ಬೆಂಗಳೂರು: ಸತತ ಸೋಲಿನಿಂದ ಕಂಗೆಟ್ಟು ಸ್ವತಃ ಅಭಿಮಾನಿಗಳಿಂದಲೇ ಟ್ರೋಲ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ತಂಡ ಆ ಬಳಿಕದ ಪಂದ್ಯಗಳಲ್ಲಿ ಸತತವಾಗಿ ಗೆದ್ದು ಯಾರೂ ಕೂಡ ಊಹಿಸದಂತೆ ಪ್ಲೇ ಆಪ್ ರೇಸ್ಗೆ ಬಂದು ನಿಂತಿದೆ. ತನ್ನ ಅಂತಿಮ ಲೀಗ್ ಪಂದ್ಯವನ್ನು ನಾಳೆ(ಶನಿವಾರ) ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ಗೆದ್ದರೆ ಪ್ಲೇ ಆಫ್(RCB’s playoff hopes) ಟಿಕೆಟ್ ಅಧಿಕೃತಗೊಳ್ಳಲಿದೆ. ಆದರೆ, ಆರ್‌ಸಿಬಿ ಪಾಲಿಗೆ ಮಳೆ ವಿಲನ್ ಆಗುವ ಎಲ್ಲ ಸಾಧ್ಯತೆ ಅಧಿಕವಾಗಿ ಗೋಚರಿಸಿದೆ.
ಭಾರೀ ಮಳೆ ಎಚ್ಚರಿಕೆ
ಹವಾಮಾನ ಇಲಾಖೆ ಶನಿವಾರ ಶೇ.89 ರಷ್ಟು ಮಳೆ(Rain forecast for Bengaluru) ಇದೆ ಎಂದು, ಒಂದು ವಾರಗಳ ಹಿಂದೆಯೇ ಎಚ್ಚರಿಕೆ ನೀಡಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಬೆಂಗಳೂರಿನಲ್ಲಿ ಭಾರೀ ಮಳೆಯೂ ಆಗಿದೆ. ಹೀಗಾಗಿ ಶನಿವಾರವೂ ಮಳೆ ಇರುವುದು ಖಚಿತಗೊಂಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಆರ್‌ಸಿಬಿ ಪ್ಲೇ ಆಫ್ನಿಂದ ಹೊರಬೀಳಲಿದೆ. 15 ಅಂಕ ಪಡೆಯುವ ಚೆನ್ನೈ ಪ್ಲೇ ಆಫ್ಗೆ ಎಂಟ್ರಿ ಕೊಡಲಿದೆ. ಈಗಾಗಲೇ ಮೂರು ತಂಡಗಳಾದ ಕೆಕೆಆರ್, ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ಪ್ಲೇ ಆಫ್ ತಲುಪಿದೆ. ಒಂದು ಸ್ಥಾನ ನಾಳೆ ನಿರ್ಧಾರವಾಗಲಿದೆ.
ಒಂದೊಮ್ಮೆ ಆರ್‌ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್ ಟಿಕೆಟ್ ಖಚಿತವಾಗುವುದಿಲ್ಲ. ರನ್‌ರೇಟ್ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಮಣಿಸಬೇಕಿದೆ. ಚೇಸಿಂಗ್ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಸಣ್ಣ ಅಂತರದ ಗೆಲುವು ಕಂಡರೆ ಕಷ್ಟ.
ಇದನ್ನೂ ಓದಿ IPL 2024 : ಮಳೆಯಿಂದ ಪಂದ್ಯ ರದ್ದು, ಕೆಕೆಆರ್, ಆರ್ಆರ್ ಬಳಿಕ ಪ್ಲೇಆಫ್ಗೇರಿದ ಎಸ್ಆರ್ಎಚ್
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಅತ್ಯಾಧುನಿಕ ಸಬ್ ಏರ್ ಸಿಸ್ಟಂ ಹೊಂದಿರುವ ಕಾರಣ. ಮಳೆ ಬಂದರೂ ಶೀಘ್ರವಾಗಿ ಮೈದಾನದಲ್ಲಿನ ನೀರನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಎಷ್ಟೇ ಮಳೆಯಾದರೂ ಕೆಲವೇ ನಿಮಿಷಗಳಲ್ಲಿ ಮೈದಾನವನ್ನು ಸಜ್ಜುಗೊಳಿಸಬಹುದು. ಈ ಕಾರಣದಿಂದಾಗಿ ಬೆಂಗಳೂರಿನಲ್ಲಿ ಮಳೆ ಬಂದರೂ ಸೀಮಿತ ಓವರ್ಗಳ ಪಂದ್ಯವನ್ನು ನಿರೀಕ್ಷಿಸಬಹುದು.
ಚೆನ್ನೈ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಿಸಿ ಬಿಸಿ ಚಹಾ ಕುಡಿದು ಸಂಭ್ರಮಿಸುತ್ತಿದ್ದಾರೆ. ಇದು ನಡೆದಿರುವುದು ಗುರುವಾರ ಬೆಳಗ್ಗೆ ಅಭ್ಯಾಸದ ಅವಧಿಯಲ್ಲಿ. ಚಿನ್ನಸ್ವಾಮಿ ಸ್ಟೇಡಿಯಮ್ಲ್ಲಿದ್ದ ಆರ್‌ಸಿಬಿ ಶಿಬಿರವು ಎಂ.ಎಸ್. ಧೋನಿಯನ್ನು ಬಿಸಿ ಕಪ್ ಚಹಾದೊಂದಿಗೆ ಸ್ವಾಗತಿಸಿತು. ಆರ್‌ಸಿಬಿ ಡ್ರೆಸ್ಸಿಂಗ್ ರೂಮ್ಗೆ ಭೇಟಿ ನೀಡಿದ ಧೋನಿಗೆ ತಂಡದ ಸಹಾಯಕ ಸಿಬ್ಬಂದಿ ಬಿಸಿ ಬಿಸಿ ಚಹಾವನ್ನು ನೀಡಿ ಸತ್ಕರಿಸಿದರು. ಬೆಂಗಳೂರಿನ ಮೋಡ ಮುಸುಕಿದ ಹವಾಮಾನದ ನಡುವೆ, ಧೋನಿ ತಮ್ಮ ತರಬೇತಿಯ ಸಮಯದಲ್ಲಿ ತಮ್ಮ ನೆಚ್ಚಿನ ಪಾನೀಯ ಸೇವಿಸಿದರು.