Site icon Vistara News

RCB vs LSG: ಆರ್​ಸಿಬಿಗೆ ಇಂದು ರಾಹುಲ್​ನದ್ದೇ ಚಿಂತೆ; ಕಾರಣವೇನು?

RCB vs LSG

ಬೆಂಗಳೂರು: ಆರ್​ಸಿಬಿ ಮತ್ತು ಲಕ್ನೋ(RCB vs LSG) ತಂಡಗಳು ಇಂದು ನಡೆಯುವ ಐಪಿಎಲ್(IPL 2024)​ ಪಂದ್ಯದಲ್ಲಿ ಸೆಣಸಾಟ ನಡೆಸಲಿವೆ. ಈ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೇ ನಡೆಯಲಿದೆ. ಆರ್​ಸಿಬೆಗೆ ಇದು ತವರಿನ ಪಂದ್ಯವಾಗಿದ್ದರೂ ಕೂಡ ಎದುರಾಳಿ ತಂಡದ ರಾಹುಲ್​ನದ್ದೇ ದೊಡ್ಡ ಚಿಂತೆಯಾಗಿದೆ. ಇದಕ್ಕೆ ಕಾರಣ ರಾಹುಲ್(KL Rahul)​ ಅವರು ಆರ್​ಸಿಬಿ ವಿರುದ್ಧ ಹೊಂದಿರುವ ಉತ್ತಮ ದಾಖಲೆ.

ಹೌದು, ಆರ್​ಸಿಬಿ ವಿರುದ್ಧ ರಾಹುಲ್​ ಅವರು ಇದುವರೆಗೆ 14 ಇನಿಂಗ್ಸ್​ ಆಡಿದ್ದಾರೆ. 69.78 ಎವರೇಜ್​ನಲ್ಲಿ ಬ್ಯಾಟ್​ ಬೀಸಿ 628 ರನ್​ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕ ಬಾರಿಸಿದ್ದಾರೆ. ಸ್ಟ್ರೇಕ್​ ರೇಟ್(144.04)​ ಕೂಡ ಉತ್ತವಾಗಿದೆ. ಇದು ಮಾತ್ರವಲ್ಲದೆ ರಾಹುಲ್​ಗೆ ಇದು ತವರು ಮೈದಾನವಾಗಿದೆ. ಈಗಾಗಲೇ ಅವರು ತಾನು ಆಡಿ ಬೆಳೆದ ತವರಿನ ಮೈದಾನದಲ್ಲಿ ಆಡುವುದೇ ಒಂದು ಖಷಿ ಎಂದು ಪಂದ್ಯ ಆರಂಭಕ್ಕೂ ಮುನ್ನವೇ ಹೇಳಿದ್ದಾರೆ. ಒಟ್ಟಾರೆಯಾಗಿ ಆರ್​ಸಿಬಿಗೆ ಇಂದು ರಾಹುಲ್​ ಅವರನ್ನು ಕಟ್ಟಿ ಹಾಕುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಇಂಪ್ಯಾಕ್ಟ್​ ಪ್ಲೇಯರ್​


ತೊಡೆ ಸಂದು ನೋವಿನಿಂದ ಬಳಲುತ್ತಿರುವ ರಾಹುಲ್​ ಅವರು ಈ ಪಂದ್ಯದಲ್ಲಿ ಇಂಪ್ಯಾಕ್ಟ್​ ಆಟಗಾರನಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಕಳೆದ ಪಂದ್ಯದಲ್ಲಿಯೂ ಅವರು ಇಂಪ್ಯಾಕ್ಟ್ ಆಟಗಾರನಾಗಿ ಆಡಿ ಬ್ಯಾಟಿಂಗ್​ ಮಾತ್ರ ಮಾಡಿದ್ದರು. ನಿಕೋಲಸ್​ ಪೂರನ್​ ಪಂದ್ಯದ ನಾಯಕತ್ವ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲಿಯೂ ಇದೇ ಪಾತ್ರ ನಿರ್ವಹಿಸುವ ಸಾಧ್ಯತೆ ಅಧಿಕವಾಗಿದೆ. ಕ್ವಿಂಟನ್​ ಡಿ ಕಾಕ್​ ಕೀಪಿಂಗ್​ ನಡೆಸಲಿದ್ದಾರೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಪಿಚ್​​ ಬ್ಯಾಟರ್​ಗಳಿಗೆ ಸ್ವರ್ಗವಾಗಿದೆ. ಕಡಿಮೆ ಅಂತರದ ಬೌಂಡರಿಗಳೊಂದಿಗೆ ಹೆಚ್ಚಿನ ಸ್ಕೋರಿಂಗ್ ಮುಖಾಮುಖಿ ಇಲ್ಲಿ ಮಾಮೂಲಿ. ಸ್ಪಿನ್ನರ್​ಗಳಿಗೆ ಅಲ್ಪ ಸಹಾಯ ಮಾಡುವ ಈ ಪಿಚ್​ ತಾಳ್ಮೆ ವಹಿಸಿದ ಬ್ಯಾಟರ್​ಗಳಿಗೆ ದೊಡ್ಡ ಮೊತ್ತ ಪೇರಿಸಲು ನೆರವಾಗುತ್ತದೆ. ಟಾಸ್ ಗೆದ್ದ ನಾಯಕ ಚೇಸಿಂಗ್ ಮಾಡಲು ಮುಂದಾಗುತ್ತಾರೆ.

ಇತ್ತಂಡಗಳ ಮುಖಾಮುಖಿ


ಇದನ್ನೂ ಓದಿ IPL 2024: ಕೋಲ್ಕೊತಾ ನೈಟ್​ ರೈಡರ್ಸ್​ ಸವಾಲು ಮೀರುವುದೇ ಡೆಲ್ಲಿ ಕ್ಯಾಪಿಟಲ್ಸ್​?

ಸಂಭಾವ್ಯ ಆಡುವ ಬಳಗ

ಲಕ್ನೊ ಸೂಪರ್ ಜೈಂಟ್ಸ್​​: ಕೆಎಲ್ ರಾಹುಲ್, ಕ್ವಿಂಟನ್ ಡಿ ಕಾಕ್ (ವಿಕೆ), ದೇವದತ್ ಪಡಿಕ್ಕಲ್, ನಿಕೋಲಸ್ ಪೂರನ್ (ನಾಯಕ), ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಆಯುಷ್ ಬಡೋನಿ, ರವಿ ಬಿಷ್ಣೋಯ್, ಮೊಹ್ಸಿನ್ ಖಾನ್, ಮಯಾಂಕ್ ಯಾದವ್, ಮಣಿಮಾರನ್ ಸಿದ್ಧಾರ್ಥ್.

ಆರ್​ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್​ವೆಲ್​, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್, ವಿಜಯಕುಮಾರ್ ವೈಶಾಕ್.

Exit mobile version