Site icon Vistara News

RCB vs CSK: ರಾವತ್, ಕಾರ್ತಿಕ್​ ಬ್ಯಾಟಿಂಗ್​ ಸಾಹಸ; ಸ್ಪರ್ಧಾತ್ಮಕ ಮೊತ್ತ ಪೇರಿಸಿದ ಆರ್​ಸಿಬಿ

Dinesh Karthik and Anuj Rawat's stand rescued RCB

ಚೆನ್ನೈ: ಆಪದ್ಬಾಂಧವ ಅನುಜ್​ ರಾವತ್​(48) ಮತ್ತು ದಿನೇಶ್​ ಕಾರ್ತಿಕ್(38*)​ ಅವರ ಕೊನೆಯ ಕ್ಷಣದ ಬ್ಯಾಟಿಂಗ್​ ಹೋರಾಟದ ನೆರವಿನಿಂದ ರಾಯಲ್​ ಚಾಜೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ 17ನೇ ಆವೃತ್ತಿಯ ಐಪಿಎಲ್​(IPL 2024) ಉದ್ಘಾಟನ ಪಂದ್ಯದಲ್ಲಿ 6 ವಿಕೆಟ್​ಗೆ 173 ರನ್​ ಬಾರಿಸಿದೆ. ಎದುರಾಳಿ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ಗೆಲುವಿಗೆ ರನ್​ 174 ಬಾರಿಸಬೇಕಿದೆ.

ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಆರ್​ಸಿಬಿ(RCB vs CSK) ಉತ್ತಮ ಆರಂಭ ಪಡೆದರೂ ಕೂಡ ಈ ಜೋಶ್​ ಹೆಚ್ಚು ಕಾಲ ಉಳಿಯಲಿಲ್ಲ. ನಾಯಕ ಡು ಪ್ಲೆಸಿಸ್​(35) ರೂಪದಲ್ಲಿ ಮೊದಲ ವಿಕೆಟ್​ ಪತನಗೊಂಡಿತು. ಈ ಆಘಾತವನ್ನು ಅರಗಿಸಿಕೊಳ್ಳವಷ್ಟರಲ್ಲಿ ರಜತ್​ ಪಾಟೀದಾರ್​(0) ಮತ್ತು ಸ್ಟಾರ್​ ಆಲ್​ರೌಂಡರ್​ ಗ್ಲೆನ್​ ಮ್ಯಾಕ್ಸ್​ವೆಲ್​(0) ಖಾತೆ ತೆರೆಯದೆ ಪೆವಿಲಿಯನ್​ ಸೇರಿದರು. 42 ರನ್​ ರನ್​ಗೆ 3 ವಿಕೆಟ್​ ಪತನಗೊಂಡಿತು.

2 ತಿಂಗಳ ಬಳಿಕ ಕ್ರಿಕೆಟ್​ಗೆ ಮರಳಿದ ಕಿಂಗ್​ ಖ್ಯಾತಿಯ ವಿರಾಟ್​ ಕೊಹ್ಲಿ ಕೇವಲ 21 ರನ್​ ಗಳಿಸಿದರು. ಈ ಮೊತ್ತಕ್ಕೆ 20 ಎಸೆತಗಳನ್ನು ಎದುರಿಸಿದರು. ಸಿಡಿದದ್ದು ಒಂದು ಸಿಕ್ಸರ್​. ಬಾಂಗ್ಲಾದೇಶದ ಚತ್ತೋಗ್ರಾಮ್‌ನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಸ್ನಾಯು ಸೆಳೆತಕ್ಕೆ ಒಳಗಾಗಿ ಸ್ಟ್ರೆಚರ್‌ ಮೂಲಕ ಕರೆದೊಯ್ಯಲಾಗಿದ್ದ ಮುಸ್ತಫಿಜುರ್‌ ರೆಹಮಾನ್‌ ಅವರು ಘಾತಕ ಬೌಲಿಂಗ್​ ನಡೆಸಿ ಅಗ್ರ ಕ್ರಮಾಂಕದ 4 ವಿಕೆಟ್​ ಉಡಾಯಿಸಿ ಆರ್​ಸಿಬಿಗೆ ಕೊಳ್ಳಿ ಇಟ್ಟರು. ಕ್ಯಾಮರೂನ್​ ಗ್ರೀನ್(18)​ ಕ್ಲೀನ್​ ಬೌಲ್ಡ್​ ಆದರು.

ಇದನ್ನೂ ಓದಿ IPL 2024: ಐಪಿಎಲ್​ ಜಾತ್ರೆ ಶುರು; ಇನ್ನು ದೇಶದಲ್ಲಿ ಕ್ರಿಕೆಟ್​ ಪ್ರಿಯರದ್ದೇ ಹವಾ

ತಂಡವನ್ನು ಕಾಪಾಡಿದ ರಾವತ್-ಕಾರ್ತಿಕ್​


ಇನ್ನೇನು 100 ರನ್​ ಒಳಗಡೆ ಗಂಟುಮೂಟೆ ಕಟ್ಟುವ ಸ್ಥಿತಿಯಲ್ಲಿದ್ದ ಆರ್​ಸಿಬಿಗೆ ಆಸರೆಯಾದದ್ದು ದಿನೇಶ್​ ಕಾರ್ತಿಕ್​ ಮತ್ತು ಅನುಜ್​ ರಾವತ್​. ಉಭಯ ಆಟಗಾರರು ಸೇರಿಕೊಂಡು ಜವಾಬ್ದಾರಿಯುವ ಬ್ಯಾಟಿಂಗ್​ ನಡೆಸಿ ತಂಡದ ವೈಯಕ್ತಿಕ ಹಾಗೂ ತಂಡದ ಮೊತ್ತವನ್ನು ಹಿಗ್ಗಿಸಿದರು. 6ನೇ ವಿಕೆಟ್​ಗೆ ಈ ಜೋಡಿ ಅತ್ಯಮೂಲ್ಯ 95 ರನ್​ ಬಾರಿಸಿತು. ಉಭಯ ಆಟಗಾರರು ನಿಂತು ಆಡಿದ ಪರಿಣಾಮ ತಂಡ 150 ಗಡಿ ದಾಟಿ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. ತುಷಾರ್​ ದೇಶ್​ಪಾಂಡೆ ಎಸೆತ 18ನೇ ಓವರ್​ನಲ್ಲಿ 25 ರನ್​ ಹರಿದು ಬಂತು. ಇದರಲ್ಲಿ ರಾವುತ್​ 2 ಸಿಕ್ಸರ್​ ಮತ್ತು 1 ಫೋರ್ ಬಾರಿಸಿದರೆ, ಕಾರ್ತಿಕ್​ ಒಂದು ಸಿಕ್ಸರ್​ ಸಿಡಿಸಿದರು. 4 ಬೌಂಡರಿ ಮತ್ತು 3 ಸೊಗಸಾದ ಸಿಕ್ಸರ್​ ಬಾರಿಸಿದ ಅನುಜ್​ ರಾವತ್ 48 ರನ್​ ಗಳಿಸಿ ಅಂತಿಮ ಎಸೆತದಲ್ಲಿ ಧೋನಿ ಅವರಿಂದ ರನೌಟ್​ ಆದರು. ದಿನೇಶ್​ ಕಾರ್ತಿಕ್​ 26 ಎಸೆತಗಳಿಂದ 38 ರನ್​ ಬಾರಿಸಿ ಅಜೇಯರಾಗಿ ಉಳಿದರು. ಸ್ಪಿನ್​ ಟ್ರ್ಯಾಕ್​ ಆಗಿದ್ದರೂ ಕೂಡ ಲಂಕಾದ ಸ್ಪಿನ್ನರ್​ ಮಹೇಶ್ ತೀಕ್ಷಣ ಮತ್ತು ರವೀಂದ್ರ ಜಾಡೇಜ ತಲಾ 4 ಓವರ್​ ಎಸೆದರೂ ವಿಕೆಟ್​ ಕೀಳುವಲ್ಲಿ ವಿಫಲರಾದರು.

ಅದ್ಧೂರಿ ಉದ್ಘಾಟನಾ ಸಮಾರಂಭ


ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ವರ್ಣರಂಜಿತ ಚಾಲನೆ(IPL 2024 Opening Ceremony Live) ದೊರಕಿತು. ಬಾಲಿವುಡ್‌ ತಾರೆಯರಾದ ಅಕ್ಷಯ್‌ ಕುಮಾರ್‌(Akshay Kumar), ಟೈಗರ್‌ ಶ್ರಾಫ್(Tiger Shroff) ನೃತ್ಯದ ಮೂಲಕ ರಂಚಿಸಿದರೆ, ಆಸ್ಕರ್‌ ವಿಜೇತ ಎ.ಆರ್​ ರೆಹಮಾನ್​(AR Rahman), ಖ್ಯಾತ ಗಾಯಕ ಸೋನು ನಿಗಮ್‌(Sonu Nigam) ದೇಶಭಕ್ತಿ ಗೀತೆಗಳನ್ನು ಹಾಡಿ, ಪ್ರೇಕ್ಷಕರನ್ನು ಹುಚ್ಚೆಬ್ಬಿಸಿ ಕುಣಿಯುಂತೆ ಮಾಡಿದರು. ಇದರ ಜತೆಗೆ ಸ್ವೀಡನ್‌ನ ಡಿಜೆ, ಆಕ್ಸ್‌ವೆಲ್‌ ಪಾಪ್‌ ಗಾಯನ ಕಣ್ಮನಸೆಳೆಯಿತು.

Exit mobile version