Site icon Vistara News

RCB vs CSK: ಆರ್​ಸಿಬಿಗೆ ಸಿದ್ದರಾಮಯ್ಯ, ಶಿವಣ್ಣ, ರಿಷಬ್​ ಶೆಟ್ಟಿ, ಗೇಲ್​ ಸೇರಿ ಗಣ್ಯರ ಸಪೋರ್ಟ್​

RCB vs CSK

ಬೆಂಗಳೂರು: ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ ಕಣಕ್ಕಿಳಿದಿದೆ. ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು ತವರಿನ ತಂಡಕ್ಕೆ ಬೆಂಬಲ ಸೂಚಿಸಲು ರಾಜಕೀಯ ಗಣ್ಯರು, ಸಿನೆಮಾ ನಟ ನಟಿಯರು ಹಾಜರಾಗಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್‌, ನಟ ಶಿವರಾಜ್​ ಕುಮಾರ್​, ರಿಷಬ್​ ಶೆಟ್ಟಿ ಸೇರಿ ಅನೇಕರು ಚಿನ್ನಸ್ವಾಮಿ ಸ್ಟೇಡಿಯಂಗೆ ಬಂದಿದ್ದಾರೆ. ಶಿವರಾಜ್​ ಕುಮಾರ್​ ಆರ್​ಸಿಬಿಯ ಜೆರ್ಸಿ ತೊಟ್ಟು ಗಮನಸೆಳೆದಿದ್ದಾರೆ. ಗಣ್ಯರ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆರ್.ಸಿ.ಬಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಐಪಿಎಲ್ ಪಂದ್ಯ ವೀಕ್ಷಿಸಿದೆ. ಈ ನಿರ್ಣಾಯಕ ಪಂದ್ಯದಲ್ಲಿ ನಮ್ಮವರು ಗೆದ್ದು ಮುಂದಿನ ಹಂತಕ್ಕೆ ಹೋಗಲಿ ಎಂಬ ಹಾರೈಕೆ ನನ್ನದು ಎಂದು ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

ಆರ್​ಸಿಬಿಗೆ ಸಪೋರ್ಟ್​ ಮಾಡಲು ಮಹಿಳಾ ಆರ್​ಸಿಬಿ ತಂಡದ ನಾಯಕಿ ಸ್ಮೃತಿ ಮಂಧಾನ, ತಂಡದ ಆಟಗಾರ್ತಿಯರಾದ ಶ್ರೇಯಾಂಕ ಪಾಟೀಲ್​,ಆಶಾ ಶೋಭನಾ ಹಾಗೂ ಇತರೆ ಆಟಗಾರ್ತಿಯರು ಕೂಡ ಹಾಜರಾಗಿದ್ದಾರೆ. ಆರ್​ಸಿಬಿ ಮಾಜಿ ಆಟಗಾರ ಕ್ರಿಸ್​ ಗೇಲ್​ ಕೂಡ 333 ನಂಬರ್​ನ ಆರ್​ಸಿಬಿ ಜೆರ್ಸಿಯಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದಾರೆ.

ಪಂದ್ಯವನ್ನು ಆರ್​ಸಿಬಿ ತಂಡ ಗೆಲ್ಲುತ್ತದೆ ಎಂದು ಮಹಿಳಾ ಆಟಗಾರ್ತಿಯರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಫೋಟೋವನ್ನು ಕನ್ನಡತಿ ಶ್ರೇಯಾಂಕ ಪಾಟೀಲ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹ್ಯಾಟ್ರಿಕ್​ ಹೀರೊ ಶಿವರಾಜ್​ ಕುಮಾರ್​ ಅವರು ಆರ್​ಸಿಬಿ ಜೆರ್ಸಿ ತೊಟ್ಟ ಫೋಟೊವನ್ನು ಅವರ ಅಧಿಕೃತ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡು ಯೋ ಬರ್ಕಯ್ಯ.. ಪೇಪರ್ ಮುಂದಾಗಡೆ ಬರ್ಕೊ, ಇವತ್ತು ಗೆಲ್ಲೋದು ನಮ್ ಆರ್​ಸಿಬಿ ಹುಡುಗರೇ ಎಂದು ಬರೆದುಕೊಂಡಿದ್ದಾರೆ.

ನೆಟ್‌ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ (0.528). ಆರ್‌ಸಿಬಿ 0.387 ರನ್‌ರೇಟ್‌ ಹೊಂದಿದೆ. ಹೀಗಾಗಿ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಬೇಕಾದರೆ, ಆರ್‌ಸಿಬಿ ಕನಿಷ್ಠ 18 ರನ್‌ ಅಂತರದಿಂದ ಗೆಲ್ಲಬೇಕು ಅಥವಾ 11 ಎಸೆತ ಬಾಕಿ ಇರುವಾಗಲೇ ಗುರಿ ಮುಟ್ಟಬೇಕು ಆಗ ಮಾತ್ರ ಆರ್​ಸಿಬಿ ಪ್ಲೇ ಆಫ್​ ಪ್ರವೇಶಿಸಲಿದೆ. ಈ ಎರಡು ಲೆಕ್ಕಾಚಾರದ ಗೆಲುವು ಒಲಿಯದೇ ಹೋದರೆ ಆರ್​ಸಿಬಿ ನಿರಾಸೆಗೆ ಒಳಗಾಗಲಿದೆ. 5ನೇ ಸ್ಥಾನಿಯಾಗಿ ಟೂರ್ನಿಯಿಂದ ನಿರ್ಗಮಿಸಲಿದೆ. ಚೆನ್ನೈ ಮುನ್ನಡೆಗೆ ಸಾಮಾನ್ಯ ಗೆಲುವು ಸಾಕು. 16 ಅಂಕ ಗಳಿಸಿ 4ನೇ ತಂಡವಾಗಿ ಪ್ಲೇ ಆಫ್​ಗೆ ಲಗ್ಗೆ ಇಡಲಿದೆ.

Exit mobile version