ಬೆಂಗಳೂರು: ಹ್ಯಾಕ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಟ್ವಿಟರ್(RCB Twitter Account) ಖಾತೆಯನ್ನು ರಿಸ್ಟೋರ್ ಮಾಡಲಾಗಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಭಾನುವಾರ ಅಧಿಕೃತ ಮಾಹಿತಿ ನೀಡಿದೆ.
ಶನಿವಾರ ಆರ್ಸಿಬಿಯ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಹ್ಯಾಕರ್‌ಗಳು ಡಿಸ್‌ಪ್ಲೇ ಚಿತ್ರವನ್ನು ಬದಲಾಯಿಸಿ ಪ್ರೊಫೈಲ್ ಹೆಸರನ್ನು ‘ಬೋರ್ಡ್ ಏಪ್ ಯಾಚ್ ಕ್ಲಬ್’ ಎಂದು ಬದಲಾಯಿಸಿದ್ದರು. ಜತೆಗೆ ಖಾತೆಯ ಫಾಲೋವರ್ಸ್‌ಗಳು ಆರ್‌ಸಿಬಿ ಟೈಮ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ NFT-ಸಂಬಂಧಿತ ಟ್ವೀಟ್‌ಗಳನ್ನು ರಿಟ್ವೀಟ್ ಮಾಡಿದ್ದರು.
ಟ್ವಿಟರ್ ಹ್ಯಾಕ್ ಆದ ವಿಚಾರ ತಿಳಿದ ಬಳಿಕ ಫ್ರಾಂಚೈಸಿಯೂ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದೆ. ನಮ್ಮ ಖಾತೆಯಿಂದ ಪೋಸ್ಟ್ ಆದ ಯಾವುದೇ ಟ್ವೀಟ್‌ಗಳು ಮತ್ತು ರಿಟ್ವೀಟ್‌ಗಳನ್ನು ಯಾರು ನಂಬಬೇಡಿ. ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಲು ನಾವು ಟ್ವಿಟರ್ ತಂಡದೊಂದಿಗೆ ಕಾರ್ಯನಿರತರಾಗಿದ್ದೇವೆ ಎಂದು ಪ್ರಟನೆಯಲ್ಲಿ ತಿಳಿಸಿತ್ತು.
ಇದೀಗ ಆರ್‌ಸಿಬಿ ತಮ್ಮ ಟ್ವಿಟರ್ ಖಾತೆಯನ್ನು ಮತ್ತೆ ರಿಸ್ಟೋರ್ ಮಾಡುವಲ್ಲಿ ಯಶಸ್ಸು ಕಂಡಿದೆ. ಜತೆಗೆ ಹ್ಯಾಕರ್ಸ್ಗಳು ಡಿಲೀಡ್ ಮಾಡಿದ್ದ ಎಲ್ಲ ಹಳೆಯ ಟ್ವೀಟ್ ಮತ್ತು ಫೋಸ್ಟ್ಗಳನ್ನು ಹಿಂಪಡೆದಿದೆ. ಈ ವಿಚಾರವನ್ನು ಫ್ರಾಂಚೈಸಿ ಟ್ವೀಟ್ ಮೂಲಕ ಖಚಿತ ಪಡಿಸಿದೆ.
ಇದನ್ನೂ ಓದಿ | Women’s IPL | ಮಹಿಳೆಯರ ಐಪಿಎಲ್ನಲ್ಲಿ ಐದು ವಿದೇಶಿ ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ