Site icon Vistara News

Olympic Day : 900 ಮಕ್ಕಳೊಂದಿಗೆ ಒಲಿಂಪಿಕ್ ದಿನ ಸಂಭ್ರಮಿಸಿದ ರಿಲಯನ್ಸ್​ಫೌಂಡೇಶನ್​

olympic Day

ಮುಂಬೈ,: ಐಒಸಿಯ (international olympic committee) ‘ಲೆಟ್ಸ್ ಮೂವ್ ಇಂಡಿಯಾ’ ಅಭಿಯಾನದ ಅಂಗವಾಗಿ ರಿಲಯನ್ಸ್ ಫೌಂಡೇಶನ್ ಆಯೋಜಿಸಿದ್ದ ವಿಶಿಷ್ಟ ಒಲಿಂಪಿಕ್ ದಿನವನ್ನು (Olympic Day ) 900 ಮಕ್ಕಳು ಪಾಲ್ಗೊಂಡಿದ್ದರು. ಮುಂಬೈನ ರಿಲಯನ್ಸ್ ಕಾರ್ಪೊರೇಟ್ ಪಾರ್ಕ್ (RCP) ಯಲ್ಲಿ ಜೂನ್ 22ರ ಶನಿವಾರ ನಡೆದ ಈ ಕಾರ್ಯಕ್ರಮದಲ್ಲಿ ಮುಂಬೈನಾದ್ಯಂತ ಇರುವ ಆರ್ಥಿಕವಾಗಿ ಅಶಕ್ತರಾಗಿರುವ ಸಮುದಾಯಗಳ ಮಕ್ಕಳಿಗೆ ವಿನೋದ , ಕ್ರೀಡೆ ಮತ್ತು ಸ್ನೇಹದಂತಹ ಒಲಿಂಪಿಕ್ ಮೌಲ್ಯಗಳನ್ನು ಹೊಂದಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ಆರು ಬಾರಿ ಒಲಿಂಪಿಯನ್ ಶಿವ ಕೇಶವನ್ ಅವರೊಂದಿಗೆ ‘ಮೀಟ್ ಆ್ಯಂಡ್​ ಗ್ರೀಟ್’ ಸೆಷನ್ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಅವರು ತಮ್ಮ ಒಲಿಂಪಿಕ್ಸ್​ ಅನುಭವಗಳನ್ನು ಈ ವೇಳೇ ಹಂಚಿಕೊಂಡರು ಮತ್ತು ಉತ್ಕೃಷ್ಟತೆ, ಗೌರವ ಮತ್ತು ಮಕ್ಕಳೊಂದಿಗೆ ಸ್ನೇಹದಂತಹ ಪ್ರಮುಖ ಒಲಿಂಪಿಕ್ ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು. ಕೇಶವನ್ ಮಕ್ಕಳೊಂದಿಗೆ “ಮೂವ್ ಆ್ಯಂಡ್​ ಗ್ರೌವ್” ಎಂಬ ವಿಶೇಷ ಕಾರ್ಯಕ್ರಮದಲ್ಲೂ ಪಾಲ್ಗೊಂಡರು.

ಸಕ್ರಿಯ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಅದರ ಮಹತ್ವವನ್ನು ಅರಿಯುವಂತೆ ಮಕ್ಕಳನ್ನು ಪ್ರೇರೇಪಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿತ್ತು. ರಿಲಯನ್ಸ್ ಇಕೊ ಸಿಸ್ಟಮ್​ನ 200 ಕ್ಕೂ ಹೆಚ್ಚು ಉದ್ಯೋಗಿಗಳು ಈ ಕಾರ್ಯಕ್ರಮದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿದ್ದರು. ಚಿತ್ರಕಲೆ ಮತ್ತು ಕಲಾ ಚಟುವಟಿಕೆಗಳ ಜೊತೆಗೆ ಬ್ಯಾಸ್ಕೆಟ್​ಬಾಲ್​, ಫುಟ್ಬಾಲ್ ಶೂಟೌಟ್​​, ವಾಕಿಂಗ್ ರೇಸ್​​ ಮತ್ತು ಫಿಟ್ನೆಸ್ ಸೆಷನ್​​ಗಳಂತಹ ವಿವಿಧ ಕ್ರೀಡೆಗಳ ಮೇಲ್ವಿಚಾರಣೆ ನಡೆಸಿದರು. ಮಕ್ಕಳಿಗೆ ದೈಹಿಕ ಚಟುವಟಿಕೆಯ ಮಹತ್ವವನ್ನು ಮೂಡಿಸಲು, ಆರೋಗ್ಯಕರ ಜೀವನಶೈಲಿ ಅಳವಡಿಸಿಕೊಳ್ಳಲು ಕಾರ್ಯಕ್ರಮದಲ್ಲಿ ನಾನಾ ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೇಶವನ್, “ಭಾರತದಲ್ಲಿ ಒಲಿಂಪಿಕ್ ಚಳವಳಿಯ ಬೆಳವಣಿಗೆಯನ್ನು ಬೆಂಬಲಿಸುವಲ್ಲಿ ರಿಲಯನ್ಸ್ ಫೌಂಡೇಶನ್ ಯಾವಾಗಲೂ ಮುಂಚೂಣಿ ಸ್ಥಾನ ವಹಿಸಿದೆ. ದೈಹಿಕವಾಗಿ ಸಕ್ರಿಯವಾಗಿರುವುದು ಆರೋಗ್ಯಕರ ಎಂಬುದನ್ನು ಅರ್ಥಮಾಡಿಕೊಳ್ಳಲು ಮಕ್ಕಳಿಗೆ ಸಹಾಯ ಮಾಡಲು ಲೆಟ್ಸ್ ಮೂವ್ ಒಂದು ಉತ್ತಮ ಯೋಜನೆಯಾಗಿದೆ. ಮಕ್ಕಳು ಅತ್ಯಂತ ಉತ್ಸಾಹಭರಿತರಾಗಿದ್ದರು, ಮತ್ತು ಅವರ ಉತ್ಸಾಹ ಅದಮ್ಯವಾಗಿತ್ತು. ಅವರು ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಈ ಅನುಭವದಿಂದ ಅವರು ಬಹಳಷ್ಟು ಕಲಿಯುತ್ತಾರೆ. ಒಲಿಂಪಿಯನ್ ಆಗಿ, ನಾನು ಒಲಿಂಪಿಕ್ ಮೌಲ್ಯಗಳನ್ನು ನನ್ನ ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ಈ ಮಕ್ಕಳಲ್ಲಿ ಕೆಲವರು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದಕ್ಕೆ ಸ್ಫೂರ್ತಿ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: International Yoga day 2024 : ಅಕ್ಷರ ಯೋಗ ಕೇಂದ್ರದಿಂದ ಅಂತರಾಷ್ಟ್ರೀಯ ಯೋಗ ದಿನದಂದು 5 ಗಿನ್ನೆಸ್ ದಾಖಲೆ

ಐಒಸಿಯ ಡಿಜಿಟಲ್ ಎಂಗೇಜ್ಮೆಂಟ್​ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಲಿಯಾಂಡ್ರೊ ಲಾರೊಸಾ, “ಭಾರತದಲ್ಲಿ ಲೆಟ್ಸ್ ಮೂವ್ ಕಾರ್ಯಕ್ರಮಕ್ಕೆ ಸಹಕರಿಸಿದ್ದಕ್ಕಾಗಿ ಮತ್ತು ಒಲಿಂಪಿಯನ್ ಒಬ್ಬರನ್ನು ಭೇಟಿಯಾಗಲು ಮತ್ತು ಅವರ ಬಗ್ಗೆ ತಿಳಿಯಲು ಮಕ್ಕಳಿಗೆ ಅವಕಾಶವನ್ನು ಸೃಷ್ಟಿಸಿದ್ದಕ್ಕಾಗಿ ರಿಲಯನ್ಸ್ ಫೌಂಡೇಶನ್​ಗೆ ಧನ್ಯವಾದಗಳು. ಈ ಕಾರ್ಯಕ್ರಮವು ಪ್ಯಾರಿಸ್ 2024 ಒಲಿಂಪಿಕ್ಸ್​​ಗೆ ಪ್ರೇಕರವಾಗಿದೆ ಭಾರತದ ಹೆಚ್ಚಿನ ಮಕ್ಕಳಿಗೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ನೆರವಾಗಲಿದೆ ಎಂದು ಹೇಳಿದರು.

ಲೆಟ್ಸ್ ಮೂವ್ ಇಂಡಿಯಾ ಅಭಿಯಾನದ ಮೂಲಕ, ರಿಲಯನ್ಸ್ ಫೌಂಡೇಶನ್ ಮುಂಬರುವ ವಾರಗಳಲ್ಲಿ ಭಾರತದ ಅನೇಕ ನಗರಗಳಲ್ಲಿ ಅಶಕ್ತ ಸಮುದಾಯಗಳ 10,000 ಮಕ್ಕಳಲ್ಲಿ ದೈಹಿಕ ಚಟುವಟಿಕೆಯ ಮಹತ್ವ ಉತ್ತೇಜಿಸುವ ಗುರಿ ಹೊಂದಿದೆ. ಈ ಉಪಕ್ರಮವನ್ನು ರಿಲಯನ್ಸ್ ಉದ್ಯೋಗಿಗಳ ನಡುವಿನ 500 ಸ್ವಯಂಸೇವಕರು ನಡೆಸಿಕೊಡಲಿದ್ದಾರೆ. ಈ ಮಕ್ಕಳಲ್ಲಿ ಸಕಾರಾತ್ಮಕ ಬೆಳವಣಿಗೆ ಉತ್ತೇಜಿಸಲು ಕೆಲಸ ಮಾಡಲಿದ್ದರೆ. ಈ ಉಪಕ್ರಮವು ಒಲಿಂಪಿಕ್ ಮೌಲ್ಯಗಳ ಶಿಕ್ಷಣ ಕಾರ್ಯಕ್ರಮದ (ಒವಿಇಪಿ) ಭಾಗವಾಗಿದ್ದು, ರಿಲಯನ್ಸ್ ಫೌಂಡೇಶನ್ ಮತ್ತು ಐಒಸಿ ನಡುವಿನ ಸಹಭಾಗಿತ್ವವಾಗಿದೆ.

Exit mobile version