Site icon Vistara News

Ravindra Jadeja : ರವೀಂದ್ರ ಜಡೇಜಾ ಟೀಮ್​ ಇಂಡಿಯಾದ ಉಪನಾಯಕನಾಗಬೇಕು ಎಂದು ಸಲಹೆ ಕೊಟ್ಟ ಮಾಜಿ ಸ್ಪಿನ್ನರ್​

Ravindra Jadeja

#image_title

ನವ ದೆಹಲಿ: ಕನ್ನಡಿಗ ಕೆ. ಎಲ್​ ರಾಹುಲ್​ ಭಾರತ ಟೆಸ್ಟ್​ ತಂಡದಿಂದ ಕೊಕ್​ ಕೊಡಲಾಗಿದೆ. ಹೀಗಾಗಿ ಆ ಸ್ಥಾನ ಖಾಲಯಿದೆ. ಬಿಸಿಸಿಐ ಮುಂದಿನ ಎರಡು ಪಂದ್ಯಗಳಿಗೆ ತಂಡ ಘೋಷಿಸುವಾಗ ಕೆ. ಎಲ್​ ರಾಹುಲ್ ಅವರಿಗೆ ನೀಡಲಾಗಿದ್ದ ಉಪನಾಯಕನ ಪಟ್ಟವನ್ನು ತೆಗೆದಿದೆಯೇ ಹೊರತು ಬೇರೊಬ್ಬರನ್ನು ಸೂಚಿಸಿಲ್ಲ. ಹೀಗಾಗಿ ಯಾರಾಗಬೇಕು ಎಂದು ಚರ್ಚೆ ಶುರುವಾಗಿದೆ. ಈ ವಿಚಾರದಲ್ಲಿ ಇದೀಗ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಸೂಚಿಸುತ್ತಿದ್ದಾರೆ. ಅಂತೆಯೇ ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ತಮ್ಮ ಹೇಳಿಕೆಯನ್ನು ನೀಡಿದ್ದ, ಸ್ಪಿನ್ನರ್​ ರವೀಂದ್ರ ಜಡೇಜಾ (Ravindra Jadeja) ಅದಕ್ಕೆ ಸೂಕ್ತ ಆಯ್ಕೆ ಎಂದು ನುಡಿದಿದ್ದಾರೆ.

ರೋಹಿತ್​ ಶರ್ಮಾ ತಂಡದ ನಾಯಕರಾದ ತಕ್ಷಣ ಕೆ. ಎಲ್ ರಾಹುಲ್​ಗೆ ಉಪನಾಯಕನ ಹೊಣೆ ನೀಡಲಾಗಿತ್ತು. ಅಂತೆಯೇ ರಾಹುಲ್​ ದಕ್ಷಿಣ ಆಫ್ರಿಕಾ ವಿರುದ್ಧ ಹಾಗೂ ಬಾಂಗ್ಲಾದೇಶ ವಿರುದ್ಧ ರೋಹಿತ್​ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ್ದರು. ಆದರೆ, ಆಸ್ಟ್ರೇಲಿಯಾ ವಿರುದ್ಧ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ವೈಫಲ್ಯ ಕಂಡ ಕಾರಣ ತಂಡದಿಂದ ಕೈಬಿಡಬೇಕು ಎಂಬ ಒತ್ತಾಯ ಹೆಚ್ಚಾಯಿತು. ಇದೇ ಉದ್ದೇಶಕ್ಕೆ ಅವರಿಂದ ಉಪನಾಯಕನ ಪಟ್ಟ ವಾಪಸ್​ ಪಡೆಯಲಾಯಿತ್ತು.

ಈ ಕುರಿತು ಹರ್ಭಜನ್​ ಸಿಂಗ್ ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿ, ಭಾರತ ತಂಡಕ್ಕೆ ಉಪನಾಯಕರಿಲ್ಲ. ಮುಂದಿನ ಉಪನಾಯಕರನ್ನಾಗಿ ಯಾರನ್ನು ಆಯ್ಕೆ ಮಾಡಬೇಕು. ನನ್ನ ಪ್ರಕಾರ ಆಡುವ 11ರ ಬಳಗದಲ್ಲಿ ಅವಕಾಶ ಪಡೆಯುವ ಆಟಗಾರರು ಮಾತ್ರ ನಾಯಕರಾಗಬೇಕು. ಅವರು ವಿದೇಶದಲ್ಲಿ ಆಡುತ್ತಾರೋ, ತವರಿನಲ್ಲಿ ಆಡುತ್ತಾರೋ ಎಂಬ ಪ್ರಶ್ನೆಯೇ ಬೇರೆ. ಹೀಗಾಗಿ ರವೀಂದ್ರ ಜಡೇಜಾ ಅವರಿಗೆ ಉಪನಾಯಕನ ಪಟ್ಟ ನೀಡಬೇಕು. ಅವರು ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ. ಹಿರಿಯ ಆಟಗಾರನಾಗಿರುವ ಅವರು ದೀರ್ಘ ಕಾಲ ಭಾರತ ತಂಡದಲ್ಲಿ ಆಡಿರುವ ಅನುಭವ ಹೊಂದಿದ್ದಾರೆ. ಅವರು ಪ್ರದರ್ಶನದ ಉತ್ತುಂಗದಲ್ಲಿ ಇರುವ ಕಾರಣ ಸಮರ್ಪಕ ಆಯ್ಕೆ ಎಂದು ಹೇಳಿದರು.

ಇದನ್ನೂ ಓದಿ : ರಾಜ ಮಾರ್ಗ ಅಂಕಣ: ರವೀಂದ್ರ ಜಡೇಜಾ ಎಂಬ ಫೈಟಿಂಗ್ ಸ್ಪಿರಿಟ್! ದೈತ್ಯ ಸಂಹಾರಿಯ ಗ್ರೇಟ್‌ ಕಮ್‌ ಬ್ಯಾಕ್!

ನನ್ನ ಪ್ರಕಾರ ರವೀಂದ್ರ ಜಡೇಜಾ ಅವರಂಥ ಆಲ್​ರೌಂಡರ್ ಜಗತ್ತಿನಲ್ಲಿ ಇನ್ನೊಬ್ಬರಿಲ್ಲ. ಬೆನ್​ಸ್ಟೋಕ್ಸ್​ ಇನ್ನೊಬ್ಬರ ಉತ್ತಮ ಆಲ್​ರೌಂಡರ್ ಎನಿಸಿಕೊಂಡರೂ ಅವರು ಕ್ಷಿಪ್ರ ಗತಿಯ ಕ್ರಿಕೆಟ್​ನಲ್ಲಿ ಹೆಚ್ಚು ನಿಪುಣರು. ಜಡೇಜಾ ಎಲ್ಲ ಮಾದರಿಯ ಕ್ರಿಕೆಟ್​ನಲ್ಲಿ ಕನಿಷ್ಠ ನೆರವು ನೀಡುವ ಸಾಮರ್ಥ್ಯ ಹೊಂದಿದ್ದಾರೆ ಎಂಬುದಾಗಿ ಹರ್ಭಜನ್​ ಸಿಂಗ್ ಹೇಳಿದರು.

Exit mobile version