Site icon Vistara News

RCB vs PBKS: ತವರಿನಲ್ಲಿ ಗೆಲುವಿನ ಖಾತೆ ತೆರೆದೀತೇ ಆರ್​ಸಿಬಿ? ಪಂಜಾಬ್​ ಎದುರಾಳಿ

Waiting for that one mate who said Faf should open the bowling on Monday!

ಬೆಂಗಳೂರು: ಈ ಬಾರಿಯ ಐಪಿಎಲ್​ನ(IPL 2024) ಉದ್ಘಾಟನ ಪಂದ್ಯದಲ್ಲಿ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB vs PBKS) ತಂಡ ಗೆಲುವಿನ ಇದಾರೆಯೊಂದಿಗೆ ದ್ವಿತೀಯ ಪಂದ್ಯವನ್ನಾಡಲು ಸಜ್ಜಾಗಿದೆ. ಸೋಮವಾರ ನಡೆಯುವ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್​ ತಂಡದ ಸವಾಲು ಎದುರಿಸಲಿದೆ. ಆರ್​ಸಿಬಿಗೆ ಇದು ಮೊದಲ ತವರಿನ ಪಂದ್ಯವಾಗಿದ್ದು, ತವರಿನ ಸಂಪೂರ್ಣ ಲಾಭವೆತ್ತುವ ಯೋಜನೆಯಲ್ಲಿದೆ.

ಫೀಲ್ಡಿಂಗ್​ ಒಕೆ


ಪ್ರತಿ ಸೀಸನ್​ನಲ್ಲಿಯೂ ಕಳಪೆ ಫೀಲ್ಡಿಂಗ್​ ಮಾಡುತ್ತಿದ್ದ ಆರ್​ಸಿಬಿ ಈ ಬಾರಿ ತನ್ನ ಫೀಲ್ಡಿಂಗ್​ ವಿಭಾಗವನ್ನು ಸುಧಾರಿಸಿಕೊಂಡಿದೆ. ಇದು ಕಳೆದ ಪಂದ್ಯದಲ್ಲಿ ಸಾಬೀತಾಗಿತ್ತು. ಚೆನ್ನೈ ವಿರುದ್ಧದ ಪಂದ್ಯದಲ್ಲಿ ಎಲ್ಲ ಆಟಗಾರರು ಕೂಡ ಪಾದರಸದ ವೇಗದಲ್ಲಿ ಫೀಲ್ಡಿಂಗ್​ ನಡೆಸಿದ್ದರು. ಆದರೆ, ತಂಡಕ್ಕೆರಿವ ದೊಡ್ಡ ಚಿಂತೆ ಸೂಕ್ತ ಸ್ಪಿನ್ನರ್​ ಇಲ್ಲದೆ ಇರುವುದು. ಕರ್ಣ್​ ಶರ್ಮ ಅವರು ತಂಡದಲ್ಲಿದ್ದರೂ ಕೂಡ ಅವರು ಸ್ಟಾರ್​ ಸಿನ್ನರ್​ ಅಲ್ಲ. ವೇಗದ ಬೌಲಿಂಗ್​ ಕೂಡ ಪರಿಣಾಮಕಾರಿಯಾಗಿಲ್ಲ. ಸಿರಾಜ್​, ಜೋಸೆಫ್​ ಕಳೆದ ಪಂದ್ಯದಲ್ಲಿ ದುಬಾರಿಯಾಗಿ ಕಂಡು ಬಂದಿದ್ದರು. ಹೀಗಾಗಿ ಇವರು ತಮ್ಮ ಎಸೆತಗಳಿಗೆ ಸಾಣೆ ಹಿಡಿಯಬೇಕಿದೆ.

ಆರ್​ಸಿಬಿಯ ಬ್ಯಾಟಿಂಗ್​ ಕೂಡ ಚೇತರಿಕೆ ಕಾಣಬೇಕಿದೆ. ಘೋರ ಬ್ಯಾಟಿಂಗ್​ ವೈಫಲ್ಯ ಕಾಣುತ್ತಿರುವ ರಜತ್ ಪಾಟಿದಾರ್ ಕಳೆದ ಪಂದ್ಯದಲ್ಲಿ ಶೂನ್ಯ ಸುತ್ತಿದ್ದರು. ಈ ಹಿಂದೆ ಇಂಗ್ಲೆಂಡ್​ ವಿರುದ್ಧದ ತವರಿನ ಟೆಸ್ಟ್​ನಲ್ಲಿಯೂ ಅವರು ಹಲವು ಶೂನ್ಯ ಸಂಪಾದಿಸಿದ್ದರು. ಹೀಗಾಗಿ ಅವರನ್ನು ಆಡುವ ಬಳಗದಿಂದ ಕೈಬಿಡಬೇಕು ಎನ್ನುವುದು ಆರ್​ಸಿಬಿ ಅಭಿಮಾನಿಗಳ ಒತ್ತಾಸೆಯೂ ಆಗಿದೆ. ವಿರಾಟ್​ ಕೊಹ್ಲಿ ಕೂಡ ಟಿ20 ಶೈಲಿಯ ಆಟಕ್ಕೆ ತಕ್ಕ ಪ್ರದರ್ಶನ ತೋರುತ್ತಿಲ್ಲ. ಎಸೆತವೊಂದಕ್ಕೆ ರನ್​ ಗಳಿಸುತ್ತಿದ್ದಾರೆ. ಈ ಆಟ ಟಿ20ಯಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ಹೊಡಿ ಬಡಿ ಆಟವೇ ಪ್ರಧಾನ. ಕೊಹ್ಲಿ ಕೂಡ ತಮ್ಮ ಬ್ಯಾಟಿಂಗ್​ಗೆ ಚುರುಕು ಮುಟ್ಟಿಸುವ ಅಗತ್ಯವಿದೆ.

ಇದನ್ನೂ ಓದಿ IPL 2024: ಈ ಬಾರಿ ಮೋದಿ ಸ್ಟೇಡಿಯಂಗಿಲ್ಲ ಐಪಿಎಲ್​ ಫೈನಲ್​ ಪಂದ್ಯದ ಆತಿಥ್ಯ

ಪಂಜಾಬ್​ ಸಮರ್ಥವಾಗಿದೆ


ಪಂಜಾಬ್​ ಕಿಂಗ್ಸ್​ ತಂಡ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡೂ ವಿಭಾಗದಲ್ಲಿಯೂ ಸಮರ್ಥವಾಗಿದೆ. ಅದರದಲ್ಲೂ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸುವ ಇಂಗ್ಲೆಂಡ್​ನ ಲಿಯಾಮ್​ ಲಿವಿಂಗ್​ಸ್ಟೋನ್ ಮತ್ತು ಸ್ಯಾಮ್​ ಕರನ್​ ಯಾವುದೇ ಹಂತದಲ್ಲಿಯೂ ಸಿಡಿದು ನಿಂತು ಪಂದ್ಯದ ಗತಿಯನ್ನೇ ಬದಲಿಸಬಲ್ಲರು. ಇದಕ್ಕೆ ಕಳೆದ ಡೆಲ್ಲಿ ವಿರುದ್ಧದ ಪಂದ್ಯವೇ ಉತ್ತಮ ನಿದರ್ಶನ. ನಾಯಕ ಶಿಖರ್​ ಧವನ್​ ಕೂಡ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಆರಂಭ ಒದಗಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ಕಗಿಸೊ ರಬಾಡ, ಆಶ್​ದೀಪ್​ ಸಿಂಗ್​, ರಾಹುಲ್ ಹಚರ್​ ಎದುರಾಳಿಗಳನ್ನು ಕಟ್ಟಿಹಾಕುವಲ್ಲಿ ಸಮರ್ಥರಿದ್ದಾರೆ. ಆದರೆ ಆರ್​ಸಿಬಿ ಮಾಜಿ ಬೌಲರ್​ ಹರ್ಷಲ್​ ಪಟೇಲ್​ ಮಾತ್ರ ಲಯ ಕಳೆದುಕೊಂಡಿದ್ದಾರೆ.

ಸಂಭಾವ್ಯ ತಂಡಗಳು


ಪಂಜಾಬ್​: ಶಿಖರ್ ಧವನ್ (ನಾಯಕ), ಜಾನಿ ಬೈರ್‌ಸ್ಟೋವ್, ಸ್ಯಾಮ್ ಕರನ್, ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಶರ್ಮಾ (ವಿಕೆಟ್​ ಕೀಪರ್​), ಶಶಾಂಕ್ ಸಿಂಗ್, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ರಾಹುಲ್ ಚಹಾರ್, ಅರ್ಶ್‌ದೀಪ್ ಸಿಂಗ್.

ಆರ್​ಸಿಬಿ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್‌ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್​ ಕೀಪರ್​), ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಮಯಾಂಕ್ ದಾಗರ್, ಮೊಹಮ್ಮದ್ ಸಿರಾಜ್.

Exit mobile version