Site icon Vistara News

T20 World Cup | ಯುಎಇ ಪರ ಹ್ಯಾಟ್ರಿಕ್​ ವಿಕೆಟ್​ ಕಿತ್ತು ಮಿಂಚಿದ ಆರ್​ಸಿಬಿ ನೆಟ್ ಬೌಲರ್​ ಕಾರ್ತಿಕ್

T20 World Cup

ಮೆಲ್ಬೋರ್ನ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್​ಸಿಬಿ) ತಂಡದ ನೆಟ್​ ಬೌಲರ್ ಕೂಡ ಆಗಿರುವ ಯುಎಇ ಸ್ಪಿನ್ನರ್ ಕಾರ್ತಿಕ್ ಮೇಯಪ್ಪನ್ ಟಿ20 ವಿಶ್ವ ಕಪ್​(T20 World Cup) ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸೈಮಂಡ್ಸ್ ಸ್ಟೇಡಿಯಂನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಅರ್ಹತಾ ಪಂದ್ಯದಲ್ಲಿ ಕಾರ್ತಿಕ್ ಈ ಸಾಧನೆ ಮಾಡಿದ್ದಾರೆ.

15ನೇ ಓವರ್​ನ ಮೊದಲ ಎಸೆತದಲ್ಲಿ 2 ರನ್ ನೀಡಿದ್ದ ಮೇಯಪ್ಪನ್, 2ನೇ ಎಸೆತದಲ್ಲಿ 1 ರನ್ ನೀಡಿದರು. ಇನ್ನು ಮೂರನೇ ಎಸೆತದಲ್ಲಿ ಯಾವುದೇ ರನ್ ನೀಡಿರಲಿಲ್ಲ. ಇದಾದ ಬಳಿಕ ನಾಲ್ಕನೇ ಎಸೆತದಲ್ಲಿ ಭಾನುಕಾ ರಾಜಪಕ್ಸೆ, 5ನೇ ಎಸೆತದಲ್ಲಿ ಅಸಲಂಕಾ ಹಾಗೂ ಅಂತಿಮ ಎಸೆತದಲ್ಲಿ ದಸುನ್ ಶನಕ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದರು.

ಈ ಮೂಲಕ ಟಿ20 ವಿಶ್ವಕಪ್​ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಮೊದಲ ಯುಎಇ ಆಟಗಾರ ಎನಿಸಿಕೊಂಡರು. ಜತೆಗೆ ಈ ಸಾಧನೆ ಮಾಡಿದ ವಿಶ್ವದ 5ನೇ ಆಟಗಾರ ಎಂಬ ವಿಶ್ವ ದಾಖಲೆ ನಿರ್ಮಿಸಿದರು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಬ್ರೆಟ್​ ಲೀ (2007), ಐರ್ಲೆಂಡ್​ನ ಕರ್ಟಿಸ್ ಕ್ಯಾಂಪರ್​ (2021), ಶ್ರೀಲಂಕಾದ ವನಿಂದು ಹಸರಂಗ (2021) ಹಾಗೂ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ (2021) ಈ ಸಾಧನೆ ಮಾಡಿದ್ದರು.

ಕಾರ್ತಿಕ್ ಮೇಯಪ್ಪನ್ ಚೆನ್ನೈ ಮೂಲದವರಾಗಿದ್ದು, ಯುಎಇ ಮೂಲಕ ತಮ್ಮ ಕ್ರಿಕೆಟ್ ಕೆರಿಯರ್ ಆರಂಭಿಸಿದ್ದಾರೆ. ಜತೆಗೆ, ಆರ್‌ಸಿಬಿ ಪರ ನೆಟ್‌ ಬೌಲರ್ ಆಗಿಯೂ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ | T20 World Cup| ಸಿಕಂದರ್‌ ರಾಜಾ ಅಬ್ಬರ, ಐರ್ಲೆಂಡ್‌ ವಿರುದ್ಧ ಜಿಂಬಾಬ್ವೆಗೆ 31 ರನ್‌ ಜಯ

Exit mobile version