Site icon Vistara News

RCB vs LSG: ಮೋಡ ಕವಿದ ವಾತಾವರಣ; ಆರ್​ಸಿಬಿ-ಲಕ್ನೋ ಪಂದ್ಯಕ್ಕೆ ಮಳೆ ಭೀತಿ!

RCB vs LSG

ಬೆಂಗಳೂರು: ಹೆಸರಿಗೆ ಮಾತ್ರ ಕನ್ನಡಿಗರ ತಂಡವಾದ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB vs LSG) ಮತ್ತು ರಿಯಲ್​ ಕನ್ನಡಿಗರೇ ನೆಚ್ಚಿಕೊಂಡಿರುವ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​ ತಂಡಗಳು ಇಂದು ನಡೆಯುವ ಐಪಿಎಲ್​ನ(IPL 2024) 15ನೇ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ. ಈ ಪಂದ್ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಆದರೆ, ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು ಪಂದ್ಯಕ್ಕೆ ಮಳೆಯ ಭೀತಿ ಕಂಡು ಬಂದಿದೆ.

ಹವಾಮಾನ ವರದಿ


ಈಗಾಗಲೇ ಹವಾಮಾನ ಇಲಾಖೆ ಏಪ್ರಿಲ್​ 2 ಮತ್ತು 3ಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಿತ್ತು. ಇದೀಗ ಬೆಂಗಳೂರು ಸೇರಿ ರಾಜ್ಯದ ಕೆಲವೆಡೆ ಬೆಳಗ್ಗಿನಿಂದಲೇ ಭಾರೀ ಮೋಡ ಕಬವಿದ ವಾತಾವರಣ ಕಂಡುಬಂದಿದೆ. ರಾತ್ರಿಯ ವೇಳೆ ಮಳೆ ಬರುವ ಸಂಭವ ಕೂಡ ಇದೆ. ಹೀಗಾಗಿ ಪಂದ್ಯಕ್ಕೂ ಮಳೆ ಭೀತಿ ಕಾಡಿದೆ. ಒಂದೊಮ್ಮೆ ಮಳೆ ಬಂದು ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ.

ಪಿಚ್ ವರದಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್​​ ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಕಡಿಮೆ ಅಂತರದ ಬೌಂಡರಿಗಳೊಂದಿಗೆ ಹೆಚ್ಚಿನ ಸ್ಕೋರಿಂಗ್ ಮುಖಾಮುಖಿ ಇಲ್ಲಿ ಮಾಮೂಲಿ. ಸ್ಪಿನ್ನರ್​ಗಳಿಗೆ ಅಲ್ಪ ಸಹಾಯ ಮಾಡುವ ಈ ಪಿಚ್​ ತಾಳ್ಮೆ ವಹಿಸಿದ ಬ್ಯಾಟರ್​ಗಳಿಗೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತದೆ. ಟಾಸ್ ಗೆದ್ದ ನಾಯಕ ಚೇಸಿಂಗ್ ಮಾಡಲು ಮುಂದಾಗುತ್ತಾರೆ.

ಇದನ್ನೂ ಓದಿ IPL 2024 Points Table: ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಗ್ರಸ್ಥಾನ ಪಡೆದ ರಾಜಸ್ಥಾನ್​; ಉಳಿದ ತಂಡದ ಸ್ಥಿತಿ ಹೇಗಿದೆ?

ಸಂಭಾವ್ಯ ಆಡುವ ಬಳಗ

ಲಕ್ನೊ ಸೂಪರ್ ಜೈಂಟ್ಸ್​​: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ (ವಿಕೆ), ದೇವದತ್ ಪಡಿಕ್ಕಲ್, ನಿಕೋಲಸ್ ಪೂರನ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.

ಆರ್​ಸಿಬಿ : ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್​, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.

ಇತ್ತಂಡಗಳ ಮುಖಾಮುಖಿ

Exit mobile version