Site icon Vistara News

INDVSAUS : ಸೋಲಿಗೆ ಹೊಣೆಗಾರಿಕೆ ವಹಿಸಿಕೊಂಡ ಸ್ಮೃತಿ ಮಂಧಾನಾ

RCB captain Smriti Mandhana took responsibility for the defeat

ಮುಂಬಯಿ: ಡಬ್ಲ್ಯುಪಿಎಲ್​ನ (INDVSAUS) ಉದ್ಘಾಟನಾ ಆವೃತ್ತಿಯಲ್ಲಿ ಆರ್​ಸಿಬಿ ತಂಡ ಅತ್ಯಂತ ಕಳಪೆ ಪ್ರದರ್ಶನ ನೀಡಿದೆ. ನಾಲ್ಕಕ್ಕೆ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ ಪಡೆದುಕೊಂಡಿದೆ. ಆರ್​ಸಿಬಿಯ ಸೋಲಿಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ರೀತಿ ಕಳಪೆ ಪ್ರದರ್ಶನ ನೀಡಿದ್ದು ಸರಿಯಲ್ಲ ಎಂಬುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ತಮ್ಮ ತಂಡದ ಸೋಲಿನ ಬಗ್ಗೆ ನಾಯಕಿ ಹರ್ಮನ್​​ಪ್ರೀತ್​ ಕೌರ್​ಗೂ ಬೇಸರವಿದೆ. ಅದನ್ನವರು ಪಂದ್ಯದ ಬಳಿಕ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ಪಂದ್ಯಗಳಿಂದ ಒಂದೇ ರೀತಿಯ ಫಲಿತಾಂಶವನ್ನು ಪಡೆಯುತ್ತಿದ್ದೇವೆ. ಉತ್ತಮ ಆರಂಭದ ಹೊರತಾಗಿಯೂ ನಾವು ನಿರಂತರ ವಿಕೆಟ್​ಗಳನ್ನು ಕಳೆದುಕೊಂಡಿರುವುದೇ ಸೋಲಿಗೆ ಕಾರಣವಾಗಿದೆ. ಈ ಸೋಲಿಗೆ ನಾನೇ ಹೊಣೆಗಾರಿಕೆ ವಹಿಸಿಕೊಳ್ಳುತ್ತೇನೆ. ಅಗ್ರ ಕ್ರಮಾಂಕದ ಬ್ಯಾಟರ್​ ಆಗಿರುವ ನಾವು ನಮ್ಮ ಬೌಲರ್​ಗಳಿಗೆ ಪೂರಕವಾಗಿರುವ ರನ್​ ಗಳಿಸಬೇಕಿತ್ತು ಎಂದು ಮಂಧಾನಾ ಹೇಳಿದ್ದಾರೆ.

ಪಂದ್ಯಕ್ಕೆ ಮೊದಲು ನಾವು ಓವರ್​ ಒಂದರಲ್ಲಿ 7ರಿಂದ 8 ರನ್​ಗಳನ್ನು ಗಳಿಸುವ ಉದ್ದೇಶ ಹೊಂದಿದ್ದೆವು. ಆದರೆ, ಆ ಯೋಜನೆಯನ್ನು ಕಾರ್ಯಗತ ಮಾಡಲು ಸಾಧ್ಯವಾಗಲಿಲ್ಲ. ಅಗ್ರ ಕ್ರಮಾಂಕದ ಬ್ಯಾಟರ್​ಗಳಾಗಿರುವ ನಾವು ದೊಡ್ಡ ಮೊತ್ತ ಪೇರಿಸಬೇಕಾಗಿತ್ತು ಎಂದು ಮಂಧಾನಾ ಹೇಳಿದ್ದಾರೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಮಹಿಳಾ ಕ್ರಿಕೆಟ್‌ನ ಸಿಡಿಲಮರಿ ಸ್ಮೃತಿ ಮಂಧಾನಾ; ಸೌಂದರ್ಯ- ಪ್ರತಿಭೆಗಳ ಸುಂದರ ಸಮ್ಮಿಲನ!

ಸಮತೋಲಿತ ತಂಡವನ್ನು ರಚಿಸುವುದೇ ನಮ್ಮ ಉದ್ದೇಶವಾಗಿತ್ತು. ತಂಡದ ಸದಸ್ಯರ ಜತೆ ನಿರಂತರವಾಗಿ ಮಾತನಾಡುತ್ತಾ ಅವರಿಗೆ ಪ್ರೇರಣೆ ನೀಡುತ್ತೇನೆ. ಆದರೆ, ಕೆಲವೊಂದು ಸಂಗತಿಗಳು ನಾವು ನಿರೀಕ್ಷೆ ಮಾಡಿದಂತೆ ನಡೆಯುವುದಿಲ್ಲ. ಆದರೆ, ವಿಶ್ವಾಸ ಕಳೆದುಕೊಳ್ಳುವ ಅಗತ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.

Exit mobile version