12

ಮುಂಬಯಿ: ಸಚಿನ್ ತೆಂಡೂಲ್ಕರ್ ಅವರ 100 ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಮುರಿಯುವಂತೆ ವಿರಾಟ್ ಕೊಹ್ಲಿಗೆ (Virat kohli) ಎಂದು ಭಾರತದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಸಲಹೆ ನೀಡಿದ್ದಾರೆ. ಈ ಮೈಲಿಗಲ್ಲು ಸಾಧಿಸಲು ಕೊಹ್ಲಿಗೆ ಮಾನಸಿಕ ಮತ್ತು ದೈಹಿಕ ಶಕ್ತಿ ಇದೆ ಎಂದು ಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

“ಸಚಿನ್ ತೆಂಡೂಲ್ಕರ್ 100 ಶತಕಗಳನ್ನು ಗಳಿಸಿದಾಗ ಯಾರಾದರೂ ಹತ್ತಿರ ಬರುತ್ತಾರೆ ಎಂದು ಯಾರು ಯೋಚಿಸಿ ದ್ದರು? ವಿರಾಟ್ ಕೊಹ್ಲಿ ಖಾತೆಯಲ್ಲಿ 80 ಶತಕಗಳಿವೆ. ಅವುಗಳಲ್ಲಿ 50 ಏಕದಿನ ಪಂದ್ಯಗಳಲ್ಲಿ ದಾಖಲಿಸಿದ್ದಾರೆ. ಹೀಗಾಗಿ ಕೊಹ್ಲಿ 100 ಶತಕಗಳನ್ನು ಬಾರಿಸುತ್ತಾರೆ ಎಂಬುದು ಅವಾಸ್ತವಿಕವಲ್ಲ. ಅವರಿಗೆ ಆ ಅವಕಾಶಗಳಿವೆ ಎಂಬುದಾಗಿ ರವಿ ಶಾಸ್ತ್ರಿ ಹೇಳಿದ್ದಾರೆ.

ಕೊಹ್ಲಿಗೆ ಅಸಾಧ್ಯ ಏನೂ ಇಲ್ಲ

ಕೊಹ್ಲಿಯಂಥ ಆಟಗಾರರಿಗೆ ಅಸಾಧ್ಯವಾದುದು ಯಾವುದೂ ಇಲ್ಲ ಎಂದು ಟೀಮ್ ಇಂಡಿಯಾದ ಮಾಜಿ ಕೋಚ್ 35 ವರ್ಷದ ಆಟಗಾರನನ್ನು ಶ್ಲಾಘಿಸಿದ್ದಾರೆ. ವಿರಾಟ್ ಕೊಹ್ಲಿಯ ಸಾಮರ್ಥ್ಯದ ಆಟಗಾರ ಏನು ಬೇಕಾದರೂ ಸಾಧಿಸಬಹುದು ಎಂದು ಹೇಳಿದ್ದಾರೆ.

“ಯಾವುದೂ ಅಸಾಧ್ಯವಲ್ಲ. ಏಕೆಂದರೆ ಅಂತಹ ಆಟಗಾರರು ಅವರು. ಕೊಹ್ಲಿ ಶತಕಗಳನ್ನು ಗಳಿಸಲು ಪ್ರಾರಂಭಿಸಿದಾಗ ಬಹಳ ಬೇಗನೆ ಗಳಿಸುತ್ತಾರೆ. ಅವರ ಮುಂದಿನ 10 ಹತ್ತು ಇನಿಂಗ್ಸ್​ಗಳಲ್ಲಿ ನೀವು ಇನ್ನೂ ಐದು ಶತಕಗಳನ್ನು ನೋಡಬಹುದು. ಅವರು ಆಟದ ಮೂರು ಸ್ವರೂಪಗಳಲ್ಲೂ ಆಡಬಲ್ಲರು. ಅವರು ಆ ಎಲ್ಲಾ ಸ್ವರೂಪಗಳ ಭಾಗವಾಗಲಿದ್ದಾರೆ. ಅವರಿಗೆ ಇನ್ನೂ ಮೂರು ಅಥವಾ ನಾಲ್ಕು ವರ್ಷಗಳ ಕ್ರಿಕೆಟ್ ಆಡುವ ಅವಕಾಶವಿದೆ ಎಂದು ಶಾಸ್ತ್ರಿ ಹೇಳಿದರು.

ಇದನ್ನೂ ಓದಿ: Virat kohli: ಕೊಹ್ಲಿಗೆ 100 ಶತಕಗಳ ಸಚಿನ್ ದಾಖಲೆ ಮುರಿಯಲು ಸಾಧ್ಯವೆ? ಲೆಕ್ಕಾಚಾರ ಹೀಗಿದೆ!

ವಿಶ್ವಕಪ್​ನ ಹಾಲಿ ಆವೃತ್ತಿಯಲ್ಲಿ ಕೊಹ್ಲಿ ಹೆಚ್ಚು ಶಾಂತ ಮತ್ತು ಸಂಯೋಜಿತರಾಗಿದ್ದಾರೆ. ಇದು ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಅವರಿಗೆ ಸಹಾಯ ಮಾಡಿದೆ ಎಂದು ಶಾಸ್ತ್ರಿ ಹೇಳಿದರು.

“ಈ ವಿಶ್ವಕಪ್​ನಲ್ಲಿ ಅವರ ಸಂಯಮ, ಅವರ ದೇಹ ಭಾಷೆ ವಿಶೇಷವಾಗಿದೆ. ಕ್ರೀಸ್​ನಲ್ಲಿ ಅವರ ಶಾಂತವಾಗಿದ್ದಾರೆ. ಹಿಂದಿನ ವಿಶ್ವಕಪ್​ನಲ್ಲಿ ಅವರು ತುಂಬಾ ಆಕ್ರಮಣಕಾರಿಯಾಗಿದ್ದರು. ಆಧರೆ ಈ ಬಾರಿ ಅಂಥ ಯಾವುದೇ ವರ್ತನೆಗಳು ಇಲ್ಲ. ತಮ್ಮ ಜಾಗರೂಕತೆಯನ್ನು ಗುರುತಿಸಿದ್ದಾರೆ. ಒತ್ತಡವನ್ನು ನಿಭಾಯಿಸಿದ್ದಾರೆ. ಇನಿಂಗ್ಸ್​ಗಳಲ್ಲಿ ಆಳವಾಗಿ ಇಳಿದು ಬ್ಯಾಟಿಂಗ್ ಮಾಡುವ ತಮ್ಮ ಪಾತ್ರವನ್ನು ಅರ್ಥಮಾಡಿಕೊಂಡಿದ್ದಾರೆ ಎಂದು ಶಾಸ್ತ್ರಿ ನೀಡಿದ್ದಾರೆ.

ನೀನು ದೇವರ ಮಗು’ ಕೊಹ್ಲಿಗೆ ಅನುಷ್ಕಾ ಭಾವುಕ ಸಂದೇಶ

ಮುಂಬಯಿ: ಸಚಿನ್‌ ತೆಂಡೂಲ್ಕರ್‌ ಅವರ ಸಮ್ಮುಖದಲ್ಲೇ, ಅವರು ಆಡಿ ಬೆಳೆದ ಮುಂಬಯಿ ಖಾಂಖೆಡೆ ಸ್ಟೇಡಿಯಂನಲ್ಲೇ ವಿರಾಟ್‌ ಕೊಹ್ಲಿ(virat kohli) 50ನೇ ಶತಕ ಬಾರಿಸಿ ಸಚಿನ್​ ಅವರ ದಾಖಲೆ ಮುರಿದಿದ್ದಾರೆ. ಬುಧವಾರ ನಡೆದ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ಕೊಹ್ಲಿ ಈ ಸಾಧನೆ ಮಾಡಿದರು. ಅವರ ಈ ಸಾಹಸಕ್ಕೆ ಸ್ವತಃ ಸಚಿನ್​ ಸೇರಿ ಅನೇಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಆದರೆ ಪತ್ನಿ ಅನುಷ್ಕಾ ಶರ್ಮ(Anushka Sharma) ಅವರು ಮೆಚ್ಚುಗೆ ಸೂಚಿಸಿ ಮಾಡಿರುವ ಪೋಸ್ಟ್​ ಎಲ್ಲರ ಮನಗೆದ್ದಿದೆ.

ಅನುಷ್ಕಾ ಶರ್ಮ(Virat And Anushka) ಅವರು ತಮ್ಮ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಪತಿಯ ಸಾಧನೆಯ ಬಗ್ಗೆ ಬರೆದುಕೊಂಡು, ದೇವರ ಮಗು ಎಂದು ಹೇಳಿದ್ದಾರೆ. “ದೇವರು ಅತ್ಯುತ್ತಮ ಸ್ಕ್ರಿಪ್ಟ್ ರೈಟರ್! ನನಗೆ ನಿಮ್ಮ ಪ್ರೀತಿಯ ಆಶೀರ್ವಾದ ಸಿಕ್ಕಿರುವ ಜತೆಗೆ ಕೊಹ್ಲಿಯ ಪ್ರೀತಿ ಕೂಡ ಸಿಗುವಂತೆ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ಮುಂದಿನ ದಿನಗಳಲ್ಲಿ ಕೊಹ್ಲಿ​ ಮತ್ತಷ್ಟು ಎತ್ತರಕ್ಕೆ ಬೆಳೆದು ಯಶಸ್ಸು ಸಾಧಿಸಲಿ, ಬೆಳವಣಿಗೆ ಹೊಂದಲಿ. ನಿಜವಾಗಿಯೂ ನೀವು ದೇವರ ಮಗು” ಎಂದು ಅನುಷ್ಕಾ ಬರೆದುಕೊಂಡಿದ್ದಾರೆ.

ಫ್ಲೈಯಿಂಗ್ ಕಿಸ್​ ಕೊಟ್ಟ ಅನುಷ್ಕಾ

ವಿರಾಟ್ ಕೊಹ್ಲಿ (Virat Kohli) ತಮ್ಮ 50 ನೇ ಏಕದಿನ ಶತಕವನ್ನು ಗಳಿಸುತ್ತಿದ್ದಂತೆ ಇಡೀ ದೇಶವು ಶಹಬ್ಬಾಸ್​ಗಿರಿ ನೀಡಿತು. ಈ ವೇಳೆ ಸ್ಟೇಡಿಯಮ್​ನ ಗ್ಯಾಲರಿಯಲ್ಲಿದ್ದ ಅವರ ಪತ್ನಿ ಮತ್ತು ಅವರ ಪಾಲಿನ ಅತಿದೊಡ್ಡ ಚಿಯರ್ ಲೀಡರ್ ಅನುಷ್ಕಾ ಶರ್ಮಾ ಆನಂದಭಾಷ್ಪ ಸುರಿಸಿದರು. ಜತೆಗೆ ನೂರಾರು ಫ್ಲೈಯಿಂಗ್ ಕಿಸ್​ ಕೊಟ್ಟು ಖುಷಿ ಪಟ್ಟರು.

ಕೊಹ್ಲಿ ತಮ್ಮ 100ನೇ ರನ್ ಗಳಿಸುತ್ತಿದ್ದಂತೆ, ಅನುಷ್ಕಾ ಕ್ರೀಡಾಂಗಣದಲ್ಲಿ ಭಾವನಾತ್ಮಕ ಕ್ಷಣವನ್ನು ಅನುಭವಿಸಿದರು. ಅವರು ತನ್ನ ಗಂಡನಿಗೆ ಸಾವಿರ ಮುತ್ತುಗಳನ್ನು ಗಾಳಿಯಲ್ಲಿ ರವಾನಿಸುವ ವೇಳೆ ಕ್ಯಾಮೆರಾಗಳು ಅವರ ಸಂತಸದ ಕಣ್ಣೀರು ತುಂಬಿದ ಕಣ್ಣುಗಳನ್ನು ಸೆರೆಹಿಡಿದವು. ವಿರಾಟ್ ಕೂಡ ಅವರನ್ನು ನೋಡಿ ಪತ್ನಿಗೆ ಪ್ರೀತಿಯ ಮುತ್ತುಗಳನ್ನು ಕಳುಹಿಸಿದ್ದರು.

Exit mobile version