ಬೆಂಗಳೂರು: ರಾಯಲ್ ಚಾಲೆಜೆಂಜರ್ಸ್ ಬೆಂಗಳೂರು(RCB) ತಂಡದ ಗೋ ಗ್ರೀನ್ ಅಭಿಯಾನ ಈ ಐಪಿಎಲ್‌ನಲ್ಲೂ(IPL 2024) ಮುಂದುವರಿಯಲಿದೆ. ಸ್ವಚ್ಛ ಹಾಗೂ ಹಸಿರು ಪರಿಸರವೇ ಈ ಬಾರಿಯ ಪ್ರಮುಖ ಉದ್ದೇಶವಾಗಿದೆ. ಮೂಲಗಳ ಪ್ರಕಾರ ಆರ್ಸಿಬಿ(rcb green jersey) ಏಪ್ರಿಲ್ 6ರಂದು ನಡೆಯುವ ರಾಜಸ್ಥಾನ್(RR) ರಾಯಲ್ಸ್ ನಡುವಣ ಪಂದ್ಯದಲ್ಲಿ ಹಸಿರು(RCB Green Jersey) ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎನ್ನಲಾಗಿದೆ. ಇದರ ಸುಳಿವಿನಂತೆ ಆರ್ಸಿಬಿ ತನ್ನ ಅಧಿಕೃತ ಟ್ವಿಟರ್ ಎಕ್ಸ್ನಲ್ಲಿ ವಿಡಿಯೊವೊಂದನ್ನು ಕೂಡ ಬಿಡುಗಡೆ ಮಾಡಿದೆ.
ಆರ್ಸಿಬಿ ಮುಂದಿನ ಪಂದ್ಯದಲ್ಲಿ ಹಸಿರು(RCB Green Jersey) ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎನ್ನುವ ಸುದ್ದಿ ಕೇಳಿರುವ ತಂಡದ ಅಭಿಮಾನಿಗಳು ಈ ಬಾರಿಯೂ ಗೆಲುವು ಖಚಿತ ಎಂದು ಹೇಳಿದ್ದಾರೆ. ಏಕೆಂದರೆ ಕಳೆದ ಆವೃತ್ತಿಯಲ್ಲಿಯೂ ರಾಜಸ್ಥಾನ್ ವಿರುದ್ಧವೇ ಗ್ರೀನ್ ಜೆರ್ಸಿಯಲ್ಲಿ ಆಡಿ 7 ರನ್ ಅಂತರದಿಂದ ಪಂದ್ಯ ಗೆದ್ದಿತ್ತು. ಇದೇ ಲೆಕ್ಕಾಚಾರದಲ್ಲಿ ಆರ್ಸಿಬಿ ಈ ಬಾರಿಯೂ ಗೆಲ್ಲತ್ತದೆ ಎನ್ನುವುದು ಅಭಿಮಾನಿಗಳ ನಂಬಿಕೆ.
ಈ ಬಾರಿ ಆರ್ಸಿಬಿ ತಂಡದ ಪ್ರದರ್ಶನ ನೋಡುವಾಗ ಗೆಲುವು ಅಷ್ಟು ಸುಲಭವಲ್ಲ ಎಂದರೂ ತಪ್ಪಾಗಲಾರದು. ಈಗಾಗಲೇ ಆಡಿದ 4 ಪಂದ್ಯಗಳಲ್ಲಿ ಮೂರು ಪಂದ್ಯ ಸೋತಿದೆ. ಅತ್ತ ರಾಜಸ್ಥಾನ್ ಆಡಿದ ಎಲ್ಲ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದಿದೆ. ಅದರಲ್ಲೂ ಈ ಬಾರಿ ಪಂದ್ಯ ರಾಜಸ್ಥಾನ್ ತವರಿನಲ್ಲಿ ನಡೆಯುತ್ತಿದೆ.
2011 ರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆರ್ಸಿಬಿ ತಮ್ಮ ‘ಗೋ ಗ್ರೀನ್’ ಅಭಿಯಾನದಲ್ಲಿ ತೊಡಗಿಕೊಂಡಿತ್ತು. ಇದೇ ಕಾರಣಕ್ಕೆ ಪ್ರತಿ ಆವೃತ್ತಿಯಲ್ಲಿಯೂ ಒಂದು ಪಂದ್ಯವನ್ನು ಹಸಿರು ಜೆರ್ಸಿಯಲ್ಲಿ ಆಡುತ್ತಿದೆ. ಆದರೆ 2021ರಲ್ಲಿ, ಹಸಿರು ಜರ್ಸಿಯಲ್ಲಿ ಆಡುವ ಬದಲು ತಂಡವು ಒಂದು ಪಂದ್ಯದಲ್ಲಿ ನೀಲಿ ಜರ್ಸಿಯಲ್ಲಿ ಆಡಿತ್ತು. ಇದಕ್ಕೆ ಕಾರಣ ಕೋವಿಡ್ ಸಂಕಷ್ಟದ ಸಮಯದಲ್ಲಿ ಮುಂಚೂಣಿಯಲ್ಲಿರುವ ಕಾರ್ಮಿಕರಿಗೆ ಅವರ ತ್ಯಾಗ ಮತ್ತು ಕಠಿಣ ಪರಿಶ್ರಮಕ್ಕೆ ಗೌರವ ಸಲ್ಲಿಸಲು ಈ ನೀಲಿ ಜೆರ್ಸಿ ಧರಿಸಿ ಆಡಿತ್ತು.
ಇದನ್ನೂ ಓದಿ IPL 2024: 6.4 ಕೋಟಿ ಪಡೆದ ಬೌಲರ್ ರೂಲ್ಡ್ ಔಟ್; ಲಕ್ನೋ ತಂಡಕ್ಕೆ ಭಾರೀ ಹಿನ್ನಡೆ
Do what the experts say! Upgrade your batting against electrical hazards with KEI All-Rounder Wires, your ultimate choice for saving costs, protecting lives, and ensuring safety inside and outside.@keicable pic.twitter.com/n2qKtmh4Wi
— Royal Challengers Bengaluru (@RCBTweets) April 3, 2024
ಈ ಬಾರಿಯ ಗ್ರೀನ್ ಜೆರ್ಸಿಯ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಹಸಿರಿನ ಜತೆಗೆ ಕಡು ನೀಲಿ ಬಣ್ಣವನ್ನು ಸೇರಿಸಿಲಾಗಿದೆ. ಹಿಂದಿನ ಆವೃತ್ತಿಯಲ್ಲಿ ಹಸಿರು ಮತ್ತು ಕಪ್ಪು ಬಣ್ಣ ವಿಶ್ರಿತ ಜೆರ್ಸಿಯನ್ನು ಬಳಸಲಾಗಿತ್ತು. ಆರ್ಸಿಬಿ ಮುಂದಿನ ಪಂದ್ಯದಲ್ಲಿಯೇ ಗ್ರೀನ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಎನ್ನುವ ವಿಚಾರವನ್ನು ಫ್ರಾಂಚೈಸಿ ಇದುವರೆಗೂ ಅಧಿಕೃತಪಡಿಸಿಲ್ಲ. ಕೇವಲ ಮೂಲಗಳ ವರದಿ ಮಾತ್ರ ಇದಾಗಿದೆ. ಆರ್ಸಿಬಿ ಮುಂದಿನ ಪಂದ್ಯದಲ್ಲಿ ಹಸಿರು ಜೆರ್ಸಿಯಲ್ಲಿ ಆಡಲಿದೆ ಎನ್ನುವ ಸುದ್ದಿ ಹಬ್ಬಲು ಕಾರಣ ವಿರಾಟ್ ಕೊಹ್ಲಿ, ದಿನೇಶ್ ಕಾರ್ತಿ ಮತ್ತು ಮೊಹಮ್ಮದ್ ಸಿರಾಜ್ ಅವರು ಈ ಜೆರ್ಸಿಯಲ್ಲಿ ಕಾಣಿಸಿಕೊಂಡ ಜಾಹಿರಾತು ಮತ್ತು ಅವರು ಪರಿಸರ ಸಂರಕ್ಷಣೆ ಬಗ್ಗೆ ನೀಡಿರುವ ಜಾಗೃತಿ.