Site icon Vistara News

Ravindra Jadeja : ನಾಗ್ಪುರ ಪಿಚ್​ ಹೆಚ್ಚು ತಿರುವು ಪಡೆಯುತ್ತಿರಲಿಲ್ಲ ಎಂದ ರವೀಂದ್ರ ಜಡೇಜಾ

Ravindra jadeja

ನಾಗ್ಪುರ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್​ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡದ ಸ್ಪಿನ್​ ಬೌಲರ್​​ ರವೀಂದ್ರ ಜಡೇಜಾ (Ravindra Jadeja) 47 ರನ್​ಗಳಿಗೆ 5 ವಿಕೆಟ್​ ಕಬಳಿಸಿದ್ದಾರೆ. ಗಾಯದ ಸಮಸ್ಯೆ ಹಾಗೂ ಶಸ್ತ್ರ ಚಿಕಿತ್ಸೆ ಮುಗಿಸಿಕೊಂಡು ತಂಡಕ್ಕೆ ವಾಪಸಾಗಿರುವ ರವೀಂದ್ರ ಜಡೇಜಾ ಮೊದಲ ಹಣಾಹಣಿಯಲ್ಲೇ ಐದು ವಿಕೆಟ್​ಗಳ ಸಾಧನೆ ಮಾಡಿದ್ದಾರೆ. ನಾಗ್ಪುರ ಪಿಚ್​ ಹೆಚ್ಚು ತಿರುವು ಪಡೆದುಕೊಂಡಿದ್ದೇ ಜಡೇಜಾಗೆ ಹೆಚ್ಚು ವಿಕೆಟ್​ಗಳು ಸಿಗಲು ಕಾರಣ ಎಂಬುದಾಗಿ ವಿಶ್ಲೇಷಣೆ ಮಾಡಲಾಗುತ್ತಿದೆ. ಆದರೆ, ಪಿಚ್​ ಹೆಚ್ಚು ತಿರುವು ಪಡೆಯುತ್ತಿತ್ತು ಎಂಬ ವಾದ ಮತ್ತು ಆಸ್ಟ್ರೇಲಿಯಾ ತಂಡದ ಹಿರಿಯ ಆಟಗಾರರ ಟೀಕೆಗಳಿಗೆ ಜಡೇಜಾ ಕಡ್ಡಿ ಮುರಿದಂತೆ ಉತ್ತರ ಕೊಟ್ಟಿದ್ದಾರೆ. ನೀವೆಲ್ಲ ಅಂದುಕೊಂಡ ರೀತಿಯಲ್ಲಿ ಪಿಚ್ ಹೆಚ್ಚು ತಿರುವು ಪಡೆಯುತ್ತಿರಲಿಲ್ಲ, ನನ್ನ ಬುದ್ಧಿವಂತಿಕೆ ಬಳಸಿ ವಿಕೆಟ್​ ಕಬಳಿಸಿದ್ದೇನೆ ಎಂಬುದಾಗಿ ಅವರು ಹೇಳಿದ್ದಾರೆ.

ನಾಗ್ಪುರ ಪಿಚ್​ ದೊಡ್ಡ ಮಟ್ಟದ ತಿರುವು ಪಡೆಯುತ್ತಿರಲಿಲ್ಲ. ಲೊ ಬೌನ್ಸರ್​ ಬಿಟ್ಟರೆ ಬೇರೆನೂ ಅನುಕೂಲಗಳು ಇರಲಿಲ್ಲ. ಉಳಿದಂತೆ ಸಾಮಾನ್ಯ ಪಿಚ್​ನಂತೆ ಇತ್ತು. ಆದರೆ, ನಾನು ಕ್ರೀಸ್​ನಲ್ಲಿ ನಾನಾ ತಂತ್ರಗಳನ್ನು ಬಳಸುವ ಮೂಲಕ ಆಸ್ಟ್ರೇಲಿಯಾ ತಂಡದ ವಿಕೆಟ್​ಗಳನ್ನು ಉರುಳಿಸಿದೆ ಎಂಬುದಾಗಿ ಪಂದ್ಯ ಮುಗಿದ ಬಳಿಕದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದ್ದಾರೆ.

ಇದನ್ನೂ ಓದಿ : Ravindra jadeja : ಮತ್ತೆ ಭಾರತ ತಂಡದ ಜೆರ್ಸಿ ಧರಿಸಲು ಹೆಮ್ಮೆ ಎನಿಸುತ್ತದೆ ಎಂದ ರವೀಂದ್ರ ಜಡೇಜಾ

ಲೋಬೌನ್ಸರ್​ ಬೀಳುತ್ತಿರುವುದರಿಂದ ಬ್ಯಾಟರ್​ಗಳಿಗೆ ಗೊಂದಲ ಮೂಡಿಸಿದೆ. ಪ್ರತಿಯೊಂದು ಎಸೆತವೂ ಟರ್ನ್​ ತೆಗೆದುಕೊಳ್ಳದ ಕಾರಣ ಬ್ಯಾಟರ್​ಗಳು ತಪ್ಪು ಮಾಡುವಂತೆ ನೋಡಿಕೊಂಡು ವಿಕೆಟ್​ಗಳನ್ನು ಕಬಳಿಸಿದೆ ಎಂದು ಜಡೇಜಾ ಹೇಳಿದ್ದಾರೆ.

ಭಾರತ ತಂಡದ ಸ್ಪಿನ್ನರ್​ಗಳಿಗೆ ಅನುಕೂಲವಾಗುವ ಪಿಚ್​ಗಳನ್ನು ಸಿದ್ಧಪಡಿಸುವ ಮೂಲಕ ಭಾರತ ತಂಡ ಸರಣಿ ಗೆಲುವಿಗೆ ಯೋಜನೆ ರೂಪಿಸಿಕೊಂಡಿದೆ ಎಂಬುದಾಗಿ ಆಸ್ಟ್ರೇಲಿಯಾದ ಹಿರಿಯ ಆಟಗಾರರು ಆರೋಪಿಸುತ್ತಿದ್ದಾರೆ. ಇದೇ ವಿಚಾರವಾಗಿ ಎರಡೂ ದೇಶಗಳ ಹಿರಿಯ ಆಟಗಾರರ ನಡುವೆ ವಾಕ್ಸಮರ ನಡೆಯುತ್ತಲೇ ಇದೆ.

Exit mobile version