ಬೆಂಗಳೂರು: ಭಾನುವಾರ ನಡೆದ ವಿಶ್ವಕಪ್ನ ಕೊನೆಯ ಲೀಗ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ(Ravindra Jadeja) ಅವರು 2 ವಿಕೆಟ್ ಪಡೆಯುವ ಮೂಲಕ ದಾಖಲೆಯೊಂದನ್ನು ಬರೆದಿದ್ದಾರೆ. ವಿಶ್ವಕಪ್ ಆವೃತ್ತಿಯೊಂದರಲ್ಲಿ ಅತ್ಯಧಿಕ ವಿಕೆಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡಿದ್ದಾರೆ.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್ಗಳನ್ನು ಗಳಿಸುತ್ತಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 40 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್ಗಳಲ್ಲಿ 250 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್ ಶರ್ಮ
ಕುಂಬ್ಳೆ-ಯುವರಾಜ್ ದಾಖಲೆ ಪತನ
ರವೀಂದ್ರ ಜಡೇಜಾ ಅವರು ಈ ಪಂದ್ಯದಲ್ಲಿ 9 ಓವರ್ ಬೌಲಿಂಗ್ ನಡೆಸಿ 49 ರನ್ ವೆಚ್ಚದಲ್ಲಿ 2 ವಿಕೆಟ್ ಕಿತ್ತು ಮಿಂಚಿದರು. ಅವರು 2 ವಿಕೆಟ್ ಪಡೆಯುತ್ತಿದ್ದಂತೆ ಮಾಜಿ ಆಟಗಾರರಾದ ಯುವರಾಜ್ ಸಿಂಗ್ ಮತ್ತು ಅನಿಲ್ ಕುಂಬ್ಳೆ ಅವರ ದಾಖಲೆಯೊಂದು ಪತನಗೊಂಡಿತು. ಜಡೇಜಾ ಅವರು ಈ ಆವೃತ್ತಿಯ ವಿಶ್ವಕಪ್‌ನಲ್ಲಿ 16 ವಿಕೆಟ್ ಪಡೆದ ಸಾಧನೆಯೊಂದಿಗೆ ಈ ಹಿಂದೆ ಕುಂಬ್ಳೆ ಮತ್ತು ಯುವರಾಜ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಯುವಿ ಮತ್ತು ಕುಂಬ್ಳೆ ವಿಶ್ವಕಪ್ ಆವೃತ್ತಿಯೊಂದರಲ್ಲಿ 15 ವಿಕೆಟ್ ಕಿತ್ತ ಸಾಧನೆ ಮಾಡಿದ್ದರು. ಕುಂಬ್ಳೆ ಅವರು 1996ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರೆ, ಯುವರಾಜ್ 2011ರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ್ದರು.
ರೇಸ್ನಲ್ಲಿ ಕುಲ್ದೀಪ್
ಈ ಸಾಧಕರ ಪಟ್ಟಿಯಲ್ಲಿ ಕುಲ್ದೀಪ್ ಯಾದವ್ ಅವರು ಜಡೇಜಾ ಜತೆ ರೇಸ್ನಲ್ಲಿದ್ದಾರೆ. ಸದ್ಯ ಕುಲ್ದೀಪ್ 14 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸೆಮಿಫೈನಲ್ನಲ್ಲಿ ಹೆಚ್ಚಿನ ವಿಕೆಟ್ ಪಡೆದರೆ ಎರಡೇ ದಿನಗಳ ಅಂತರದಲ್ಲಿ ಜಡೇಜಾ ಅವರ ದಾಖಲೆ ಪತನಗೊಳ್ಳಲಿದೆ.
ಭಾರತ ಪರ ವಿಶ್ವಕಪ್ಕಪ್ನಲ್ಲಿ ಅತ್ಯಧಿಕ ವಿಕಟ್
33 ವರ್ಷದ ಮೊಹಮ್ಮದ್ ಶಮಿ ಅವರು ಕಳೆದ ಲಂಕಾ ವಿರುದ್ಧ 5 ವಿಕೆಟ್ ಕೀಳುವ ಮೂಲಕ ಭಾರತ ಪರ ವಿಶ್ವಕಪ್‌ನಲ್ಲಿ ಅತ್ಯಧಿಕ ವಿಕಟ್ ಕಿತ್ತ ಮೊದಲ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇದಕ್ಕೂ ಮುನ್ನ ಈ ದಾಖಲೆ ಜಂಟಿಯಾಗಿ ಜಹೀರ್ ಖಾನ್ ಮತ್ತು ಜಾವಗಲ್ ಶ್ರೀನಾಥ್ ಅವರ ಹೆಸರಿನಲ್ಲಿತ್ತು. ಜಹೀರ್ ಮತ್ತು ಶ್ರೀನಾಥ್ ತಲಾ 44 ವಿಕೆಟ್ ಪಡೆದಿದ್ದರು. ಆದರೆ ಈಗ ಶಮಿ 47* ವಿಕೆಟ್ ಪಡೆಯುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ. 35 ವಿಕೆಟ್ ಪಡೆದಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರಿಗೂ ಜಹೀರ್ ಮತ್ತು ಶ್ರೀನಾಥ್ ದಾಖಲೆ ಮುರಿಯುವ ಅವಕಾಶವಿದೆ. ಈ ದಾಖಲೆ ಮುರಿಯಲು ಬುಮ್ರಾಗೆ ಇನ್ನು 9 ವಿಕೆಟ್ ಬೇಕಿದೆ.
ಒಂದೇ ಆವೃತ್ತಿಯಲ್ಲಿ 4 ಪ್ಲಸ್ ವಿಕೆಟ್ ಸಾಧನೆ
ವಿಶ್ವಕಪ್ ಟೂರ್ನಿಯ ಆವೃತ್ತಿಯೊಂದರಲ್ಲಿ ಗರಿಷ್ಠ 4 ಪ್ಲಸ್ ವಿಕೆಟ್ ಗೊಂಚಲು ಪಡೆದ ಸಾಧಕರ ಪಟ್ಟಿಯಲ್ಲಿ ಮೊಹಮ್ಮದ್ ಶಮಿಗೆ 3ನೇ ಸ್ಥಾನ. 2019ರ ವಿಶ್ವಕಪ್ ಟೂರ್ನಿಯಲ್ಲಿ ಶಮಿ 3 ಬಾರಿ 4 ಪ್ಲಸ್ ವಿಕೆಟ್ ಕಬಳಿಸಿದ್ದರು. ಈ ಬಾರಿ 3 ಬಾರಿ 4 ಪ್ಲಸ್ ವಿಕೆಟ್ ಸಾಧನೆ ಮಾಡಿದ್ದಾರೆ. ಈ ಸಾಧಕರ ಪಟ್ಟಿಯಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಶಾಹೀದ್ ಅಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಅವರು ಶಾಹಿದ್ ಆಫ್ರಿದಿ(2011) 4 ಬಾರಿ ಈ ಸಾಧನೆ ಮಾಡಿದ್ದಾರೆ.