Site icon Vistara News

Royal Challengers Bangalore | ಆರ್​ಸಿಬಿಯ ಹೊಸ ರ್ಯಾಪ್​ ಸಾಂಗ್​ ಬಿಡುಗಡೆ; ಕೊಹ್ಲಿ ಸಕತ್ ಡಾನ್ಸ್​

Royal challengers Bangalore

ಬೆಂಗಳೂರು : ವಿರಾಟ್​ ಕೊಹ್ಲಿಗೂ ಡಾನ್ಸ್​ಗೂ ಬಿಡದ ನಂಟು. ಅವರು ಪಂದ್ಯದ ನಡುವೆಯೇ ಮೈದಾನದಲ್ಲೇ ಡಾನ್ಸ್​ ಮಾಡಿದ ಹಲವು ಸಂದರ್ಭಗಳನ್ನು ಅಭಿಮಾನಿಗಳು ವೀಕ್ಷಿಸಿದ್ದಾರೆ. ಅವರ ಹವ್ಯಾಸ ಅಲ್ಲಿಗೆ ಕೊನೆಯಾಗಿಲ್ಲ. ವಿಶ್ವದ ಸರ್ವಶ್ರೇಷ್ಠ ಬ್ಯಾಟ್ಸ್​ಮನ್​ಗೆ ರ್ಯಾಪ್​ ಸಾಂಗ್ ಕೂಡ ಅಚ್ಚುಮೆಚ್ಚು. ಅವರು ಫಾಲೋ ಮಾಡುವ ಲಿಸ್ಟ್​ನಲ್ಲಿ ರ್ಯಾಪರ್​ಗಳ ಸಂಖ್ಯೆ ದೊಡ್ಡದಿದೆ. ಇಷ್ಟೆಲ್ಲ ಪೀಠಿಕೆ ಯಾಕೆಂದರೆ, ಮ್ಯೂಸಿಕ್​ ಮತ್ತು ಡಾನ್ಸ್​ ಅಭಿಮಾನಿಯಾಗಿರುವ ವಿರಾಟ್​ ಹೊಸ ರ್ಯಾಪ್​ ಆಲ್ಬಮ್​ವೊಂದರಲ್ಲಿ (Royal Challengers Bangalore) ಕಾಣಿಸಿಕೊಳ್ಳಲಿದ್ದಾರೆ. ಈ ಮೂಲಕ ಅವರ ಅಭಿಮಾನಿಗಳ ಮನಸ್ಸಿಗೆ ಕಚಗುಳಿ ಇಡಲಿದ್ದಾರೆ.

ರ್ಯಾಪ್​ ಆಲ್ಬಮ್​ ಮಾಡಿರುವುದು ವಿರಾಟ್​ ಕೊಹ್ಲಿ ಪ್ರತಿನಿಧಿಸುವ ಐಪಿಎಲ್​ನ ಫ್ರಾಂಚೈಸಿ ರಾಯಲ್​ ಚಾಲೆಂಜರ್ಸ್ ಬೆಂಗಳೂರು. ಮುಂದಿನ ಋತುವಿನ ಐಪಿಎಲ್​ಗೆ ಮೊದಲು ಆಲ್ಬಮ್​ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತಿದೆ. ಹಾಡಿಗೆ ನಯಾ ಶೇರ್​ ಎಂಬ ಹೆಸರಿಡಲಾಗಿದೆ. ಅದರಲ್ಲಿ ವಿರಾಟ್​ ಕೊಹ್ಲಿ ಬಣ್ಣ, ಬಣ್ಣದ ಪೋಷಾಕಿನೊಂದಿಗೆ ಮಿಂಚಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಆಲ್ಬಮ್​ ನ ಟೀಸರ್​ ಬಿಡುಗಡೆಯಾಗಿದ್ದು, ಕೊಹ್ಲಿಯ ಲುಕ್​ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಯಲ್​ಚಾಲೆಂಜ್​ಚೂಸ್​ಬೋಲ್ಡ್​ ಎಂಬ ಇನ್​ಸ್ಟಾಗ್ರಾಮ್​ ಹ್ಯಾಂಡಲ್​ ಮೂಲಕ ಟೀಸರ್​ ವೀಕ್ಷಿಸಬಹುದು. 9 ಗಂಟೆಯ ಹಿಂದೆ ಬಿಡುಗಡೆಯಾದ ಟೀಸರ್​ ಈಗ ಸಾವಿರಾರು ವೀಕ್ಷಣೆ ಕಂಡಿದೆ.

ತಮಿಳಿನಲ್ಲಿ ಇತ್ತೀಚೆಗೆ ಬಿಡುಗಡೆಯಾದ ದಳಪತಿ ವಿಜಯ್​ ನಟಿಸಿರುವ ಬೀಸ್ಟ್​ ಸಿನಿಮಾದ ಹಾಡನ್ನು ಹಾಡಿರುವ ಜೊನಿತಾ ಗಾಂಧಿ ಈ ಆಲ್ಬಮ್​ನಲ್ಲಿ ಹಾಡಿದ್ದಾರೆ. ಜತೆಗೆ ರ್ಯಾಪರ್​ ಡಿವೈನ್​ ಕೂಡ ಇದ್ದಾರೆ. ಒಟ್ಟಿನಲ್ಲಿ ಯುವಕರು ಹುಚ್ಚೆದ್ದು ಕುಣಿಯುವಂಥ ಹಾಡು ಸಿದ್ಧವಾಗಿದೆ. ವಿರಾಟ್​ ಕೊಹ್ಲಿಯ ಡಾನ್ಸ್ ಕೂಡ ಇದರ ಭಾಗವಾಗಿರುವ ಕಾರಣ ಆರ್​ಸಿಬಿ ಈ ಸಲ ಇನ್ನಷ್ಟು ಅಭಿಮಾನಿಗಳನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನ ಇಲ್ಲ.

ಇದನ್ನೂ ಓದಿ | Manoj Bhandage | ಆರ್‌ಸಿಬಿ ತಂಡಕ್ಕೆ ಮನೋಜ್ ಭಾಂಡಗೆ ಆಯ್ಕೆ; ಸಿಂಧನೂರಿನಲ್ಲಿ ಸಂಭ್ರಮಾಚರಣೆ

Exit mobile version