Site icon Vistara News

RCB vs CSK: ಆರ್​ಸಿಬಿ ಪ್ಲೇ ಆಫ್​ ಹಾದಿಗೆ ಕೊಳ್ಳಿ ಇಡಲಿದೆಯೇ ಮಳೆ; ಹವಾಮಾನ ಇಲಾಖೆ ನೀಡಿದ ಮುನ್ಸೂಚನೆ ಏನು?

RCB Vs CSK

ಬೆಂಗಳೂರು: ಆರಂಭಿಕ ಹಂತದಲ್ಲಿ ಸತತ ಸೋಲಿನ ಸುಳಿಗೆ ಸಿಲುಕಿದ್ದ ಕನ್ನಡಿಗರ ನೆಚ್ಚಿನ ತಂಡವಾದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs CSK) ತಂಡ ಇನ್ನೇನು ಟೂರ್ನಿಯಿಂದ(IPL 2024) ಹೊರಬೀಳಬೇಕು ಎನ್ನುವಷ್ಟರಲ್ಲಿ ಉತ್ಕೃಷ್ಟ ಮಟ್ಟದ ಹೋರಾಟ ನೀಡುವ ಮೂಲಕ ಸತತ 5, ಒಟ್ಟು 6 ಪಂದ್ಯಗಳನ್ನು ಗೆದ್ದು ಪ್ಲೇ ಆಫ್​ ರೇಸ್​ನಲ್ಲಿ ತಾನು ಕೂಡ ಪ್ರತಿಸ್ಪರ್ಧಿ ಎನ್ನುವಂತೆ ಕಾಣಿಸಿಕೊಂಡಿದೆ.

ಸದ್ಯ ಅಂಕಪಟ್ಟಿಯಲ್ಲಿ 5ನೇ ಸ್ಥಾನಿಯಾಗಿರುವ ಆರ್​ಸಿಬಿ ತನ್ನ ಕೊನೆಯ ಪಂದ್ಯವನ್ನು ತವರಿನಲ್ಲಿ ಮೇ 18ರಂದು ಬದ್ಧ ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆಡಲಿದೆ. ಉಭಯ ತಂಡಗಳಿಗೂ ಇದು ಕೊನೆಯ ಲೀಗ್​ ಪಂದ್ಯವಾಗಿದೆ. ಜತೆಗೆ ಪ್ಲೇ ಆಪ್​ ಪ್ರವೇಶಿಸಬೇಕಿದ್ದರೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಇತ್ತಂಡಗಳದ್ದು. ಒಂದೆಡೆ ಆರ್​ಸಿಬಿ ಅಭಿಮಾನಿಗಳು ಮತ್ತೊಂದೆಡೆ ಚೆನ್ನೈ ಅಭಿಮಾನಿಗಳು ಪಂದ್ಯ ನೋಡುವುದಕ್ಕಾಗಿ ಚಾಕತ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಆದರೆ ಈ ಪಂದ್ಯ ನಡೆಯುವುದು ಅನುಮಾನ ಎನ್ನುವ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ.

ಇದನ್ನೂ ಓದಿ IPL 2024 Points Table: ಟೂರ್ನಿಯಿಂದ ಹೊರಬಿದ್ದ ಗುಜರಾತ್​ ಟೈಟಾನ್ಸ್​

ಹೌದು, ಪಂದ್ಯ ನಡೆಯುವ ಮೇ 18 ಶನಿವಾರದಂದು ಬೆಂಗಳೂರಿನಲ್ಲಿ ಭಾರೀ ಮಳೆಯಾಗಲಿದೆ(Rain likely to interrupt RCB Vs CSK match) ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಮಳೆಯಾಗುತ್ತಿದೆ. ಜತೆಗೆ ಪಕ್ಕದ ರಾಜ್ಯ ಕೇರಳ, ಮಹಾರಾಷ್ಟದಲ್ಲಿಯೂ ಮಳೆಯಾಗುತ್ತಿದೆ. ಸೋಮವಾರ ಅಹಮದಾಬಾದ್​ನಲ್ಲಿ ಸುರಿದ ಭಾರೀ ಮಳೆಯಿಂದ ಗುಜರಾತ್​ ಮತ್ತು ಕೆಕೆಆರ್​ ನಡುವಣ ಪಂದ್ಯ ಟಾಸ್​ ಕೂಡ ಕಾಣದೆ ರದ್ದುಗೊಂಡಿತ್ತು. ಪಂದ್ಯ ರದ್ದುಗೊಂಡ ಕಾರಣ ಗುಜರಾತ್​ ತಂಡ ಪ್ಲೇ ಆಫ್​ ರೇಸ್​ ಅತ್ಯಂ ಕಂಡು ಟೂರ್ನಿಯಿಂದ ಹೊರಬಿದ್ದ ಸಂಕಟಕ್ಕೆ ಸಿಲುಕಿತು. ಇದೀಗ ಆರ್​ಸಿಬಿ ಪಂದ್ಯಕ್ಕೂ ಮಳೆ ಭೀತಿ ಎದುರಾಗಿರುವುದು ತಂಡ ಸೇರಿ ಅಭಿಮಾನಿಗಳಿಗೂ ಆತಂಕಪಡುವಂತೆ ಮಾಡಿದೆ.

ಆರ್​ಸಿಬಿ ಗೆದ್ದರೂ ಪ್ಲೇ ಆಫ್​ ಟಿಕೆಟ್​ ಖಚಿತವಲ್ಲ!


ಒಂದೊಮ್ಮೆ ಆರ್​ಸಿಬಿ ತಂಡ ಚೆನ್ನೈ ವಿರುದ್ಧ ಗೆದ್ದರೂ ಕೂಡ ಪ್ಲೇ ಆಫ್​ ಟಿಕೆಟ್​ ಖಚಿತವಾಗುವುದಿಲ್ಲ. ಉಳಿದ ಕೆಲವು ತಂಡಗಳು ಸೋತರಷ್ಟೇ ಆರ್‌ಸಿಬಿಗೆ ಪ್ಲೇ ಆಫ್ ಸಾಧ್ಯ. ರನ್‌ರೇಟ್‌ ಲೆಕ್ಕಾಚಾರದಲ್ಲಿ ಚೆನ್ನೈಯನ್ನು ಆರ್‌ಸಿಬಿ ಕನಿಷ್ಠ 18 ರನ್ನುಗಳಿಂದ ಗೆಲ್ಲಬೇಕಿದೆ. ಚೇಸಿಂಗ್‌ ಲೆಕ್ಕಾಚಾರ ಬೇರೆಯೇ ಇದೆ. ಕನಿಷ್ಠ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು. ಒಂದೊಮ್ಮೆ ಉಳಿದಿರುವ 2 ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ಗೆದ್ದರೆ, ಸನ್​ರೈಸರ್ಸ್ ಹೈದರಾಬಾದ್​ ಒಂದು ಪಂದ್ಯ ಗೆದ್ದರೆ ಆಗ ಆರ್​ಸಿಬಿ ಟೂರ್ನಿಯಿಂದ ಅಧಿಕೃತವಾಗಿ ಹೊರಬೇಳಲಿದೆ. ಏಕೆಂದರೆ ಈ ತಂಡಗಳಿಗೆ 16 ಅಂಕ ಸಿಗಲಿದೆ.

Exit mobile version