Site icon Vistara News

WPL 2023 : ಆರ್​ಸಿಬಿ ತಂಡಕ್ಕೆ ಹೊಸ ಮಹಿಳಾ ಕೋಚ್​

RCB Women Team

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಹಿಳಾ ತಂಡವು ಮುಂಬರುವ (WPL 2023) ಡಬ್ಲ್ಯುಪಿಎಲ್ ಆವೃತ್ತಿಗೆ ಲ್ಯೂಕ್ ವಿಲಿಯಮ್ಸ್ ಅವರನ್ನು ಹೊಸ ಕೋಚ್ ಆಗಿ ನೇಮಿಸಲು ಸಜ್ಜಾಗಿದೆ. ಮಹಿಳಾ ಪ್ರೀಮಿಯರ್ ಲೀಗ್​​ನ ಆರಂಭಿಕ ಆವೃತ್ತಿಯಲ್ಲಿ ಸ್ಮೃತಿ ಮಂಧಾನಾ ಮತ್ತು ತಂಡವು ದಯನೀಯ ಪ್ರದರ್ಶನ ನೀಡಿತ್ತು. ಇದು ಈಗ ಕೆಲವು ಬದಲಾವಣೆಗಳನ್ನು ಮಾಡಲು ತಂಡದ ಮ್ಯಾನೇಜ್ಮೆಂಟ್​ಗೆ ಪ್ರೇರೇಪಿಸಿದೆ. ಬೆನ್ ಸಾಯರ್ ಬದಲಿಗೆ ವಿಲಿಯಮ್ಸ್ ಆರ್ಸಿಬಿ ಮಹಿಳಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಲಿದ್ದಾರೆ. ವಿಶ್ವದಾದ್ಯಂತ ಹಲವಾರು ಫ್ರಾಂಚೈಸಿಗಳಿಗೆ ತರಬೇತಿ ನೀಡುವಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ ವಿಲಿಯಮ್ಸ್​.

ಮೇಲೆ ಹೇಳಿದಂತೆ, ಆರ್​ಸಿಬಿ ಉದ್ಘಾಟನಾ ಡಬ್ಲ್ಯುಪಿಎಲ್ ಋತುವಿನಲ್ಲಿ ಹೆಣಗಾಡಿತು. ಐದು ತಂಡಗಳಲ್ಲಿ ನಾಲ್ಕನೇ ಸ್ಥಾನವನ್ನು ಗಳಿಸಿತು. ಎಂಟು ಗುಂಪು ಹಂತದ ಪಂದ್ಯಗಳಲ್ಲಿ ಎರಡನ್ನು ಮಾತ್ರ ಗೆದ್ದಿತು. ಸ್ಮೃತಿ ಮಂಧಾನಾ, ಎಲಿಸ್ ಪೆರ್ರಿ ಮತ್ತು ಸೋಫಿ ಡಿವೈನ್ ಸೇರಿದಂತೆ ಕೆಲವು ಸ್ಟಾರ್ ಆಟಗಾರರನ್ನು ಖರೀದಿಸಲು ಫ್ರಾಂಚೈಸಿ ಸಾಕಷ್ಟು ಹಣವನ್ನು ಖರ್ಚು ಮಾಡಿತ್ತು. ಆದಾಗ್ಯೂ, ತಂಡಕ್ಕೆ ಮೊದಲ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ದಕ್ಷಿಣ ಆಸ್ಟ್ರೇಲಿಯಾ ಪರ 2000-2005ರ ನಡುವೆ ಅಲ್ಪಾವಧಿಯ ಪ್ರಥಮ ದರ್ಜೆ ವೃತ್ತಿಜೀವನದ ನಂತರ ಆರ್​​ಸಿಬಿಯ ಕೋಚ್ ಆಗಿದ್ದಾರೆ ವಿಲಿಯಮ್ಸ್ / ಮಹಿಳಾ ಬಿಗ್ ಬ್ಯಾಷ್ ಲೀಗ್​ನಲ್ಲಿ ಅಡಿಲೇಡ್ ಸ್ಟ್ರೈಕರ್​​ ಉಸ್ತುವಾರಿಯಲ್ಲಿ ವಿಲಿಯಮ್ಸ್ ನಾಲ್ಕು ಋತುಗಳನ್ನು ಕಳೆದಿದ್ದಾರೆ. ಏಕೆಂದರೆ ಸ್ಟ್ರೈಕರ್ಸ್ ಅವರ ಕೋಚಿಂಗ್​ನಲ್ಲಿ ಸಮಂಜಸವಾಗಿ ಉತ್ತಮ ಪ್ರದರ್ಶನ ನೀಡಿತು. ಫ್ರಾಂಚೈಸಿ ತಮ್ಮ ಮೊದಲ ಹಂಡ್ರೆಡ್ ಪ್ರಶಸ್ತಿಯನ್ನು ಗೆದ್ದಿತ್ತು. ಈ ವರ್ಷ ಸದರ್ನ್ ಬ್ರೇವ್ನ ಸಹಾಯಕ ತರಬೇತುದಾರರಾಗಿದ್ದರು ಕೂಡ. ವಿಲಿಯಮ್ಸ್ ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ರಾಷ್ಟ್ರೀಯ ಕ್ರಿಕೆಟ್ ಲೀಗ್ (ಡಬ್ಲ್ಯುಎನ್ಸಿಎಲ್) ನಲ್ಲಿ ಸೌತ್ ಆಸ್ಟ್ರೇಲಿಯನ್ ಸ್ಕಾರ್ಪಿಯನ್ಸ್​ನೊಂದಿಗೆ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ : Umesh Yadav : 43 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿದ ವೇಗದ ಬೌಲರ್​ ಉಮೇಶ್​ ಯಾದವ್​

ಈ ಹಿಂದೆ ಪುರುಷರ ತಂಡವು ಮಾಜಿ ಎಲ್ಎಸ್ಜಿ ಮುಖ್ಯ ಕೋಚ್ ಆಂಡಿ ಫ್ಲವರ್ ಅವರನ್ನು ತಮ್ಮ ಶಿಬಿರಕ್ಕೆ ಕೋಚ್ ಆಗಿ ಆಯ್ಕೆ ಮಾಡಿಕೊಂಡಿತ್ತು. ಮೈಕ್ ಹೆಸ್ಸನ್ ಅವರು ಪುರುಷರ ಮತ್ತು ಮಹಿಳಾ ತಂಡಗಳ ಕ್ರಿಕೆಟ್ ನಿರ್ದೇಶಕ ಹುದ್ದೆಯನ್ನು ತೊರೆದ ನಂತರ ಈ ಬದಲಾವಣೆಗಳನ್ನು ಮಾಡಲಾಗಿದೆ. ಐಪಿಎಲ್​​ನಲ್ಲಿ ಆರ್ಸಿಬಿ ಪ್ರದರ್ಶನದಲ್ಲಿ ಹೆಸ್ಸನ್ ನಿರ್ಣಾಯಕ ಪಾತ್ರ ವಹಿಸಿದ್ದರು. ಆದಾಗ್ಯೂ, ಮಾಜಿ ಕಿವೀಸ್ ಆಟಗಾರ ಆರ್ಸಿಬಿಗೆ ಚೊಚ್ಚಲ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲುವಂತೆ ಮಾಡಲು ಅವರಿಗೆ ಸಾಧ್ಯವಾಗಿಲ್ಲ.

Exit mobile version