Site icon Vistara News

RCB vs RR: ರಾಯಲ್ಸ್​ ಬ್ಯಾಟಲ್​ನಲ್ಲಿ ಯಾರಿಗೆ ಒಲಿಯಲಿದೆ ವಿಜಯ ಮಾಲೆ?

RCB vs RR

ಜೈಪುರ: ತವರಿನ ಅಂಗಳದಲ್ಲಿ ಸತತವಾಗಿ ಸೋಲು ಕಂಡ ಅವಮಾನಕ್ಕೆ ಸಿಲುಕಿರುವ ರಾಯಲ್‌ ಚಾಲೆಂಜರ್ ಬೆಂಗಳೂರು(Royal Challengers Bengaluru) ತಂಡ ತವರಿನಚೆಯ ಪಂದ್ಯವನ್ನಾಡಲು ಸಿದ್ಧವಾಗಿದೆ. ಶನಿವಾರ ನಡೆಯುವ ಪಂದ್ಯದಲ್ಲಿ ಅಜೇಯ ರಾಜಸ್ಥಾನ್​ ರಾಯಲ್ಸ್(Rajasthan Royals) ತಂಡದ​ ಸವಾಲು ಎದುರಿಸಲಿದೆ. ಪಂದ್ಯಕ್ಕೂ ಮುನ್ನವೇ ಆರ್​ಸಿಬಿಯ(RCB vs RR) ಅಭಿಮಾನಿಗಳು ಈ ಪಂದ್ಯ ಕೂಡ ಗೆಲ್ಲುವ ವಿಶ್ವಾಸವಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಕಾರಣ ತಂಡದ ಕಳಪೆ ಪ್ರದರ್ಶನ.

ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡಗಳಲ್ಲಿ ಒಂದಾಗಿರುವ ಆರ್​ಸಿಬಿ ತನ್ನ ಅತ್ಯಂತ ಕಳಪೆ ಪ್ರದರ್ಶನದಿಂದಾಗಿ ಸ್ವತಃ ಅಭಿಮಾನಿಗಳಿಂದಲೇ ಟೀಕೆಗೆ ಗುರಿಯಾಗಿದೆ. ಅದರಲ್ಲೂ ಸ್ಟಾರ್​ ಆಟಗಾರನಾಗಿರುವ ವಿರಾಟ್​ ಕೊಹ್ಲಿ ಮತ್ತು ಫ್ರಾಂಚೈಸಿಯ ಆಡಳಿತ ಮಂಡಳಿಯ ಬಗ್ಗೆ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೆಲ್ಲದರ ವಿಡಿಯೊಗಳು ಕಳೆದ ಕೆಲವು ದಿನಗಳಿಂದ ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಟೂರ್ನಿ ಆರಂಭಕ್ಕೂ ಮುನ್ನ ಕೊಹ್ಲಿ ಈ ಬಾರಿ ಹೊಸ ಅಧ್ಯಾಯ ಎಂದು ಹೇಳಿದ್ದರು. ಈ ವೇಳೆ ಆರ್​ಸಿಬಿ ಅಭಿಮಾನಿಗಳು ಕೂಡ ಬಳಹ ಕುತೂಹಲಗೊಂಡಿದ್ದರು. ಆದರೆ ಇದೀಗ ಸ್ವತಃ ಆರ್​ಸಿಬಿ ಅಭಿಮಾನಿಗಳೇ ತಮ್ಮ ತಂಡವನ್ನು ಟ್ರೋಲ್ ಮಾಡುತ್ತಿದ್ದಾರೆ. ಅಧ್ಯಾಯ ಹೊಸತು ಆದರೆ ಇದರಲ್ಲಿರುವ ಪುಟ ಹಳೆಯದ್ದು ಎಂದು ಹೇಳಲಾರಂಭಿಸಿದ್ದಾರೆ. ಇದೀಗ ಎಲ್ಲ ಟೀಕೆಗಳನ್ನು ಮೆಟ್ಟಿನಿಂತು ಮುಂದಿನ ಪಂದ್ಯದಲ್ಲಿ ಗೆಲುವಿನ ಹಳಿ ಏರಬೇಕಾದ ಅನಿವಾರ್ಯತೆ ಆರ್​ಸಿಬಿ ಆಟಗಾರರ ಮುಂದಿದೆ. ಇದಕ್ಕೆ ನಾಳಿನ ರಾಜಸ್ಥಾನ್ ವಿರುದ್ಧದ ಪಂದ್ಯದಿಂದಲೇ ಗೆಲುವು ಕಾಣಬೇಕು.

ಇದನ್ನೂ ಓದಿ IPL 2024: ಮುಂಬೈ ತಂಡ ಸೇರಿದ ಸೂರ್ಯಕುಮಾರ್‌; ಡೆಲ್ಲಿ ವಿರುದ್ಧ ಕಣಕ್ಕೆ

ಅಸ್ಥಿರ ಪ್ರದರ್ಶನ


ಆರ್​ಸಿಬಿ ತಂಡದ ಹೊಡ್ಡ ಸಮಸ್ಯೆಯೆಂದರೆ ಅಸ್ಥಿರ ಪ್ರದರ್ಶನ. ಬ್ಯಾಟಿಂಗ್​ನಲ್ಲಿ ಕ್ಲಿಕ್​ ಆದರೆ ಬೌಲಿಂಗ್​ನಲ್ಲಿ ವೈಫಲ್ಯ, ಬೌಲಿಂಗ್​ ಉತ್ತಮವಾಗಿದ್ದರೆ, ಬ್ಯಾಟಿಂಗ್ ಕಳಪೆ ಇದು ತಂಡದ ಸೋಲಿಗೆ ಪ್ರಮುಖ ಕಾರಣ. ಇದನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಇನ್ನೂ ಕೂಡ ಸೋಲು ಕಾಣುವುದರಲ್ಲಿ ಅನುಮಾನವೇ ಬೇಡ. ಜತೆಗೆ ವಿರಾಟ್​ ಕೊಹ್ಲಿಯ ಆಮೆಗತಿಯ ಬ್ಯಾಟಿಂಗ್​. ಆರಂಭಿಕನಾಗಿ ಕಣಕ್ಕಿಳಿದು ನಿಧಾನಗತಿಯಿಂದ ಬ್ಯಾಟಿಂಗ್​ ನಡೆಸುತ್ತಾರೆ. ಇದು ಟಿ20ಯಲ್ಲಿ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ. ಇಲ್ಲಿ ಹೊಡಿ-ಬಡಿ ಆಡವೇ ಮುಖ್ಯ. 80 ರನ್​ ಬಾರಿಸಿದರೂ ಕೂಡ ಅವರು 70 ಎಸೆತ ಎದುರಿಸುತ್ತಾರೆ. ಬೇರೆ ತಂಡದ ಪರ ಅನಾನುಭವಿ ಆಟಗಾರರು ಕೂಡ ತಾವೆದುರಿಸಿದ ಕನಿಷ್ಠ 7-8 ಎಸೆತಗಳಿಂದ 20ಕ್ಕಿಂತ ಹೆಚ್ಚಿನ ರನ್​ ಬಾರಿಸಿ ತಂಡದ ಬೃಹತ್​ ಮೊತ್ತಕ್ಕೆ ಕಾರಣರಾಗುತ್ತಾರೆ. ಟಿ20ಯಲ್ಲಿ ರಕ್ಷಣಾತ್ಮ ಆಟ ಎನ್ನುವ ಮಾತೆ ಇಲ್ಲ. ಹೀಗಾಗಿ ಕೊಹ್ಲಿ ವಿಕೆಟ್​ ರಕ್ಷಣಾತ್ಮ ಆಟದ ಮನಸ್ಥಿತಿಯಿಂದ ಹೊರ ಬಂದು ಬಿರುಸಿನ ಬ್ಯಾಟಿಂಗ್​ ನಡೆಸಬೇಕಿದೆ.

ರಾಜಸ್ಥಾನ್​ ಬಲಿಷ್ಠ


ರಾಜಸ್ಥಾನ್​ ತಂಡ ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಬಲಿಷ್ಠವಾಗಿದೆ. ಈ ತಂಡ ಕೇವಲ ಒಂದೆರಡು ಆಟಗಾರರ ಪ್ರದರ್ಶನವನ್ನು ನೆಚ್ಚಿಕೊಂಡು ಆಡುತ್ತಿಲ್ಲ. ಜೈಸ್ವಾಲ್​, ಬಟ್ಲರ್​ ಇದುವರೆಗೂ ಫಾರ್ಮ್​ ಕಂಡುಕೊಳ್ಳದಿದ್ದರೂ ತಂಡಕ್ಕೆ ಯಾವುದೇ ಹಿನ್ನಡೆಯಾಗಿಲ್ಲ. ಆಡಿದ ಮೂರು ಪಂದ್ಯಗಳನ್ನು ಕೂಡ ಗೆದ್ದಿದೆ. ಯಾರಾದರೊಬ್ಬರು ಸಿಡಿದು ನಿಂತು ತಂಡವನ್ನು ಗೆಲ್ಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್​ನಲ್ಲಿ ಆರ್​ಸಿಬಿ ಮಾಜಿ ಸ್ಪಿನ್ನರ್​ ಯಜುವೇಂದ್ರ ಚಹಲ್​, ಆರ್​ ಅಶ್ವಿನ್, ಟ್ರೆಂಟ್​ ಬೌಲ್ಟ್​, ಬರ್ಗರ್​, ಸಂದೀಪ್​ ಶರ್ಮ, ಅವೇಶ್​ ಖಾನ್​ ಎಲ್ಲರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡಿದ ಅನುಭವಿಗಳೆ. ಹೀಗಾಗಿ ಇವರಿಗೆ ಎದುರಾಳಿ ಆಟಗಾರರನ್ನು ಹೇಗೆ ಕಟ್ಟಿ ಹಾಕಬೇಕೆನ್ನುವುದು ಸ್ಪಷ್ಟವಾಗಿ ತಿಳಿದಿದೆ.

ಸಂಭಾವ್ಯ ತಂಡ

ಆರ್​ಸಿಬಿ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಕ್ಯಾಮರೂನ್ ಗ್ರೀನ್, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ದಿನೇಶ್ ಕಾರ್ತಿಕ್, ಅನುಜ್ ರಾವತ್ (ವಿಕೆಟ್​ ಕೀಪರ್​), ಮಯಾಂಕ್ ಡಾಗರ್, ರೀಸ್ ಟೋಪ್ಲಿ, ಮೊಹಮ್ಮದ್ ಸಿರಾಜ್, ಯಶ್ ದಯಾಲ್.

ರಾಜಸ್ಥಾನ್​: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ಶಿಮ್ರಾನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಅವೇಶ್ ಖಾನ್, ನಾಂದ್ರೆ ಬರ್ಗರ್, ಯುಜ್ವೇಂದ್ರ ಚಹಾಲ್.

Exit mobile version