Site icon Vistara News

RCB Unbox: ಆರ್​ಸಿಬಿ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಅಶ್ವಿನಿ ಪುನೀತ್‌ ರಾಜ್‌ಕುಮಾರ್

Ashwini Puneeth Rajkumar

ಬೆಂಗಳೂರು: ನಿನ್ನೆಯಷ್ಟೇ(ಬುಧವಾರ) ಆರ್‌ಸಿಬಿ ಫ್ರಾಂಚೈಸಿಯು ತನ್ನ ಆರ್‌ಸಿಬಿ ಅನ್‌ಬಾಕ್ಸ್(RCB Unbox) ಕಾರ್ಯಕ್ರಮದ ಮೊದಲ ಟ್ರೇಲರ್ ಬಿಡುಗಡೆ ಮಾಡಿತ್ತು. ಮೊದಲ ಪ್ರೋಮೊದಲ್ಲಿ ರಿಷಬ್​ ಶೆಟ್ಟಿ(Rishabh Shetty) ಕಾಣಿಸಿಕೊಂಡಿದ್ದರು. ಇದೀಗ ಎರಡನೇ ಪ್ರೋಮೊದಲ್ಲಿ ಅಶ್ವಿನಿ ಪುನೀತ್‌ ರಾಜ್‌ಕುಮಾರ್(Ashwini Puneeth Rajkumar) ಕಾಣಿಸಿಕೊಂಡಿದ್ದು, ಆರ್​ಸಿಬಿ(RCB) ಹೆಸರು ಬದಲಾವಣೆಯಾಗುವುದು ಖಚಿತಗೊಂಡಿದೆ.

ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು ಬದಲು ಈ ಬಾರಿಯ ಆವೃತ್ತಿಯಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಗಿ ಬದಲಾಗುವ ಸಾಧ್ಯತೆಯನ್ನು ಮತ್ತೊಮ್ಮೆ ಈ ಟ್ರೇಲರ್ ಸಾರಿ ಹೇಳಿದಂತಿದೆ. ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಆರ್​ಸಿಬಿ ತಂಡದ ಬ್ರ್ಯಾಂಡ್‌ ಅಂಬಾಸಿಡರ್ ಆಗಿದ್ದರು. ಅಂದು ಪುನೀತ್​ ಅವರು ಆರ್​ಸಿಬಿ ಜೆರ್ಸಿಯನ್ನು ತೊಟ್ಟು ಮೈದಾನದಲ್ಲಿ ಕಾಣಿಸಿಕೊಂಡಿದ್ದ ಫೋಟೊವನ್ನು ಈ ಪ್ರೋಮೊದಲ್ಲಿ ಕಾಣಬಹುದಾಗಿದೆ.

ಅಶ್ವಿನಿ ಅವರು ತಮ್ಮ ಲ್ಯಾಪ್​ಟಾಪ್​ನಲ್ಲಿ ಪಾಸ್​ವರ್ಡ್ ಒಂದನ್ನು ಹಾಕಲು ಮುಂದಾಗುತ್ತಾರೆ. ರಾಯಲ್ ಚಾಲೆಂಜರ್ಸ್ ಬ್ಯಾಂಗಳೂರು ಎಂದು ಟೈಪ್​ ಮಾಡುತ್ತಾರೆ. ಆಗ ಲ್ಯಾಪ್​ನಲ್ಲಿ ಹಳೆಯ ಮತ್ತು ಹೊಸ ಪಾಸ್​ವರ್ಡ್​ ಹಾಕುವಂತೆ ಸೂಚನೆಯೊಂದ ಕಾಣುತ್ತದೆ. ಇದೇ ವೇಳೆ ಅಶ್ವಿನ್ ಅವರು ಪಕ್ಕದಲ್ಲೇ ಇದ್ದ ಪುನಿತ್​ ಅವರ ಫೋಟೊವನ್ನು ನೋಡಿ ಬ್ಯಾಂಗಳೂರು ಎಂದು ಇರುವ ಪದವನ್ನು ಅಳಿಸುತ್ತಾರೆ. ಬಳಿಕ ಅರ್ಥ ಆಯ್ತಾ? ಎಂದು ಕೇಳುತ್ತಾರೆ. ಈ ಮೂಲಕ ಬ್ಯಾಂಗಳೂರು ಬದಲು ಬೆಂಗಳೂರು ಎನ್ನುವ ಪದವನ್ನು ಈ ಬಾರಿ ಬಳಸಲಾಗುತ್ತದೆ ಎನ್ನುವ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. ಅಭಿಮಾನಿಗಳ ಬಹು ದಿನದ ಆಗ್ರಹವೂ ಕೂಡ ಇದಾಗಿತ್ತು.


ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ. ಈ ಬಾರಿ ಹೆಸರಿನ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024: ಈ ಬಾರಿಯೂ ಕೆಕೆಆರ್​ಗೆ ಕೈಕೊಡಲಿದ್ದಾರೆ​ ಅಯ್ಯರ್; ಮತ್ತೆ ಕಾಣಿಸಿಕೊಂಡ ​ಬೆನ್ನು ನೋವು

ಬುಧವಾರ ಆರ್​ಸಿಬಿ ಫ್ರಾಂಚೆಸಿ ಹಂಚಿಕೊಂಡಿದ್ದ ಪ್ರೋಮೊದಲ್ಲಿ ಕಾಂತಾರ ಸಿನೆಮಾದಲ್ಲಿ ಶಿವನಾಗಿ ಕಾಣಿಸಿಕೊಂಡಿರುವ ರಿಷಬ್ ಶೆಟ್ಟಿ(Rishab Shetty), ಅವರು ಬಾರು ಕೋಲು ಹಿಡಿದು ಕಂಬಳದ ಕೋಣಗಳನ್ನು ಓಡಿಸಲೆಂದು ಬರುತ್ತಾರೆ. ಈ ವೇಳೆ ಮೂರು ಕೋಣಗಳು ನಿಂತಿರುತ್ತದೆ. ಮೂರು ಕೋಣಗಳ ಮೇಲೆ ರಾಯಲ್​ ಚಾಲೆಂಜರ್ಸ್​ ಬ್ಯಾಂಗಳೂರು (BANGALORE) ಎಂದು ಕೆಂಪು ವಸ್ತ್ರದ ಮೇಲೆ ಇಂಗ್ಲಿಷ್​​ನಲ್ಲಿ ಬರೆದಿರುತ್ತದೆ. ಈ ವೇಳೆ ರಿಷಬ್​ ಅವರು ಬ್ಯಾಂಗಳೂರು ಎಂದು ಬರೆದ ಕೋಣದ ಮೇಲೆ ಕೈ ಇಟ್ಟು ಅರೆ ಇದು ಬೇಡ ಭಟ್ರೆ.. ತೆಗೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಬಳಿಕ ಅರ್ಥ ಆಯ್ತಾ ಎಂದು ಕೇಳುತ್ತಾರೆ. ಆರ್​ಸಿಬಿ ಕೂಡ ಈ ವಿಡಿಯೊಗೆ ‘ರಿಷಬ್ ಶೆಟ್ಟಿ ಎನ್ ಹೇಳ್ತಿದ್ದಾರೆ ಅರ್ಥ ಆಯ್ತಾ?’ ಎಂದು ಕ್ಯಾಪ್ಷನ್​ ನೀಡಿತ್ತು.

ಆರ್​ಸಿಬಿ ಮೊದಲ ಪಂದ್ಯವನ್ನು ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಮಾರ್ಚ್​ 22ರಂದು ಆಡಲಿದೆ. ಇದು ಈ ಬಾರಿಯ ಟೂರ್ನಿಯ ಉದ್ಘಾಟನ ಪಂದ್ಯವಾಗಿದೆ. ಉಭಯ ತಂಡಗಳ ಈ ಸೆಣಸಾಟಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ.

Exit mobile version