Site icon Vistara News

Rinku Singh: ಟಿ20 ವಿಶ್ವಕಪ್​ಗೆ ರಿಂಕು ಆಯ್ಕೆಯಾಗಬಹುದೆಂದು ಪಟಾಕಿ, ಸಿಹಿ ತಂದಿಟ್ಟಿದ್ದ ತಂದೆಗೆ ನಿರಾಸೆ

Rinku Singh

ಉತ್ತರ ಪ್ರದೇಶ: ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ಗೆ(T20 world cup 2024) ಮಂಗಳವಾರ ಭಾರತ ತಂಡ ಪ್ರಕಟಗೊಂಡಿತ್ತು. ಆದರೆ ಈ ತಂಡದಲ್ಲಿ ರಿಂಕು ಸಿಂಗ್​ಗೆ(Rinku Singh) ಅವಕಾಶ ಸಿಗಲಿಲ್ಲ. ಎಲ್ಲರು ಕೂಡ ರಿಂಕುಗೆ ಸ್ಥಾನ ಸಿಗಬಹುದೆಂದು ನಿರೀಕ್ಷೆ ಮಾಡಿದ್ದರು. ಎಲ್ಲರಿಗಿಂತ ಹೆಚ್ಚಿನ ನಿರೀಕ್ಷೆ ಇರಿಸಿದ್ದು ರಿಂಕು ಅವರ ತಂದೆ. ತನ್ನ ಮಗನಿಗೆ ವಿಶ್ವಕಪ್​ ಆಡುವ ಅವಕಾಶ ಸಿಗಬಹುದೆಂದು ಖಾನ್ಚಂದ್ರ ಸಿಂಗ್ ಮುಂಚಿತವಾಗಿಯೇ ಪಟಾಕಿ ಮತ್ತು ಸಿಹಿ ತಿನಿಸುಗಳನ್ನು ತಂದಿಟ್ಟಿದ್ದರು. ಆದರೆ ಮಗನಿಗೆ ಅವಕಾಶ ಸಿಗದೇ ಇದ್ದದ್ದು ಬೇಸರ ತಂದಿದೆ ಎಂದು ಖಾನ್ಚಂದ್ರ ಸಿಂಗ್ ಹೇಳಿದ್ದಾರೆ.

ತೀರಾ ಬಡತನದಲ್ಲಿ ಬೆಳೆದು ಬಂದ ರಿಂಕು ಸಿಂಗ್ ಕಳೆದ ವರ್ಷದ ಐಪಿಎಲ್ ಮೂಲಕ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದ್ದರು. ಮಧ್ಯಮ ಕ್ರಮಾಂಕದಲ್ಲಿ ಆಡುವ ರಿಂಕು ಸಿಂಗ್ ತಮ್ಮ ಬಿರುಸಿನ ಬ್ಯಾಟಿಂಗ್​ ಮೂಲಕ​ ಅಸಾಮಾನ್ಯ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದರು. ಭಾರತ ಪರೂ ಆಡಿದ ಎಲ್ಲ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಮುಖ್ಯ ಕೋಚ್​ ರಾಹುಲ್​ ದ್ರಾವಿಡ್​ ಕೂಡ ಈ ಹಿಂದೆ ರಿಂಕು ಅತ್ಯತ್ತುಮ ಪ್ರತಿಭೆ ಟಿ20ಯಲ್ಲಿ ಸ್ಥಾನ ಸಿಗಬಹುದು ಎಂದು ಹೇಳಿದ್ದರು. ಇದೇ ಕಾರಣದಿಂದ ಅವರ ತಂದೆ ಖಾನ್ಚಂದ್ರ ಸಿಂಗ್​ಗೆ ಮಗ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಬಲವಾಗಿ ನಂಬಿದ್ದರು. ಹೀಗಾಗಿ ಅವರು ಮನೆಗೆ ಮೊದಲೇ ಸಿಹಿ ತಿನಿಸು, ಪಟಾಕಿ ತಂದಿಟ್ಟಿದ್ದರು. ಆದರೆ ತಂಡ ಪ್ರಕಟಗೊಂಡಾಗ ಮಾತ್ರ ಇವರ ಹೆಸರು ಕಾಣಿಸಲಿಲ್ಲ.​ ಇದರಿಂದ ರಿಂಕು ಮನೆಯವರೆಲ್ಲ ಬೇಸರಗೊಂಡರು.

ಇದನ್ನೂ ಓದಿ IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

“ಮಗ ಆಯ್ಕೆಯಾದ ಸುದ್ದಿ ಹೊರಬೀಳುತ್ತಲೇ ಪಟಾಕಿ ಹಚ್ಚಿ, ಸಿಹಿ ತಿನಿಸು ಹಂಚಿ ಸಂಭ್ರಮಿಸಲು ತಯಾರಿ ಮಾಡಿಕೊಂಡಿದ್ದೆ. ಆದರೆ 15 ಸದಸ್ಯರ ಪಟ್ಟಿಯಲ್ಲಿ ಮಗನ ಹೆಸರೇ ಇರಲಿಲ್ಲ. ಇದರಿಂದ ತೀರಾ ಬೇಸರವಾಗಿದೆ” ಎಂದು ಹೇಳುವ ಮೂಲಕ ಖಾನ್ಚಂದ್ರ ಸಿಂಗ್ ಭಾವುಕರಾದರು. ರಿಂಕು ಸಿಂಗ್​ ಭಾರತ ಪರ 15 ಟಿ20 ಪಂದ್ಯಗಳನ್ನು ಆಡಿ 11 ಇನಿಂಗ್ಸ್​ನಿಂದ 356 ರನ್​ ಬಾರಿಸಿದ್ದಾರೆ. ಇದರಲ್ಲಿ 2 ಅರ್ಧಶತಕ ಕೂಡ ಒಳಗೊಂಡಿದೆ. 31 ಬೌಂಡರಿ ಮತ್ತು 20 ಸಿಕ್ಸರ್​ ಬಾರಿಸಿದ್ದಾರೆ. ರಿಂಕು ಸದ್ಯ ಮೀಸಲು ಆಟಗಾರನಾಗಿ ಆಯ್ಕೆಯಾಗಿದ್ದಾರೆ. ಒಂದೊಮ್ಮೆ 15 ಮಂದಿ ಆಟಗಾರರ ಪೈಕಿ ಯಾರಾದರು ಗಾಯಗೊಂಡರೆ ರಿಂಕುಗೆ ಪ್ರಧಾನ ತಂಡಕ್ಕೆ ಅವಕಾಶ ಸಿಗಬಹುದು.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್

Exit mobile version