ಮುಂಬಯಿ: ಸ್ಮೃತಿ ಮಂಧಾನಾ ನೇತೃತ್ವದ ಆರ್ಸಿಬಿ ತಂಡ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL 2023) ತನ್ನ ನಾಲ್ಕನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ಯುಪಿ ವಾರಿಯರ್ಸ್ ತಂಡಕ್ಕೆ ಎದುರಾಗಬೇಕಾಗಿದ್ದು ಭರ್ಜರಿ ಯೋಜನೆ ರೂಪಿಸಿಕೊಳ್ಳಬೇಕಾಗಿದೆ. ಬ್ರಬೊರ್ನ್ ಸ್ಟೇಡಿಯಮ್ನಲ್ಲಿ ಈ ಪಂದ್ಯ ನಡೆಯಲಿದ್ದು ಹ್ಯಾಟ್ರಿಕ್ ಸೋಲಿನ ನೋವಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವಿನ ಒತ್ತಡದಲ್ಲಿದೆ. ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಕೊನೇ ಸ್ಥಾನದಲ್ಲಿದ್ದು ಫೈನಲ್ಗೆ ತಲುಪಬೇಕಾದರೆ ಗರಿಷ್ಠ ರನ್ರೇಟ್ನೊಂದಿಗೆ ಗೆಲುವು ಸಾಧಿಸಬೇಕಾಗಿದೆ.
ಆರ್ಸಿಬಿ ತಂಡ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 60 ರನ್ಗಳ ಹೀನಾಯ ಸೋಲಿಗೆ ಒಳಗಾಗಿದ್ದರೆ, ಗುಜರಾತ್ ಜಯಂಟ್ಸ್ ವಿರುದ್ಧ 11 ರನ್ಗಳಿಂದ ಸೋಲು ಕಂಡಿತ್ತು. ಮುಂಬಯಿ ಇಂಡಿಯನ್ಸ್ ವಿರುದ್ಧವಂತೂ 9 ವಿಕೆಟ್ಗಳ ಪರಾಜಯಕ್ಕೆ ಒಳಗಾಗಿತ್ತು. ಆರ್ಸಿಬಿ ತಂಡದ ಸೋಲಿಗೆ ಬೌಲರ್ಗಳೇ ಕಾರಣರಾಗಿದ್ದಾರೆ. ಪ್ರಖರ ದಾಳಿ ಸಂಘಟಿಸಲು ವಿಫಲವಾಗಿರುವ ತಂಡ ಎದುರಾಳಿ ತಂಡಕ್ಕೆ ರನ್ಗಳನ್ನು ಬಿಟ್ಟುಕೊಡುತ್ತಿದೆ. ಹೀಗಾಗಿ ದೊಡ್ಡ ಮೊತ್ತದ ಸವಾಲು ಎದುರಿಸಲು ಸಾಧ್ಯವಾಗದೇ ಪೇಚಾಡುತ್ತಿದೆ. ರೇಣುಕಾ ಸಿಂಗ್, ಮೇಘನ್ ಶೂಟ್, ಕನಿಕಾ ಅಹುಜಾ ಬೌಲಿಂಗ್ನಲ್ಲಿ ಮಿಂಚಬೇಕಾಗಿದೆ. ಬ್ಯಾಟಿಂಗ್ ವಿಭಾಗದ ಚೈತನ್ಯದ ಪ್ರದರ್ಶನ ನೀಡಿ ದೊಡ್ಡ ಮೊತ್ತ ಪೇರಿಸಲು ಯತ್ನಿಸಬೇಕು.
ಎಲ್ಲಿ ನಡೆಯುತ್ತದೆ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಯುಪಿ ವಾರಿಯರ್ಸ್ ನಡುವಿನ ಪಂದ್ಯ ಮುಂಬಯಿಯ ಬ್ರಬೋರ್ನ್ ಸ್ಟೇಡಿಯಂನಲ್ಲಿ ಸಂಜೆ 7.30 ಕ್ಕೆ ಶುರುವಾಗಲಿದ್ದು, 7 ಗಂಟೆಗೆ ಟಾಸ್ ನಡೆಯಲಿದೆ.
ನೇರ ಪ್ರಸಾರ ಎಲ್ಲಿ
ಸ್ಪೋರ್ಟ್ಸ್ 18 ಚಾನೆಲ್‌ನಲ್ಲಿ ಪಂದ್ಯ ನೇರ ಪ್ರಸಾರವಾಗಲಿದೆ . ಜಿಯೋ ಸಿನಿಮಾ ಆ್ಯಪ್ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ತಂಡಗಳು ಇಂತಿವೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಸ್ಮೃತಿ ಮಂಧಾನ (ನಾಯಕಿ), ರಿಚಾ ಘೋಷ್, ಎಲ್ಲಿಸ್ ಪೆರಿ, ಡಾನ್ ವ್ಯಾನ್ ನೀಕರ್ಕ್, ಕೋಮಲ್ ಜಂಜಾದ್, ಆಶಾ ಶೋಭನಾ, ಎರಿನ್ ಬರ್ನ್ಸ್, ಪ್ರೀತಿ ಬೋಸ್, ರೇಣುಕಾ ಸಿಂಗ್, ಸೋಫಿ ಡಿವೈನ್, ಹೇದರ್ ನೈಟ್, ಮೇಗನ್ ಶೂಟ್, ಕನಿಕಾ ಅಹುಜಾ, ದೀಕ್ಷಾ ಕಸತ್, ಇಂದ್ರಾಣಿ ರಾಯ್, ಪೂನಂ ಖೇಮ್ನಾರ್, ಸಹನಾ ಪವಾರ್, ಶ್ರೇಯಾಂಕಾ ಪಾಟೀಲ್.
ಇದನ್ನೂ ಓದಿ: WPL 2023 : ಮುಂಬಯಿ ಇಂಡಿಯನ್ಸ್ ಅಜೇಯ, ಡೆಲ್ಲಿ ವಿರುದ್ಧ 8 ವಿಕೆಟ್ ಭರ್ಜರಿ ಜಯ
ಯುಪಿ ವಾರಿಯರ್ಸ್: ಅಲಿಸಾ ಹೀಲಿ(ನಾಯಕಿ), ಶ್ವೇತಾ ಸೆಹ್ರಾವತ್, ಕಿರಣ್ ನವಗಿರೆ, ತಹ್ಲಿಯಾ ಮೆಕ್‌ಗ್ರಾತ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ಸಿಮ್ರಾನ್ ಶೇಖ್, ಸೋಫಿ ಎಕ್ಲೆಸ್ಟೋನ್, ಶಬ್ನಿಮ್ ಇಸ್ಮಾಯಿಲ್, ಅಂಜಲಿ ಸರ್ವಾಣಿ, ರಾಜೇಶ್ವರಿ ಗಾಯಕ್ವಾಡ್, ಲಾರ್ ಬೆಲ್‌ರಿಸ್, ಗ್ರೇಸ್ ಬೆಲ್ಲರಿಸ್, ಪಾರ್ಶವಿ ಚೋಪ್ರಾ, ಸೊಪ್ಪದಂಡಿ ಯಶಸ್ರಿ.