ಬೆಂಗಳೂರು: ಆರ್‌ಸಿಬಿ(RCB) ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್‌ಸಿಬಿ ಅನ್ಬಾಕ್ಸ್(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿರುವ ಕಾರ್ಯಕ್ರಮ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಸಮಾರಂಭದಲ್ಲಿ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಚಾಂಪಿಯನ್ ಆಗಿರುವ ಆರ್‌ಸಿಬಿ ಮಹಿಳಾ(rcb women’s team) ತಂಡ ಪಾಲ್ಗೊಳ್ಳಲಿದೆ.
Alan Walker is on his way to Bengaluru! 🎧🎵
— Royal Challengers Bangalore (@RCBTweets) March 14, 2024
Get set for a SPECTRE-cular night at #RCBUnbox on 19th March! 🤩🪩
Only a few tickets left, hurry up 12th Man Army! 🎟️#PlayBold #ನಮ್ಮRCB #RCBxAlanWalker #IPL2024 @IAmAlanWalker pic.twitter.com/aM4cYDQkGC
ಕಳೆದ ವರ್ಷ ಆರ್‌ಸಿಬಿ ಅನ್ಬಾಕ್ಸ್ ಕಾರ್ಯಕ್ರಮದಲ್ಲಿ ಕ್ರಿಸ್ ಗೇಲ್ ಮತ್ತು ಎಬಿ ಡಿ ವಿಲಿಯರ್ ಅವರನ್ನು ಗೌರವಿಸಲಾಗಿತ್ತು. ಈ ಬಾರಿ ಡಬ್ಲ್ಯುಪಿಎಲ್ ಚಾಂಪಿಯನ್ ತಂಡವನ್ನು ಮತ್ತು ಆರ್‌ಸಿಬಿ ಪರ 16 ವರ್ಷಗಳಿಂದ ಕ್ರಿಕೆಟ್ ಆಡುತ್ತಿರುವ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರನ್ನು ಗೌರವಿಸುವ ಕಾರ್ಯಕ್ರಮವನ್ನು ನಿರೀಕ್ಷಿಸಲಾಗಿದೆ. ಈ ಅದ್ದೂರಿ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್, ಅಲಾನ್ ವಾಕರ್(Alan Walker), ನೀತಿ ಮೋಹನ್ ಸೇರಿ ಹಲವು ಸಿಂಗರ್ಗಳು ಪ್ರದರ್ಶನ ನೀಡಲಿದ್ದಾರೆ.
"ಓ, ಲೋಕದ ಕಾಳಜಿ ಮಾಡತೀನಂತಿ,
— Royal Challengers Bangalore (@RCBTweets) March 14, 2024
ನಿಂಗ್ಯಾರ್ ಬ್ಯಾಡಾಂತರ ಮಾಡಪ್ಪ ಚಿಂತಿ…" 🎵🎸
We can’t wait for the 'Raghu Dixit x 12th Man Army' collaboration at #RCBUnbox on 19th March. 👨🎤🪩
Tickets running out 🔜, get 'em now! 🎟️#PlayBold #ನಮ್ಮRCB #IPL2024 #RCBxRaghuDixit @Raghu_Dixit pic.twitter.com/srqrMUdvoA
ಈ ಬಾರಿಯ ಅಚ್ಚರಿಗಳಲ್ಲಪೊಂದು ಹೆಸರು ಬದಲಾವಣೆ. ಬ್ಯಾಂಗಳೂರು ಬದಲಾಗಿ ಬೆಂಗಳೂರು ಎಂದು ನಾಮಕರಣ ಮಾಡುವುದು ಈಗಾಗಲೇ ಖಚಿತವಾಗಿದೆ. ಇನ್ನುಳಿದ ಅಚ್ಚರಿಯ ಸಂಗತಿ ಏನೆಂಬುದನ್ನು ಆರ್‌ಸಿಬಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಮೂಲಗಳ ಪ್ರಕಾರ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯೂ(Virat Kohli) ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
A warm welcome to our #RCBUnbox partners, Johnnie Walker, @Kotak_Life & @Duroflex_world! 👏 #RCBUnbox will be streamed live on RCB Website and App. Subscribe now. Link in Bio. 🔗#PlayBold #ನಮ್ಮRCB pic.twitter.com/XHd5jfmI0X
— Royal Challengers Bangalore (@RCBTweets) March 19, 2024
ಐಪಿಎಲ್ 2024ರ ವೇಳಾಪಟ್ಟಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ನಡುವಿನ ಐಪಿಎಲ್ 2024 ರ ಉದ್ಘಾಟನಾ ಪಂದ್ಯವು ಮಾರ್ಚ್ 22 ರಂದು ಚೆನ್ನೈನ ಎಂಎ ಚಿದಂಬರಂ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ರಾತ್ರಿ 8:00 ಗಂಟೆಗೆ ಪ್ರಾರಂಭವಾಗಲಿದೆ. 17 ನೇ ಆವೃತ್ತಿಯ ಉಳಿದ ಲೀಗ್ ಪಂದ್ಯಗಳು ಮಧ್ಯಾಹ್ನ 3.30 ಮತ್ತು ಸಂಜೆ 7.30 ಕ್ಕೆ ಪ್ರಾರಂಭವಾಗಲಿವೆ.