Site icon Vistara News

Ravindra Jadeja | ಗುಜರಾತ್​ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಪತ್ನಿ ರಿವಾಬಾಗೆ ವಿಶೇಷ ರೀತಿಯಲ್ಲಿ ಶುಭ ಕೋರಿದ ರವೀಂದ್ರ ಜಡೇಜಾ

ravindra jadeja

ಜಾಮ್​ನಗರ: ಭಾರತ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಜಡೇಜಾ, ಜಾಮ್‌ನಗರ ಕ್ಷೇತ್ರದಲ್ಲಿ ಜಯ ಸಾಧಿಸಿದ್ದರು. ಬಿಜೆಪಿಯಿಂದ ಸ್ಪರ್ಧಿಸಿರುವ ಅವರು ಒಟ್ಟು ೪೯೬೧೪ ಮತಗಳನ್ನು ಪಡೆದು ಸಮೀಪದ ಪ್ರತಿಸ್ಪರ್ಧಿ ಆಪ್‌ನ ಕುರ್ಮುರ್‌ ವಿರುದ್ಧ (೨೨೩೬೪ ಮತಗಳು) ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಇದೀಗ ಪತ್ನಿ ಚುನಾವಣೆಯಲ್ಲಿ ಗೆದ್ದ ಬಳಿಕ ಜಡೇಜಾ ಅವರು ರಿವಾಬಾ ಅವರಿಗೆ ಟ್ವೀಟ್​ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ.

ಪತ್ನಿಯ ಜತೆ ಇರುವ ಪೋಟೊವನ್ನು ಟ್ವೀಟ್​ ಮಾಡುವ ಮೂಲಕ “ಹಲೋ ಎಂಎಲ್ಎ, ನೀವು ನಿಜವಾಗಿಯೂ ಇದಕ್ಕೆ ಅರ್ಹರು, ಜಾಮ್​ನಗರದ ಜನರು ಗೆದ್ದಿದ್ದಾರೆ. ಎಲ್ಲರಿಗೂ ನನ್ನ ಕೃತಜ್ಞತೆಗಳು. ಜಾಮ್​ನಗರದ ಕಾಮಗಾರಿಗಳು ಉತ್ತಮವಾಗಿ ನಡೆಯಲಿ. ಜೈ ಮಾತಾಜಿ” ಎಂದು ಗುಜರಾತಿ ಭಾಷೆಯಲ್ಲಿ ಸಂದೇಶವನ್ನು ಹಂಚಿಕೊಂಡಿದ್ದಾರೆ.

ಇದೇ ಮೊದಲ ಬಾರಿ ಚುನಾವಣಾ ಕಣಕ್ಕೆ ಪ್ರವೇಶಿಸಿದ್ದ ರಿವಾಬಾ ಜಡೇಜ ಅವರು ಶೇಕಡಾ ೫೪.೯೪ರಷ್ಟು ಮತಗಳನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದರು. ರವೀಂದ್ರ ಜಡೇಜಾ ಅವರು ಪತ್ನಿಯ ಪರವಾಗಿ ರೋಡ್‌ ಶೋಗಳನ್ನು ನಡೆಸಿ ಪ್ರಚಾರ ಮಾಡಿದ್ದರು.

ಇದನ್ನೂ ಓದಿ | Ravindra Jadeja | ಪತ್ನಿಯ ಎಲೆಕ್ಷನ್​ ಕ್ಯಾಂಪೇನ್​ಗೆ ಹಾಜರ್​, ಕ್ರಿಕೆಟ್​ ಸರಣಿಗೆ ಚಕ್ಕರ್​; ಟೀಕೆಗೆ ಒಳಗಾದ ಜಡೇಜಾ ​

Exit mobile version