Site icon Vistara News

Holi 2023 : ಹೋಳಿ ಆಚರಿಸಿದ ಆರ್​ಸಿಬಿ ತಂಡ, ವಿದೇಶಿ ಆಟಗಾರ್ತಿಯರೂ ಸಂಭ್ರಮದಲ್ಲಿ ಭಾಗಿ

RCB team celebrated Holi, foreign players also participated in the celebration

#image_title

ಮುಂಬಯಿ: ದೇಶದಲ್ಲಿ ಹೋಳಿ ಸಂಭ್ರಮ ಜೋರಾಗಿ ನಡೆಯುತ್ತಿದೆ. ಜನರೆಲ್ಲರೂ ಒಟ್ಟಾಗಿ ಸೇರಿಕೊಂಡು ಬಣ್ಣ ಎರಚಿ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಪ್ರಸ್ತುತ ನಡೆಯುತ್ತಿರುವ ಮಹಿಳೆಯರ ಪ್ರೀಮಿಯರ್​ ಲೀಗ್​ನ (WPL 2023) ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಆಟಗಾರ್ತಿರೂ ತಮ್ಮ ಕ್ಯಾಂಪ್​ನೊಳಗೆ ಹೋಳಿ ಸಂಭ್ರಮಾಚರಣೆಯಲ್ಲಿ (Holi 2023) ತೊಡಗಿದ್ದರು. ವಿದೇಶದ ಆಟಗಾರ್ತಿಯರೂ ಅದಕ್ಕೆ ಸಾಥ್​ ಕೊಟ್ಟಿದ್ದಾರೆ.

ಎಲಿಸ್​ ಪೆರಿ ಮಾಡಿರುವ ಟ್ವೀಟ್ ಇಲ್ಲಿದೆ

ಆಸ್ಟ್ರೇಲಿಯಾ ತಂಡದ ಆಲ್​ರೌಂಡರ್​ ಎಲಿಸ್​ ಪೆರಿ ಸೇರಿದಂತೆ ಡೇನಿಯಲ್ ವ್ಯಾಟ್​ ಮತ್ತಿರರರು ಹೋಳಿ ಸಂಭ್ರಮದ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಮೈ ತುಂಬಾ ಬಣ್ಣ ಮೆತ್ತಿಕೊಂಡಿರುವ ಅವರು ಸೆಲ್ಫಿ ತೆಗೆದುಕೊಂಡು ಪೋಸ್ಟ್​ ಮಾಡಿದ್ದಾರೆ. ಭಾರತದಲ್ಲಿರುವ ಎಲ್ಲರಿಗೂ ಹೋಳಿ ಹಬ್ಬದ ಶುಭಾಶಯಗಳು ಎಂದು ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ತಂಡದ ಆಟಗಾರ್ತಿಯರಾದ ಸ್ಮೃತಿ ಮಂಧಾನಾ ಹಾಗೂ ರಿಚಾ ಘೋಷ್​ ಕೂಡ ಹೋಳಿ ಸಂಭ್ರಮದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ : WPL 2023 : ಮುಂಬಯಿ ವಿರುದ್ಧ ಆರ್​ಸಿಬಿಗೆ 9 ವಿಕೆಟ್​ ಹೀನಾಯ ಸೋಲು, ತೀವ್ರ ವೈಫಲ್ಯ ಕಂಡ ಮಂಧಾನಾ ಬಳಗ

ಸ್ಮೃತಿ ಮಂಧಾನಾ ನೇತೃತ್ವದ ಆರ್​ಸಿಬಿ ತಂಡ ಮೊದಲೆರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಆರ್​ಸಿಬಿ ಅಟಗಾರರು ಟೂರ್ನಿಯ ಮೊದಲೆರಡು ಪಂದ್ಯಗಳಲ್ಲಿ ಸಂಪೂರ್ಣ ವೈಫಲ್ಯ ಎದುರಿಸಿದ್ದು, ಮುಂದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗಿದೆ.

Exit mobile version