Site icon Vistara News

RCB vs MI: ಮುಂಬೈ ಪಂದ್ಯಕ್ಕೆ ಆರ್​ಸಿಬಿ ತಂಡದಲ್ಲಿ ಹಲವು ಬದಲಾವಣೆ

RCB vs MI

ಮುಂಬಯಿ: ಆಡಿದ 5 ಪಂದ್ಯಗಳಲ್ಲಿ ನಾಲ್ಕು ಪಂದ್ಯ ಸೋಲು ಕಂಡಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡ ಇಂದು ನಡೆಯುವ ಐಪಿಎಲ್​ನ(IPL 2024) 25ನೇ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್(RCB vs MI)​ ಮುಂಬೈ ಇಂಡಿಯನ್ಸ್​(Mumbai Indians) ವಿರುದ್ಧ ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಆರ್​ಸಿಬಿ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವುದು ಖಚಿತವಾಗಿದೆ.

ಎಲ್ಲ 5 ಪಂದ್ಯಗಳಲ್ಲಿಯೂ ಘೋರ ಬ್ಯಾಟಿಂಗ್​ ವೈಫಲ್ಯ ಕಂಡ ಆಸ್ಟ್ರೇಲಿಯಾದ ಆಟಗಾರರಾದ ಕ್ಯಾಮೆರೂನ್​ ಗ್ರೀನ್​ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್​ಗೆ ಈ ಪಂದ್ಯಕ್ಕೆ ಕೊಕ್​ ನೀಡುವುದು ಬಹುತೇಕ ಖಚಿತ. ಇವರ ಬದಲು 25 ವರ್ಷದ ಸ್ಟಾರ್​ ಆಲ್​ರೌಂಡರ್​ ವಿಲ್ ಜ್ಯಾಕ್ಸ್ ಮತ್ತು  ನ್ಯೂಜಿಲ್ಯಾಂಡ್​ನ ಲಾಕಿ ಫರ್ಗ್ಯುಸನ್​ ಕಣಕ್ಕಿಳಿಯಬಹುದು. ರಜತ್​ ಪಾಟಿದಾರ್​ ಸ್ಥಾನದಲ್ಲಿ ಅನುಜ್​ ರಾವುತ್​ ಆಡಬಹುದು.

ಆರ್​ಸಿಬಿ ತಂಡದಲ್ಲಿ ಆಟಗಾರರ ಬದಲಾವಣೆ ಮಾಡಬೇಕು ಎನ್ನುವ ಕೂಗು ಸ್ವತಃ ತಂಡದ ಅಭಿಮಾನಿಗಳಿಂದಲೇ ಕೇಳಿ ಬಂದಿದೆ. ಸ್ಟಾರ್​ ಆಟಗಾರರಿದ್ದರೂ ಕೂಡ ಅವರನ್ನು ಬೆಂಚ್​ ಕಾಯಿಸುತ್ತಿರುವ ತಂಡದ ಮ್ಯಾನೇಜ್​ಮೆಂಟ್ ವಿರುದ್ಧ ಭಾರೀ ಟೀಕೆ ಕೇಳಿ ಬಂದಿದೆ. ಒಂದೊಮ್ಮೆ ಆರ್​ಸಿಬಿ ಈ ಪಂದ್ಯಕ್ಕೂ ಬದಲಾವಣೆ ಮಾಡದೆ ಹೋದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ಕೊಹ್ಲಿ ತಂಡಕ್ಕೆ ನೆರವಾದರೂ ಕೂಡ ಅವರ ಬ್ಯಾಟಿಂಗ್​ ವೇಗಕ್ಕೆ ಚುರುಕು ಮುಟ್ಟಿಸಬೇಕಿದೆ. ​

ಪಿಚ್​ ರಿಪೋರ್ಟ್​


ವಾಂಖೆಡೆ ಸ್ಟೇಡಿಯಂ ಸಾಮಾನ್ಯವಾಗಿ ಬ್ಯಾಟರ್‌ಗಳು ದೊಡ್ಡ ಮೊತ್ತ ಗಳಿಸಲು ಸಹಾಯ ಮಾಡುತ್ತದೆ. ಮೊದಲು ಬ್ಯಾಟಿಂಗ್ ಮಾಡುವ ತಂಡ ಇದನ್ನು ತಮ್ಮ ಅನುಕೂಲಕ್ಕೆ ತಕ್ಕ ರೀತಿಯಲ್ಲಿ ಬಳಸಿಕೊಂಡು ದೊಡ್ಡ ಸ್ಕೋರ್ ಮಾಡಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು. ಆದಾಗ್ಯೂ, ಸಂಜೆಯ ವೇಳೆ ಇಲ್ಲಿ ಇಬ್ಬನಿಯು ಸಮಸ್ಯೆ ಕಂಡು ಬರುವ ಕಾರಣ ಚೇಸಿಂಗ್​ ನಡೆಸುವ ತಂಡಕ್ಕೆ ಹೆಚ್ಚಿನ ಲಾಭ ಸಿಗಲಿದೆ. ಇದುವರೆಗೆ 111 ಪಂದ್ಯಗಳಲ್ಲಿ 60 ಬಾರಿ ಚೇಸಿಂಗ್​ ನಡೆಸಿದ ತಂಡಗಳೇ ಇಲ್ಲಿ ಗೆದ್ದು ಬೀಗಿದೆ. ಹೀಗಾಗಿ ಟಾಸ್​ ಗೆದ್ದ ತಂಡ ಫೀಲ್ಡಿಂಗ್​ಗೆ ಮೊದಲ ಆಧ್ಯತೆ ನಿಡಲಿದೆ. ಈ ಪಿಚ್​ನಲ್ಲಿ ವೇಗಿಗಳು ಇಲ್ಲಿಯವರೆಗೆ 887 ವಿಕೆಟ್‌ಗಳನ್ನು, ಸ್ಪಿನ್ನರ್‌ಗಳು 367 ವಿಕೆಟ್​ಗಳನ್ನು ಪಡೆದಿದ್ದಾರೆ. ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 169.

ಇದನ್ನೂ ಓದಿ IPL 2024: ಸೋಲಿನ ಆಘಾತದ ಮಧ್ಯೆ ಸಂಜುಗೆ ಬಿತ್ತು 12 ಲಕ್ಷ ರೂ. ದಂಡ

ಹವಾಮಾನ


ಪಂದ್ಯ ಆರಂಭವಾದಾಗ ಮುಂಬೈನಲ್ಲಿ ತಾಪಮಾನ ಸುಮಾರು 30 ಡಿಗ್ರಿ ಇರಲಿದೆ. ಪಂದ್ಯದ ಅಂತ್ಯದ ವೇಳೆಗೆ ಇದು 28 ಡಿಗ್ರಿಗಳಿಗೆ ಇಳಿಯಲಿದೆ. ಹಗಲಿನಲ್ಲಿ 31 ಡಿಗ್ರಿ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತನ್ನ ವರದಿಯಲ್ಲಿ ತಿಳಿಸಿದೆ.

ಸಂಭಾವ್ಯ ತಂಡ


ಮುಂಬೈ ಇಂಡಿಯನ್ಸ್​:
 ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಮೊಹಮ್ಮದ್ ನಬಿ, ರೊಮಾರಿಯೋ ಶೆಫರ್ಡ್, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್​ಪ್ರೀತ್​ ಬುಮ್ರಾ.

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನೂಜ್​ ರಾವುತ್​, ಲಾಕಿ ಫರ್ಗ್ಯುಸನ್, ವಿಲ್ ಜ್ಯಾಕ್ಸ್ , ದಿನೇಶ್ ಕಾರ್ತಿಕ್ (ವಿಕೆಟ್​ ಕೀಪರ್​), ಸೌರವ್ ಚೌಹಾಣ್, ರೀಸ್ ಟೋಪ್ಲಿ, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್, ಯಶ್ ದಯಾಳ್.

Exit mobile version