ಬೆಂಗಳೂರು: ಗುಜರಾತ್ ಟೈಟಾನ್ಸ್ ತಂಡದ ಮಾಜಿ ನಾಯಕ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಆಡಲು ಮುಂಬೈ ಇಂಡಿಯನ್ಸ್ ಸೇರಲು ನಿರ್ಧರಿಸಿದಾಗಿನಿಂದ ಐಪಿಎಲ್ 2024ನೇ ಆವೃತ್ತಿಯು ಕಳೆಗಟ್ಟುತ್ತಿದೆ. ಹೊಸ ಫ್ರಾಂಚೈಸಿ ಗುಜರಾತ್ ಟೈಟನ್ಸ್ ್ಪರ ನಾಯಕನಾಗಿ ಮತ್ತು ಆಟಗಾರನಾಗಿ ಒಂದೆರಡು ಯಶಸ್ವಿ ವರ್ಷಗಳ ಕಳೆದ ನಂತರ ಅವರು ಮುಂಬೈಗೆ ವಾಪಸಾಗಿದ್ದಾರೆ. ಅವರೀಗ , ರೋಹಿತ್ ಶರ್ಮಾ ನೇತೃತ್ವದ ತಂಡದ ಜತೆ ಹೊಸ ಒಪ್ಪಂದ ಮಾಡಿಕೊಂಡಿದ್ದಾರೆ. ಇದರಿಂದ ಅವರು ಈ ಫ್ರಾಂಚೈಸಿಯ ಭವಿಷ್ಯದ ನಾಯಕ ಎಂದೇ ಹೇಳಲಾಗುತ್ತಿದೆ. ಆದರೆ, ಈ ಟ್ರೇಡಿಂಗ್ ಡೀಲ್ ಅತ್ಯಂತ ಕುತೂಹಲಕಾರಿಯಾಗಿತ್ತು. ಅವರಿಗೆ ನೀಡಬೇಕಾದ 15 ಕೋಟಿ ರೂಪಾಯಿ ಮೊತ್ತವನ್ನು ಸಜ್ಜುಗೊಳಿಸಲು ಮುಂಬಯಿ ಇಂಡಿಯನ್ಸ್ ತಂಡ ಹೊಸ ಐಡಿಯಾ ಮಾಡಿತ್ತು. ತನ್ನ ತಂಡದಲ್ಲಿರುವ 17.5 ಕೋಟಿ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್ ಆಲ್ರೌಂಡರ್ ಕ್ಯಾಮೆರೂನ್ ಗ್ರೀನ್ ಅವರನ್ನು ಬೆಂಗಳೂರು ತಂಡಕ್ಕೆ ಮಾರಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಸ್ಟಾರ್ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಅವರನ್ನು ಖರೀದಿಸಲು ಆಸಕ್ತಿ ತೋರಿಸಿದಾಗ ಮುಂಬೈ ತಕ್ಷಣವೇ ಒಪ್ಪಿಕೊಂಡಿತ್ತು. ಇತ್ತ ಆರ್ಸಿಬಿ ಗ್ರೀನ್ ಅವರನ್ನು ಪಡೆಯಲು ಕೆಲವು ಆಟಗಾರರನ್ನು ತ್ಯಾಗ ಮಾಡಿತು. ಐಪಿಎಲ್ ಇತಿಹಾಸದಲ್ಲಿ ಆಸ್ಟ್ರೇಲಿಯಾದ ಆಟಗಾರ ಅತಿ ಹೆಚ್ಚು ಸಂಭವಾನೆ ಪಡೆಯುವ ಐಪಿಎಲ್ ಆಟಗಾರ. ಆ ಹಣವನ್ನು ಹೊಂದಿಸಲು ಆರ್ಸಿಬಿಯೂ ಸಿಕ್ಕಾಪಟ್ಟೆ ಕಸರತ್ತು ಮಾಡಿತು. ಆದರೆ, ಈ ಪ್ರಕ್ರಿಯೆಯ ಒಟ್ಟು ಲಾಭ ಮಾತ್ರ ಮುಂಬೈ ತಂಡಕ್ಕೆ ಎಂದು ಮಾಜಿ ಕ್ರಿಕೆಟಿಗರು ಅಂದಾಜು ಮಾಡಿದ್ದಾರೆ.
ಮುಂಬೈಗೆ ಉಪಕಾರ ಮಾಡಿದ ಆರ್ಸಿಬಿ
ಈ ವಹಿವಾಟು ಪರಿಸ್ಥಿತಿಯನ್ನು ವಿಶ್ಲೇಷಿಸಿದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಆರ್ಸಿಬಿ ಈ ವಿಚಾರದಲ್ಲಿ ಮುಂಬೈಗೆ ದೊಡ್ಡ ಉಪಕಾರ ಮಾಡಿದೆ ಎಂದು ಹೇಳಿದ್ದಾರೆ. ಏಕೆಂದರೆ ಆರ್ಸಿಬಿಯ ಬೆಂಬಲವಿಲ್ಲದೆ ಐದು ಬಾರಿಯ ಚಾಂಪಿಯನ್ಸ್ ಪಾಂಡ್ಯ ಅವರನ್ನು ವ್ಯಾಪಾರದಲ್ಲಿ ಪಡೆಯುವುದು ಆ ತಂಡಕ್ಕೆ ಸುಲಭವಿರಲಿಲ್ಲ ಎಂದು ಹೇಳಿದೆ. ಒಂದು ಕಡೆ ಆಲ್ರೌಂಡರ್ ಸ್ಥಾನ ಭರ್ತಿ ಮಾಡುವ ಜತೆಗೆ ಮತ್ತೊಂದು ಕಡೆಗೆ ದುಡ್ಡು ಕೂಡ ಮುಂಬೈ ಉಳಿಸಿದೆ ಎಂದು ಹೇಳಿದ್ದಾರೆ ಅವರು. ಆರ್ಸಿಬಿ ಹರಾಜಿನ ಮೂಲಕವೇ ಗ್ರೀನ್ ಅವರನ್ನು ಪಡೆಯಬಹುದಾಗಿತ್ತು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಚೋಪ್ರಾ ಮುಂಬೈ ತಂಡದ ವ್ಯವಹಾರ ಚಾತುರ್ಯವನ್ನು ಮೆಚ್ಚಿದ್ದಾರೆ.
ಇದನ್ನೂ ಓದಿ : IPL 2024 : ಪಾಂಡ್ಯ- ರೋಹಿತ್; ಮುಂಬೈ ತಂಡದ ನಾಯಕ ಯಾರಾಗಬಹುದು?
“ಅವರು (ಆರ್ಸಿಬಿ) ಮುಂಬೈಗೆ ದೊಡ್ಡ ಉಪಕಾರ ಮಾಡಿದ್ದಾರೆ. ಏಕೆಂದರೆ ಈ ಒಪ್ಪಂದ ನಡೆಯದಿದ್ದರೆ, ಹಾರ್ದಿಕ್ ಒಪ್ಪಂದವೂ ಕಷ್ಟವಿತ್ತು ವಿಷಯಗಳು ಇದ್ದಕ್ಕಿದ್ದಂತೆ ವಿಭಿನ್ನವಾಗಿರುತ್ತಿತ್ತು. ಆರ್ಸಿಬಿ ದೃಷ್ಟಿಕೋನದಿಂದ ನೋಡಿದರೆ ಅವರು ಮುಂಬೈ ತಂಡಕ್ಕೆ ಸಹಾಯ ಮಾಡಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
“ಮುಂಬಯಿ ತಂಡ ಪಾಂಡ್ಯಗಾಗಿ ಗ್ರೀನ್ ಅವರನ್ನು ಬಿಡುಗಡೆ ಮಾಡುತ್ತಿದ್ದರು. ಈ ವೇಳೆ ಹರಾಜಿನಲ್ಲಿಯೇ ಅವರನ್ನು ಪಡೆಯಬಹುದಾಗಿತ್ತು. ಆರ್ಸಿಬಿ ಬಳಿ 40 ಕೋಟಿ ರೂ.ಗಿಂತ ಹೆಚ್ಚು ಹಣವಿದ್ದ ಕಾರಣ ಹರಾಜು ಕಷ್ಟವಿರಲಿಲ್ಲ. ಇದೀಘ ಮುಂಬೈ ಇಂಡಿಯನ್ಸ್ ತಂಡಕ್ಕೆ ಶುಭವಾಗಿದೆ , “ಎಂದು ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದ್ದಾರೆ. ಮತ್ತೊಂದೆಡೆ, ಡಿಸೆಂಬರ್ 19 ರಂದು ದುಬೈನಲ್ಲಿ ನಡೆಯಲಿರುವ ಮುಂಬರುವ ಐಪಿಎಲ್ ಮಿನಿ ಹರಾಜಿನಲ್ಲಿ ಹೂಡಿಕೆ ಮಾಡಲು ಮುಂಬೈ ಬಳಿ 17.75 ಕೋಟಿ ರೂ., ಆರ್ಸಿಬಿ ಬಳಿ 23.25 ಕೋಟಿ ರೂ. ಉಳಿದಿದೆ.