Site icon Vistara News

RCB vs KKR: ಕೆಕೆಆರ್​ ಸವಾಲು ಸುಲಭದ್ದಲ್ಲ; ಚಿನ್ನಸ್ವಾಮಿಯಲ್ಲಿ ಆರ್​ಸಿಬಿ ದಾಖಲೆ ಹೇಗಿದೆ?

RCB

ಬೆಂಗಳೂರು: ಶುಕ್ರವಾರದ ಐಪಿಎಲ್(IPL 2024)​ ಪಂದ್ಯದಲ್ಲಿ ಕೆಕೆಆರ್​ ಮತ್ತು ಆರ್​ಸಿಬಿ(RCB vs KKR) ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯವನ್ನು ವಿರಾಟ್​ ಕೊಹ್ಲಿ vs ಗೌತಮ್​ ಗಂಭೀರ್​ ಎಂದೇ ನಿರ್ಧರಿಸಲಾಗಿದೆ. ಇದಕ್ಕೆ ಕಾರಣ ಉಭಯ ಆಟಗಾರರ ನಡುವಣ ಹಾವು ಮುಂಗುಸಿಯಂತಹ ಕಚ್ಚಾಟ. ಹೀಗಾಗಿ ಈ ಪಂದ್ಯವನ್ನು ಹೈವೋಲ್ಟೇಜ್​ ಪಂದ್ಯ ಎಂದು ನಿರೀಕ್ಷಿಸಲಾಗಿದೆ. ಆದರೆ, ತವರಿನಲ್ಲಿ ಕೆಕೆಆರ್(RCB vs kkr chinnaswamy stadium records)​ ವಿರುದ್ಧ ಆರ್​ಸಿಬಿ ದಾಖಲೆ ಅಷ್ಟು ಉತ್ತಮವಾಗಿಲ್ಲ.

ಚಿನ್ನಸ್ವಾಮಿ ಮುಖಾಮುಖಿ ದಾಖಲೆ


ಆರ್​ಸಿಬಿ ಮತ್ತು ಕೆಕೆಆರ್​ ಚಿನ್ನಸ್ವಾಮಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ಒಟ್ಟು 11 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಆರ್​ಸಿಬಿ ಗೆದ್ದದ್ದು ಕೇವಲ 4 ಪಂದ್ಯಗಳು ಮಾತ್ರ. ಕೆಕೆಆರ್​ 7 ಪಂದ್ಯಗಳನ್ನು ಗೆದ್ದಿದೆ. ಕಳೆದ 2016 ರಿಂದ ಚಿನ್ನಸ್ವಾಮಿಯಲ್ಲಿ ನಡೆದ 5 ಪಂದ್ಯಗಳಲ್ಲಿಯೂ ಕೆಕೆಆರ್​ ತಂಡವೇ ಗೆದ್ದು ಬೀಗಿದೆ. ಒಟ್ಟಾರೆಯಾಗಿ ಆರ್​ಸಿಬಿ ಈ ಸ್ಟೇಡಿಯಂನಲ್ಲಿ 94 ಪಂದ್ಯಗಳನ್ನು ಆಡಿ 45 ಗೆಲುವು ಮತ್ತು 44 ಸೋಲು ಕಂಡಿದೆ. ಕೆಕೆಆರ್​ ತಂಡ ಇಲ್ಲಿ 17 ಪಂದ್ಯಗಳನ್ನಾಡಿ 11ರಲ್ಲಿ ಜಯ ಸಾಧಿಸಿದೆ. ಆರ್​ಸಿಬಿಗೆ ಹೋಲಿಸಿದರೆ ಕೆಕೆಆರ್​ ತಂಡವೇ ಈ ಮೈದಾನದಲ್ಲಿ ಉತ್ತಮ ದಾಖಲೆ ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿಯೂ ಕೆಕೆಆರ್​ ತಂಡವೇ ಗೆಲ್ಲುವ ಫೇವರಿಟ್ ಆಗಿ ಗೋಚರಿಸಿದೆ.


ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ಮೈದಾನದಲ್ಲಿ ಎರಡು ಬಾರಿ ಜಗಳವಾಡಿದ್ದಾರೆ. ಎರಡೂ ಸಂದರ್ಭಗಳು ಐಪಿಎಲ್​ನಲ್ಲಾಗಿದ್ದವು. 2013 ರಲ್ಲಿ ಆಟಗಾರರಾಗಿ ಮತ್ತು ನಂತರ ಒಂದು ದಶಕದ ನಂತರ 2023 ರಲ್ಲಿ, ಆಯಾ ತಂಡಗಳ ಆಟಗಾರ ಮತ್ತು ತರಬೇತುದಾರರಾಗಿ ಅವರಿಬ್ಬರ ನಡುವೆ ವಾಗ್ವಾದ ನಡೆದಿತ್ತು. ಇದರ ಮುಂದುವರಿದ ಭಾಗ ಇಂದು ನಡೆಯುವ ಪಂದ್ಯದಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ. ಕೊಹ್ಲಿ ಶಾಂತ ರೀತಿಯಿಂದ ವರ್ತಿಸಿದರೂ ಕೂಡ ಅವರ ಅಭಿಮಾನಿಗಳು ಗಂಭೀರ್​ ಅವರನ್ನು ಕೆಣಕುವುದಲ್ಲಿ ಅನುಮಾನವೇ ಬೇಡ. ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿದ್ದಾರೆ.

ಇದನ್ನೂ ಓದಿ IPL 2024: ಐಪಿಎಲ್‌ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಆರ್‌.ಅಶ್ವಿ‌ನ್‌!

ಸಂಭಾವ್ಯ ತಂಡಗಳು


ಆರ್​ಸಿಬಿ: ಫಾಫ್​ ಡು ಪ್ಲೆಸಿಸ್‌ (ನಾಯಕ), ವಿರಾಟ್​ ಕೊಹ್ಲಿ, ರಜತ್​ ಪಾಟಿದಾರ್‌, ಗ್ಲೆನ್​ ಮ್ಯಾಕ್ಸ್‌ವೆಲ್‌, ಕ್ಯಾಮರೂನ್​ ಗ್ರೀನ್‌, ದಿನೇಶ್​ ಕಾರ್ತಿಕ್‌, ಅನೂಜ್​ ರಾವತ್‌, ಮಯಾಂಕ್​ ಡಾಗರ್‌, ಅಲ್ಜಾರಿ ಜೋಸೆಫ್/ ರೀಸ್​ ಟಾಪ್ಲೆ, ಮೊಹಮ್ಮದ್​ ಸಿರಾಜ್‌, ಯಶ್​ ದಯಾಳ್‌.

ಕೆಕೆಆರ್​: ಫಿಲ್​ ಸಾಲ್ಟ್, ಸುನೀಲ್​ ನರೈನ್​, ವೆಂಕಟೇಶ್​ ಅಯ್ಯರ್‌, ಶ್ರೇಯಸ್‌ ಅಯ್ಯರ್​ (ನಾಯಕ), ನಿತೀಶ್‌ ರಾಣಾ , ರಮಣ್‌ದೀಪ್‌ ಸಿಂಗ್​, ರಿಂಕು ಸಿಂಗ್​, ಆ್ಯಂಡ್ರೆ ರಸೆಲ್‌, ಮಿಚೆಲ್​ ಸ್ಟಾರ್ಕ್‌, ಹರ್ಷಿತ್‌ ರಾಣಾ, ಮಿಥುನ್​ ಚಕ್ರವರ್ತಿ.

Exit mobile version