Site icon Vistara News

WPL 2023 Auction : ಐದು ಆಟಗಾರ್ತಿಯರ ಖರೀದಿಗೆ 9 ಕೋಟಿ ರೂಪಾಯಿ ವ್ಯಯಿಸಿದ ಆರ್​ಸಿಬಿ

ellyse perry

#image_title

ಬೆಂಗಳೂರು : ಐಪಿಎಲ್​ನಲ್ಲಿ ಒಂದೇ ಒಂದು ಪ್ರಶಸ್ತಿ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (ಆರ್​ಸಿಬಿ) ಮಹಿಳೆಯರ ಸೂಪರ್​ ಲೀಗ್​ನಲ್ಲಾದರೂ ಟ್ರೋಫಿ ಗೆಲ್ಲುವ ಉದ್ದೇಶ ಇಟ್ಟುಕೊಂಡಂತಿದೆ. ಅದಕ್ಕಾಗಿ ಬಲಿಷ್ಠ ತಂಡವನ್ನು ಕಟ್ಟಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಐವರು ಆಟಗಾರ್ತಿಯರನ್ನು ಖರೀದಿ ಮಾಡುವುದಕ್ಕೆ ಒಟ್ಟು 9 ಕೋಟಿ ರೂಪಾಯಿ ಖರ್ಚು ಮಾಡಿದೆ. ಇನ್ನೂ ಆರ್​ಸಿಬಿ ತಂಡದಲ್ಲಿರುವುದು ಮೂರು ಕೋಟಿ ರೂಪಾಯಿ ಮಾತ್ರ. ಅದನ್ನು ವ್ಯಯಿಸಿ ಉಳಿದ ಆಟಗಾರರನ್ನು ಖರೀದಿ ಮಾಡಬೇಕಾಗುತ್ತದೆ.

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಗರಿಷ್ಠ ಮೊತ್ತ ವ್ಯಯಿಸಿರುವುದು ಭಾರತ ತಂಡದ ಉಪನಾಯಕಿ ಹಾಗೂ ಸ್ಟಾರ್​ ಬ್ಯಾಟರ್​ ಸ್ಮೃತಿ ಮಂಧಾನಾ ಅವರಿಗೆ. ಮುಂಬಯಿ ಇಂಡಿಯನ್ಸ್​ ಜತೆಗೆ ಜಿದ್ದಾಜಿದ್ದಿನ ಬಿಡ್ಡಿಂಗ್ ನಡೆಸಿ ಅವರಿಗೆ 3.40 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಇದು ಡಬ್ಲ್ಯುಪಿಎಲ್​ನ ಗರಿಷ್ಠ ಖರೀದಿಯಾಗಿದೆ.

ಭಾರತ ತಂಡದ ವಿಕೆಟ್​ಕೀಪರ್​ ಬ್ಯಾಟರ್​ ರಿಚಾ ಘೋಷ್​ ಎರಡನೇ ಗರಿಷ್ಠ ಖರೀದಿಯಾಗಿದೆ. ಅವರಿಗಾಗಿ ಆರ್​ಸಿಬಿ ಪ್ರಾಂಚೈಸಿ 1.90 ಕೋಟಿ ರೂಪಾಯಿ ವ್ಯಯಿಸಿದೆ. ಆಸ್ಟ್ರೇಲಿಯಾ ತಂಡದ ವೇಗದ ಬೌಲರ್​ ಎಲಿಸ್​ ಪೆರಿಗೋಸ್ಕರ ಆರ್​ಬಿಸಿ 1.7 ಕೋಟಿ ರೂಪಾಯಿ ವ್ಯಯಿಸಿದೆ.

ಇದನ್ನು ಓದಿ : WPL Auction : ಆರ್​ಸಿಬಿ ಬಳಗ ಸೇರಿದ ಸ್ಟಾರ್​ ಕ್ರಿಕೆಟರ್​ ಸ್ಮೃತಿ ಮಂಧಾನಾ, ಅವರು ಪಡೆದ ಮೊತ್ತವೆಷ್ಟು ಗೊತ್ತೇ?

ರೇಣುಕಾ ಸಿಂಗ್​ ಮತ್ತೊಂದು ದುಬಾರಿ ಖರೀದಿಯಾಗಿದೆ. ಅವರಿಗೆ 1.5 ಕೋಟಿ ರೂಪಾಯಿ ನೀಡಿದ ಆರ್​ಸಿಬಿ ಫ್ರಾಂಚೈಸಿ. ನ್ಯೂಜಿಲ್ಯಾಂಡ್​ ತಂಡದ ಸೋಫಿ ಡಿವೈನ್​ ಕೂಡ ಆರ್​ಸಿಬಿ ತಂಡ ಸೇರಿಕೊಂಡಿದ್ದಾರೆ. ಅವರಿಗೆ 50 ಲಕ್ಷ ರೂಪಾಯಿ ಕೊಟ್ಟಿದೆ ಆರ್​ಸಿಬಿ.

Exit mobile version