Site icon Vistara News

WPL 2023 : ಮಹಿಳೆಯರ ಪ್ರೀಮಿಯರ್​ ಲೀಗ್​ಗೆ ಜೆರ್ಸಿ ಅನಾವರಣ ಮಾಡಿದ ಆರ್​ಸಿಬಿ

RCB unveiled the women's Premier League jersey

#image_title

ಬೆಂಗಳೂರು: ಮಹಿಳೆಯ ಪ್ರೀಮಿಯರ್​ ಲೀಗ್ (WPL 2023) ಆರಂಭಕ್ಕೆ ಇನ್ನು ಎರಡನೇ ದಿನಗಳು ಬಾಕಿ ಉಳಿದಿದೆ. ಹೀಗಾಗಿ ಎಲ್ಲ ತಂಡದ ಆಟಗಾರ್ತಿಯರು ತಮ್ಮ ತಮ್ಮ ಕ್ಯಾಂಪ್​ ಸೇರಿಕೊಂಡಿದ್ದಾರೆ. ಏತನಧ್ಯೆ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ (RCB) ತನ್ನ ಜೆರ್ಸಿಯನ್ನು ಅನಾವರಣ ಮಾಡಿದೆ. ಗುರುವಾರ ಆರ್​ಸಿಬಿ ಫ್ರಾಂಚೈಸಿ ತನ್ನ ಟ್ವಿಟರ್​ ಖಾತೆಯಲ್ಲಿ ಮಹಿಳೆಯರ ಐಪಿಎಲ್​ನ ಜೆರ್ಸಿ ಅನಾವರಣದ ಚಿತ್ರಗಳನ್ನು ಪ್ರಕಟಿಸಿದೆ. ಈ ಚಿತ್ರಗಳನ್ನು ನೋಡಿ ಆರ್​ಸಿಬಿ ಅಭಿಮಾನಿಗಳು ಖುಷಿಯಲ್ಲಿದ್ದಾರೆ.

ಜೆರ್ಸಿಯಲ್ಲಿ ತನ್ನ ಪ್ರಾಯೋಜಕರ ಹೆಸರನ್ನು ಅರ್​ಸಿಬಿ ಪ್ರಕಟಿಸಿದೆ. ಕಜಾರಿಯ ಸೆರಾಮಿಕ್ಸ್​, ತನಿಷ್ಕ್​, ಡ್ರೀಮ್​ ಇಲೆವೆನ್​, ವೇಗಾ ಬ್ಯೂಟಿ. ಹಿಮಾಲಯ ಫೇಸ್​ ಕೇರ್​ ಮತ್ತು ಪೂಮಾ ಸಂಸ್ಥೆಯು ಆರ್​ಸಿಬಿ ಜೆರ್ಸಿಯ ಪ್ರಮುಖ ಪ್ರಾಯೋಜಕ ಸಂಸ್ಥೆಗಳಾಗಿವೆ.

ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನಾ, ವಿಕೆಟ್​ ಕೀಪರ್​ ರಿಚಾ ಘೋಷ್​, ವೇಗದ ಬೌಲರ್​ ರೇಣುಕಾ ಸಿಂಗ್​ ಹಾಗೂ ನ್ಯೂಜಿಲ್ಯಾಂಡ್​ ಆಟಗಾರ್ತಿ ಸೋಫಿ ಡಿವೈನ್​ ಜೆರ್ಸಿ ಅನಾವರಣದ ಚಿತ್ರದಲ್ಲಿದ್ದಾರೆ. ಮಾರ್ಚ್​ 5ರಂದು ಆರ್​ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್​ ನಡುವೆ ಮೊದಲ ಪಂದ್ಯ ನಡೆಯಲಿದೆ.

ಡಬ್ಲ್ಯುಪಿಎಲ್​ ಆರ್​ಸಿಬಿ ತಂಡ ಹೀಗಿದೆ

ಸ್ಮೃತಿ ಮಂಧಾನಾ, ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್, ರಿಚಾ ಘೋಷ್, ಇಂದ್ರಾಣಿ ರಾಯ್, ದಿಶಾ ಕಸತ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಆಶಾ ಶೋಭನಾ, ಎರಿನ್ ಬರ್ನ್ಸ್, ಹೇದರ್ ನೈಟ್, ಡೇನ್ ವ್ಯಾನ್ ನಿಕೆರ್ಕ್, ಪ್ರೀತಿ ಬೋಸ್, ಪೂನಂ ಖೆಮ್ನಾರ್, ಕೋಮಲ್ ಝಂಝಾದ್, ಮೇಗನ್ ಶೂಟ್, ಸಹನಾ ಪವಾರ್.

Exit mobile version