Site icon Vistara News

RCB: ಆರ್​ಸಿಬಿ ತಂಡಕ್ಕೆ ಆ್ಯಂಡಿ ಫ್ಲವರ್‌ ನೂತನ ಕೋಚ್​; ಬದಲಾದೀತೇ ಲಕ್​!

Andy Flower RCB head coach

ಬೆಂಗಳೂರು: ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ತಂಡಗಳಿಗೆ ಕೋಚಿಂಗ್‌ ಮಾಡಿದ ಅನುಭವ ಹೊಂದಿರುವ ಕಳೆದ ಎರಡು ವರ್ಷ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಕೋಚ್​ ಆಗಿದ್ದ ಜಿಂಬಾಬ್ವೆಯ ಮಾಜಿ ನಾಯಕ ಆ್ಯಂಡಿ ಫ್ಲವರ್‌(Andy Flower) ಮುಂದಿನ ಐಪಿಎಲ್‌ನಲ್ಲಿ(IPL 2024) ಆರ್​ಸಿಬಿ(RCB) ಫ್ರಾಂಚೈಸಿ(Royal Challengers Bangalore) ತಂಡಕ್ಕೆ ಮುಖ್ಯ ಕೋಚ್‌(Andy Flower RCB head coach) ಆಗಿ ನೇಮಕಗೊಂಡಿದ್ದಾರೆ.

ಐಪಿಎಲ್​ನಲ್ಲಿ ಇದುವರೆಗೆ ಕಪ್ ಗೆಲ್ಲುವಲ್ಲಿ ವಿಫಲವಾಗಿರುವ ಆಎರ್​ಸಿಬಿ ಆ್ಯಂಡಿ ಫ್ಲವರ್‌ ಅವರ ಮಾರ್ಗದರ್ಶನದಲ್ಲಾದರೂ ಕಪ್​ ಗೆದ್ದಿತೇ ಎಂದು ಕಾದು ನೋಡಬೇಕಿದೆ. 2022 ರಿಂದ ಆರ್​ಸಿಬಿ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಂಜಯ್ ಬಂಗಾರ್(Sanjay Bangar) ಅವರ ಒಪ್ಪಂದ ಮುಗಿದಿದೆ. ಅವರ ಕಾರ್ಯಾವಧಿಯಲ್ಲಿ ತಂಡ ನಿರೀಕ್ಷಿತ ಪ್ರದರ್ಶನ ತೋರದ ಕಾರಣ ಅವರೊಂದಿಗಿನ ಒಪ್ಪಂದವನ್ನು ಫ್ರಾಂಚೈಸಿ ನವೀಕರಿಸಿಲ್ಲ. ಹೀಗಾಗಿ ನೂತನ ಕೋಚ್​ ಆಯ್ಕೆ ಮಾಡಲಾಗಿದೆ. ಇವರ ಜತೆಗೆ ಕಳೆದ ನಾಲ್ಕು ವರ್ಷಗಳಿಂದ ತಂಡದ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದ ಮೈಕ್ ಹೆಸ್ಸನ್ ಅವರನ್ನು ಪ್ರಾಂಚೈಸಿ ಕೈಬಿಟ್ಟಿದೆ. ಸದ್ಯದ ಮಾಹಿತಿ ಪ್ರಕಾರ ಆರ್​ಸಿಬಿ ಮಾಜಿ ಆಟಗಾರ ಎಬಿಡಿ ವಿಲಿಯರ್ಸ್(AB de Villiers)​ ಮೆಂಟರ್​ ಆಗಿ ನೇಮಕಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಆಟಗಾರರ ಆಯ್ಕೆ ವಿಚಾರದಲ್ಲಿಯೂ ಕೋಚ್​ ಮತ್ತು ಸಿಬ್ಬಂದಿಗಳು ಎಡವುತ್ತಿದ್ದಾರೆ ಎಂಬ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಲೇ ಇದೆ. ಇದೇ ಕಾರಣಕ್ಕೆ ಈ ಬಾರಿ ಫ್ರಾಂಚೈಸಿ ತಂಡದಲ್ಲಿ ಹಲವು ಬದಲಾವಣೆ ಮಾಡಲು ಮುಂದಾಗಿದೆ. ಮೊದಲ ಹಂತದಲ್ಲಿ ಕೋಚ್​ ಮತ್ತು ನಿರ್ದೇಶಕರ ಬದಲಾವಣೆ ಮಾಡಿದ್ದು ಇನ್ನು ಕೆಲ ಬದಲಾವಣೆ ಮಾಡಲಿದೆ ಎಂದು ಫ್ರಾಂಚೈಸಿ ಮಾಹಿತಿ ನೀಡಿದೆ.

ಇದನ್ನೂ ಓದಿ RCB Twitter Account: ಹ್ಯಾಕ್​ ಆಗಿದ್ದ ಆರ್​ಸಿಬಿ ಟ್ವಿಟರ್​ ಖಾತೆ ರಿಸ್ಟೋರ್​

ಆರ್​ಸಿಬಿ ಕೊನೆಯ ಬಾರಿಗೆ 2016ರಲ್ಲಿ ಫೈನಲ್​ ಪ್ರವೇಶ ಪಡೆದಿತ್ತು. ಇದಾಗ ಬಳಿಕ ತಂಡ ಒಮ್ಮೆಯೂ ಪ್ರಶಸ್ತಿ ಸುತ್ತಿಗೆ ಪ್ರವೇಶ ಪಡೆದಿಲ್ಲ. 2020, 2021 ಹಾಗೂ 2022 ರಲ್ಲಿ ಪ್ಲೇಆಫ್ ಪ್ರವೇಶ ಪಡೆದಿತ್ತು. ಈ ಬಾರಿ ಮೊದಲ ಸುತ್ತಿನಲ್ಲೇ ಅದರಲ್ಲೂ ತವರಿನಲ್ಲೇ ಸೋತು ಹೊರಬಿದ್ದಿತ್ತು. ಇದಕ್ಕೂ ಮುನ್ನ 2009 ಮತ್ತು 2011ರಲ್ಲಿ ಫೈನಲ್​ ಪ್ರವೇಶಿಸಿತ್ತು. ಆದರೆ ಅಲ್ಲಿಯೂ ಸೋಲು ಕಂಡಿತ್ತು. ಒಟ್ಟಾರೆ ಆರ್​ಸಿಬಿ ಮೂರು ಬಾರಿ ಫೈನಲ್​ ಪ್ರವೇಶಿಸಿ ರನ್ನರ್​ಅಪ್​ ಸ್ಥಾನ ಪಡೆದಿದೆ.

“ಈಗಾಗಲೇ ಐಪಿಎಲ್​ನಲ್ಲಿ ಲಕ್ನೋ ತಂಡವನ್ನು ಮುನ್ನಡೆಸಿರುವ ಅವರಿಗೆ ಇಲ್ಲಿನ ಆಟಗಾರರ ಮತ್ತು ಪರಿಸ್ಥಿತಿಗಳ ಬಗ್ಗೆ ಅವರಿಗೆ ಉತ್ತಮ ಅರಿವಿದೆ. ಹೀಗಾಗಿ ಫ್ಲವರ್ ಆರ್​ಸಿಬಿ ತಂಡವನ್ನು ಉತ್ತಮವಾಗಿ ಮುನ್ನಡೆಸುವ ಆತ್ಮವಿಶ್ವಾಸ ನಮ್ಮದು” ಎಂದು ಆರ್​ಸಿಬಿ ಫ್ರಾಂಚೈಸಿ ತಿಳಿಸಿದೆ.

Exit mobile version