Site icon Vistara News

Ravindra Jadeja: ಕಪಿಲ್ ದೇವ್ ಸೇರಿ ಹಲವು ದಿಗ್ಗಜರ ಜತೆ ಎಲೈಟ್​ ಪಟ್ಟಿ ಸೇರಲು ಸಜ್ಜಾದ ಜಡೇಜಾ

ravindra jadeja

ಹೈದರಾಬಾದ್​: ಭಾರತ ಮತ್ತು ಇಂಗ್ಲೆಂಡ್(England tour of India, 2024)​ ನಡುವಣ ಟೆಸ್ಟ್ ಸರಣಿ(India vs England, 1st Test) ಜನವರಿ 25ರಿಂದ ಆರಂಭಗೊಳ್ಳಲಿದೆ. ಈ ಸರಣಿಯಲ್ಲಿ ಕೇವಲ 2 ವಿಕೆಟ್​ ಕಿತ್ತರೆ ರವೀಂದ್ರ ಜಡೇಜಾ(Ravindra Jadeja) ಅವರು ವಿಶೇಷ ದಾಖಲೆಯೊಂದನ್ನು ನಿರ್ಮಿಸಲಿದ್ದಾರೆ. ಮೂರು ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ ಸೇರಿ 550ನೇ ವಿಕೆಟ್​ ಕಿತ್ತ ಸಾಧನೆ ಮಾಡಲಿದ್ದಾರೆ.

ಸದ್ಯ ಜಡೇಜಾ 548 ಅಂತಾರಾಷ್ಟ್ರೀಯ ವಿಕೆಟ್ ಕಲೆಹಾಕಿದ್ದಾರೆ. ಏಕದಿನದಲ್ಲಿ 220, ಟೆಸ್ಟ್​ನಲ್ಲಿ ​275, ಟಿ20ಯಲ್ಲಿ 53 ವಿಕೆಟ್​ ಕಿತ್ತಿದ್ದಾರೆ. 550 ವಿಕೆಟ್​ ಪೂರ್ತಿಗೊಳಿಸಿದರೆ ಈ ಸಾಧನೆ ಮಾಡಿದ ಭಾರತದ 7ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ. ಇಲ್ಲಿಯವರೆಗೆ ಅನಿಲ್ ಕುಂಬ್ಳೆ, ಕಪಿಲ್ ದೇವ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಆರ್. ಅಶ್ವಿನ್ ಮತ್ತು ಜಾವಗಲ್​ ಶ್ರೀನಾಥ್ ಮಾತ್ರ ಈ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ R Ashwin: 500 ಟೆಸ್ಟ್​ ವಿಕೆಟ್​ ಸಾಧನೆಗೆ ಅಶ್ವಿನ್​ಗೆ ಬೇಕಿದೆ ಬೆರಳೆಣಿಕೆಯ ವಿಕೆಟ್​​

35 ವರ್ಷದ ಜಡೇಜಾ ಸದ್ಯ ಉತ್ತಮ ಫಾರ್ಮ್​ನಲ್ಲಿದ್ದಾರೆ. ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಶ್ರೇಷ್ಠ ಸಾಧನೆ ತೋರುತ್ತಿದ್ದಾರೆ. ಅದರಲ್ಲೂ ತವರಿನಲ್ಲಿ ಉತ್ತಮ ಬೌಲಿಂಗ್​ ದಾಖಲೆ ಹೊಂದಿದ್ದಾರೆ. ಇಂಗ್ಲೆಂಡ್ ವಿರುದ್ಧ 16 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 51 ವಿಕೆಟ್ ಉರುಳಿಸಿದ್ದಾರೆ. ಈ ಬಾರಿಯ ಸರಣಿಯಲ್ಲೂ ಜಡೇಜಾ ಸ್ಪಿನ್​ ಜಾದು ಮಾಡುವ ನಿರೀಕ್ಷೆ ಇದೆ. ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಜಡೇಜಾ ಅಭ್ಯಾಸದ ವೇಳೆ ಗಾಯಕ್ಕೀಡಾಗಿ ಮೊದಲ ಟೆಸ್ಟ್​ ಪಂದ್ಯ ಆಡಿರಲಿಲ್ಲ. ದ್ವಿತೀಯ ಪಂದ್ಯದಲ್ಲಿ ಕಣಕ್ಕಿಳಿದ್ದರು. ಆದರೆ, ಈಗ ಅವರು ಫಿಟ್​ ಆಗಿದ್ದು ಯಾವುದೇ ಗಾಯದ ಆತಂಕವಿಲ್ಲ.

2 ಟೆಸ್ಟ್​ ಪಂದ್ಯಕ್ಕೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್‌ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಕೆಎಲ್ ರಾಹುಲ್, ಕೆಎಸ್ ಭರತ್ (ವಿ.ಕೀ), ಧ್ರುವ್ ಜುರೆಲ್ (ವಿ.ಕೀ), ಆರ್ ಅಶ್ವಿನ್, ಆರ್ ಜಡೇಜಾ, ಅಕ್ಸರ್ ಪಟೇಲ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಮುಖೇಶ್ ಕುಮಾರ್, ಜಸ್​ಪ್ರೀತ್​ ಬುಮ್ರಾ (ಉಪನಾಯಕ), ಅವೇಶ್ ಖಾನ್.

ವೇಳಾಪಟ್ಟಿ


ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)

ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)

ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್​ಕೋಟ್)

ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)

ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)

Exit mobile version