ಮುಂಬಯಿ: ಮಹಿಳೆಯರ ಪ್ರೀಮಿಯರ್ ಲೀಗ್ನ (WPL 2023) ತನ್ನ ಏಳನೇ ಪಂದ್ಯದಲ್ಲಿ ಟಾಸ್ ಸೋತಿರುವ ಆರ್ಸಿಇ ತಂಡಕ್ಕೆ ಮೊದಲು ಬೌಲಿಂಗ್ ಮಾಡುವಂತೆ ಎದುರಾಳಿ ಗುಜರಾತ್ ತಂಡ ಹೇಳಿದೆ. ಆದರೆ, ವಿಶ್ವಾಸದಲ್ಲಿರುವ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನಾ ಗೆಲುವಿನ ಅಭಿಯಾನ ಮುಂದುವರಿಸುವ ಸೂಚನೆ ಕೊಟ್ಟಿದ್ದಾರೆ. ಸತತವಾಗಿ ಐದು ಪಂದ್ಯಗಳಲ್ಲಿ ಸೋಲು ಕಂಡಿರುವ ಆರ್ಸಿಬಿ, ಹಿಂದಿನ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಐದು ವಿಕೆಟ್ ವಿಜಯ ಸಾಧಿಸಿತ್ತು. ಇದೀಗ ಮತ್ತೊಂದು ಬಾರಿ ಗೆಲುವಿನ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯುತ್ತಿದೆ.
ಟಾಸ್ ಗೆದ್ದ ಬಳಿಕ ಮಾತನಾಡಿದ ಗುಜರಾತ್ ತಂಡದ ನಾಯಕಿ ಸ್ನೇಹಾ ರಾಣಾ, ನನ್ನ ತಂಡದ ಆಟಗಾರ್ತಿಯರೆಲ್ಲರೂ ಅತೀವ ಆತ್ಮವಿಶ್ವಾಸದಲ್ಲಿದ್ದೇವೆ. 160ರಿಂದ 170 ರನ್ ಪೇರಿಸಿ ಗೆಲ್ಲುವ ಯೋಜನೆ ರೂಪಿಸಿಕೊಂಡಿದ್ದೇವೆ ಎಂದು ಹೇಳಿದ್ದಾರೆ.
ಸ್ಮೃತಿ ಮಂಧಾನಾ ಮಾತನಾಡಿ, ನಾವು ಟಾಸ್ ಸೋತರೂ ಮ್ಯಾಚ್ ಗೆಲ್ಲುತ್ತೇವೆ. ಟಾಸ್ ಗೆದ್ದಿದ್ದರೂ ಫೀಲ್ಡಿಂಗ್ ಆಯ್ಕೆ ಮಾಡುವ ಉದ್ದೇಶ ಹೊಂದಿದ್ದೆವು ಎಂದು ಹೇಳಿದ್ದಾರೆ. ಇತ್ತಂಡಗಳಲ್ಲಿ ತಲಾ ಒಂದು ಬದಲಾವಣೆ ಆಗಿದೆ. ರೇಣುಕಾ ಸಿಂಗ್ ಈ ಪಂದ್ಯದಲ್ಲಿ ಆಡುತ್ತಿಲ್ಲ. ಅವರ ಬದಲಿಗೆ ಪ್ರೀತಿ ಅವಕಾಶ ಪಡೆದಿದ್ದಾರೆ. ಗುಜರಾತ್ ತಂಡಕ್ಕೆ ಮೇಘನಾ ವಾಪಸಾಗಿದ್ದ, ಮಾನ್ಸಿ ಹೊರಕ್ಕುಳಿದಿದ್ದಾರೆ.