Site icon Vistara News

Ravindra Jadeja | ಬೌಲಿಂಗ್ ಅಭ್ಯಾಸ ಆರಂಭಿಸಿದ ರವೀಂದ್ರ ಜಡೇಜಾ, ಟೆಸ್ಟ್​​ಗೆ ಮೊದಲು ಫುಲ್​ ಫಿಟ್​?

Ravindra Jadeja

ಮುಂಬಯಿ : ಭಾರತ ತಂಡದ ಸ್ಟಾರ್​ ಆಲ್​ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಕಳೆದ ಅಕ್ಟೋಬರ್​ ಬಳಿಕ ಭಾರತ ತಂಡದಲ್ಲಿ ಕಾಣಿಸಿಕೊಂಡಿಲ್ಲ. ಯುಎಇನಲ್ಲಿ ನಡೆದ ಏಷ್ಯಾ ಕಪ್​ ವೇಳೆ ಮಂಡಿಗೆ ಗಾಯಮಾಡಿಕೊಂಡಿದ್ದ ಅವರು ಅರ್ಧದಿಂದ ವಾಪಸಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಹೀಗಾಗಿ ಟಿ20 ವಿಶ್ವ ಕಪ್​ ಸೇರಿದಂತೆ ಹಲವು ಪ್ರಮುಖ ಪಂದ್ಯಗಳಲ್ಲಿ ಆಡಿರಲಿಲ್ಲ. ಇತ್ತೀಚೆಗೆ ಅವರು ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಅದಕ್ಕೆ ಪೂರಕವಾಗಿ ಅವರೀಗ ನೆಟ್​ನಲ್ಲಿ ಬೌಲಿಂಗ್​ ಅಭ್ಯಾಸ ಆರಂಭಿಸಿದ್ದಾರೆ.

ರವೀಂದ್ರ ಜಡೇಜಾ ಅವರನ್ನು ಫೆಬ್ರವರಿ 9ರಂದು ಆರಂಭವಾಗುವ ಭಾರತ ಹಾಗೂ ಪ್ರವಾಸಿ ಆಸ್ಟ್ರೇಲಿಯಾ ನಡುವಿನ ಬಾರ್ಡರ್​ ಗವಾಸ್ಕರ್​ ಟ್ರೋಫಿಯಲ್ಲಿ ಟೀಮ್​ ಇಂಡಿಯಾಗೆ ಸೇರಿಸಲಾಗಿತ್ತು. ಆದರೆ ಅವರು ಆಡುತ್ತಾರಾ ಎಂಬ ಖಾತರಿ ಇಲ್ಲ. ಅವರು ಫಿಟ್​ ಆದರೆ ಮಾತ್ರ ತಂಡದಲ್ಲಿ ಆಡುತ್ತಾರೆ ಎಂದು ಹೇಳಲಾಗಿದೆ. ಆದರೆ, ಅವರು ಬೌಲಿಂಗ್​ ಅಭ್ಯಾಸ ಮಾಡುವುದನ್ನು ನೋಡಿದರೆ ಟೆಸ್ಟ್​ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ.

ಜನವರಿ 20ರಂದು ರವೀಂದ್ರ ಜಡೇಜಾ ಅವರು ಟ್ವಿಟರ್​ನಲ್ಲಿ ತಾವು ಬೌಲಿಂಗ್​ ಅಭ್ಯಾಸ ಮಾಡುತ್ತಿರುವ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಬಲಕಾಲಿನ ಮಂಡಿಗೆ ಯಾವುದೇ ಪಟ್ಟಿಯನ್ನು ಕಟ್ಟಿಕೊಂಡಿಲ್ಲ. ಹೀಗಾಗಿ ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಎಂದು ಅಂದಾಜಿಸಲಾಗಿದೆ.

34 ವರ್ಷದ ರವೀಂದ್ರ ಜಡೇಜಾ ಅವರು ಜನವರಿ 24ರಂದು ಆರಂಭವಾಗಲಿರುವ ಸೌರಾಷ್ಟ್ರ ಮತ್ತು ತಮಿಳು ನಾಡುವ ನಡುವಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | Ravindra Jadeja | ಫಿಟ್​ನೆಸ್​ಗಾಗಿ ರಣಜಿ ಆಡಲು ಮುಂದಾದ ಆಲ್​ರೌಂಡರ್​ ರವೀಂದ್ರ ಜಡೇಜಾ!

Exit mobile version