ನವದೆಹಲಿ: ಭಾರತದ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ (Ishan Kishan) ಪ್ರಸ್ತುತ ನಡೆಯುತ್ತಿರುವ ಬುಚ್ಚಿ ಬಾಬು ಟೂರ್ನಮೆಂಟ್ 2024 ರಲ್ಲಿ ರೆಡ್-ಬಾಲ್ ಸ್ವರೂಪಕ್ಕೆ ಮರಳಿದ್ದಾರೆ. ಮಧ್ಯಪ್ರದೇಶ ಮತ್ತು ಜಾರ್ಖಂಡ್ ನಡುವಿನ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕಿಶನ್ ಅದ್ಭುತ ಶತಕ ಬಾರಿಸಿ ತಮ್ಮ ತಂಡಕ್ಕೆ ಅಮೂಲ್ಯ ಕೊಡುಗೆ ನೀಡಿದರು. ಹೀಗಾಗಿ ಜಾರ್ಖಂಡ್ ಮೊದಲ ಇನ್ನಿಂಗ್ಸ್ ಮುನ್ನಡೆ ಸಾಧಿಸಿತು. ಮುಂದುವರಿದ ಕಿಶನ್ ಜಾರ್ಖಂಡ್ನ ಎರಡನೇ ಇನ್ನಿಂಗ್ಸ್ನಲ್ಲಿಯೂ ಉತ್ತಮವಾಗಿ ಆಡಿದರು. 58 ಎಸೆತಗಳಲ್ಲಿ ಅಮೂಲ್ಯ 41 ರನ್ ಗಳಿಸಿ ಜಾರ್ಖಂಡ್ ತಂಡಕ್ಕೆ ನೆರವಾದರು.
Winning Captain of Jharkhand🔥
— Retrograde#96 (@Retrograde2377) August 18, 2024
Absolute Cinema! 🤌🏻#IshanKishan pic.twitter.com/onGxlQKvsC
ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಕಿಶನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಅವರು ಜಾರ್ಖಂಡ್ ಪರ ಗರಿಷ್ಠ ಸ್ಕೋರ್ ಗಳಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಇಶಾನ್ ಕಿಶನ್ ಆರಂಭದಿಂದಲೂ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದ್ದರು. ಅವರು ತಮ್ಮ ಪವರ್-ಹಿಟ್ಟಿಂಗ್ ಸಾಮರ್ಥ್ಯದಿಂದ ಎದುರಾಳಿ ಬೌಲರ್ಗಳನ್ನು ನಿರಂತರವಾಗಿ ಒತ್ತಡಕ್ಕೆ ಸಿಲುಕಿಸಿದ್ದರು. ಅದರಲ್ಲೂ ಸಿಕ್ಸರ್ಗಳನ್ನು ಹೊಡೆದು ಮಿಂಚಿದ್ದರು. ಎಡಗೈ ಬ್ಯಾಟ್ಸ್ಮನ್ ವೇಗ ಮತ್ತು ಸ್ಪಿನ್ ಬೌಲಿಂಗ್ ಎರಡಕ್ಕೂ ಒಂದೇ ರೀತಿ ಉತ್ತರ ಕೊಡುತ್ತಿದ್ದರು. ಈ ಮೂಲಕ ಕಿಶನ್ ತಮ್ಮನ್ನು ಕಡೆಗಣಿಸುತ್ತಿರುವ ಬಿಸಿಸಿಐ ಹಾಗೂ ಹಿರಿಯರ ತಂಡದ ಆಯ್ಕೆಗಾರರಿಗೆ ಪ್ರತ್ಯುತ್ತರ ಕೊಟ್ಟರು.
ಇಶಾನ್ ಕಿಶನ್ ಅವನ್ನು ಬಿಸಿಸಿಐ ಕೇಂದ್ರ ಗುತ್ತಿಗೆಯಿಂದ ಹೊರಗಿಡುವ ಜತೆಗೆ ಅವರನ್ನು ಯಾವುದೇ ಪ್ರವಾಸಕ್ಕೆ ಆಯ್ಕೆ ಮಾಡುತ್ತಿಲ್ಲ. ಶ್ರೇಯಸ್ ಅಯ್ಯರ್ಗೂ ಇದೇ ಮಾದರಿಯಲ್ಲ ಮಾಡಿದ್ದರೂ. ಲಂಕಾ ವಿರುದ್ಧದ ಸರಣಿಯಲ್ಲಿ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಈ ಎಲ್ಲ ತಾರತಮ್ಯಕ್ಕೆ ಇಶಾನ್ ಕಿಶನ್ ಉತ್ತರ ಕೊಟ್ಟಿದ್ದಾರೆ.
ಇಶಾನ್ ಆಟದ ವೇಲೆ ಅತ್ಯುತ್ತಮವಾಗಿ ಕಾಣುತ್ತಿದ್ದರು. ತಮ್ಮ ತಂಡವನ್ನು ಅನಿಶ್ಚಿತ ಪರಿಸ್ಥಿತಿಯಿಂದ ಪಾರು ಮಾಡಿದ್ದರು. ಮೊದಲ ಇನಿಂಗ್ಸ್ನಲ್ಲಿ ಕೇವಲ 107 ಎಸೆತಗಳಲ್ಲಿ 114 ರನ್ ಗಳಿಸಿದ್ದರು. ಅದರಲ್ಲಿ 5 ಬೌಂಡರಿ ಮತ್ತು 10 ಸಿಕ್ಸರ್ಗಳಿದ್ದವು. ಅವರ ಇನ್ನಿಂಗ್ಸ್ ಜಾರ್ಖಂಡ್ಗೆ ಅಮೂಲ್ಯ ಮುನ್ನಡೆಯನ್ನು ಪಡೆಯಲು ನೆರವಾಯಿತು. ಕಿಶನ್ ಹೊರತುಪಡಿಸಿದರೆ ಜಾರ್ಖಂಡ್್ನ ಯಾವುದೇ ಬ್ಯಾಟರ್ಗಳು ಇನಿಂಗ್ಸ್ನಲ್ಲಿ 40 ರನ್ಗಳ ಗಡಿ ದಾಟಲಿಲ್ಲ.
ನಾಲ್ಕನೇ ಇನ್ನಿಂಗ್ಸ್ನಲ್ಲಿ ಜಾರ್ಖಂಡ್ ಗೆಲುವಿಗೆ 174 ರನ್ಗಳ ಗುರಿಯಿತ್ತು. ನಾಯಕ ಇಶಾನ್ ಕಿಶನ್ 58 ಎಸೆತಗಳಲ್ಲಿ 1 ಬೌಂಡರಿ ಮತ್ತು 2 ಸಿಕ್ಸರ್ ಸಮೇತ ಅಜೇ 41*ರನ್ ಗಳಿಸಿ ಮತ್ತೊಮ್ಮೆ ನೆರವಿಗೆ ಬಂದರು.
3 ಎಸೆತಗಳಲ್ಲಿ 2 ಸಿಕ್ಸರ್ ಸಿಡಿಸಿದ ಕಿಶನ್
- ತಂಡಕ್ಕೆ ಗೆಲ್ಲಲು 11 ರನ್ಗಳ ಅವಶ್ಯಕತೆಯಿತ್ತು. 2 ವಿಕೆಟ್ ಉರುಳಿಸಿದ್ದರು. 26 ವರ್ಷದ ಆಟಗಾರ ಮೂರು ಎಸೆತಗಳಲ್ಲಿ ಎರಡು ಸಿಕ್ಸರ್ಗಳೊಂದಿಗೆ ತಮ್ಮ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಕಿಶನ್ ಅವರ ಆಕ್ರಮಣಕಾರಿ ವಿಧಾನವು ಭಾರತೀಯ ತಂಡಕ್ಕೆ ಮರಳುವ ಅವಕಾಶಗಳನ್ನು ಸೃಷ್ಟಿಸಿವೆ.
ಇಶಾನ್ ಕಿಶನ್ ಒಂದು ವರ್ಷದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಅವರು ಏಷ್ಯಾ ಕಪ್ 2023 ಗೆದ್ದ ಭಾರತದ ತಂಡದಲ್ಲಿದ್ದರು ಮತ್ತು 2023 ರ ಏಕದಿನ ವಿಶ್ವಕಪ್ನಲ್ಲಿ ರನ್ನರ್ ಅಪ್ ಸ್ಥಾನ ಪಡೆದರು. ಕಿಶನ್ ಪ್ಲೇಯಿಂಗ್ ಇಲೆವೆನ್ನ ನಿಯಮಿತ ಭಾಗವಾಗದಿದ್ದರೂ, ಅವರು ಎರಡೂ ಪಂದ್ಯಾವಳಿಗಳಲ್ಲಿ ಕೆಲವು ಪಂದ್ಯಗಳಲ್ಲಿ ಕಾಣಿಸಿಕೊಂಡರು ಮತ್ತು ನಿರ್ಣಾಯಕ ಇನ್ನಿಂಗ್ಸ್ಗಳನ್ನು ಆಡಿದರು.
ಇದನ್ನೂ ಓದಿ: Rinku Singh : ಆರ್ಸಿಬಿ ಪರ ಆಡುವ ಅಭಿಲಾಷೆ ವ್ಯಕ್ತಪಡಿಸಿದ ರಿಂಕು ಸಿಂಗ್
ಆದಾಗ್ಯೂ, ಅವರು ಮಾನಸಿಕ ಆಯಾಸವನ್ನು ಉಲ್ಲೇಖಿಸಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಅರ್ಧದಲ್ಲೇ ತೊರೆಯಲು ನಿರ್ಧರಿಸಿದರು. ಇದರ ಪರಿಣಾಮವಾಗಿ, ರಾಷ್ಟ್ರೀಯ ತಂಡದಲ್ಲಿ ತಮ್ಮ ಸ್ಥಾನವನ್ನು ಮರಳಿ ಪಡೆಯಲು ಜಾರ್ಖಂಡ್ ಪರ ದೇಶೀಯ ಕ್ರಿಕೆಟ್ ಆಡಲು ಅವರಿಗೆ ತಿಳಿಸಲಾಯಿತು.
ಆದರೆ ಕಿಶನ್ ಕಳೆದ ಋತುವಿನಲ್ಲಿ ರಣಜಿ ಟ್ರೋಫಿಯಲ್ಲಿ ಆಡಲಿಲ್ಲ ಮತ್ತು ಬದಲಿಗೆ ತಮ್ಮ ಐಪಿಎಲ್ ನಾಯಕ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಖಾಸಗಿಯಾಗಿ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಅವರ ನಡವಳಿಕೆಯಿಂದ ಅಸಮಾಧಾನಗೊಂಡ ಆಯ್ಕೆದಾರರು ಅವರನ್ನು ಬಿಸಿಸಿಐನ ವಾರ್ಷಿಕ ಕೇಂದ್ರ ಗುತ್ತಿಗೆ ಪಟ್ಟಿಯಿಂದ ತೆಗೆದುಹಾಕಲು ನಿರ್ಧರಿಸಿದರು.