Site icon Vistara News

Rinku Singh: ಟೀಮ್​ ಇಂಡಿಯಾ ಜೆರ್ಸಿ ಕಂಡು ಭಾವುಕರಾದ ರಿಂಕು ಸಿಂಗ್​

rinku singh batting practice

ಡಬ್ಲಿನ್​: ಐರ್ಲೆಂಡ್‌ ವಿರುದ್ಧದ(Ireland vs India) ಟಿ20 ಸರಣಿಯಲ್ಲಿ ಟೀಮ್​ ಇಂಡಿಯಾ(Team India) ಪರ ಪದಾರ್ಪಣೆ ನಿರೀಕ್ಷೆಯಲ್ಲಿರುವ ಐಪಿಎಲ್​ ಹೀರೊ ರಿಂಕು ಸಿಂಗ್(Rinku Singh)​ ಅವರು ಭಾರತ ತಂಡದ ಜೆರ್ಸಿಯಲ್ಲಿ(team india cricket jersey) ತಮ್ಮ ಹೆಸರನ್ನು ಕಂಡು ಭಾವುಕರಾಗಿದ್ದಾರೆ. ಉಭಯ ತಂಡಗಳ ಮೊದಲ ಮುಖಾಮುಖಿ ಇಂದು(ಶುಕ್ರವಾರ ಆಗಸ್ಟ್​ 18) ನಡೆಯಲಿದೆ.

ಟೀಮ್​ ಇಂಡಿಯಾದ ಜೆರ್ಸಿಯನ್ನು ಪಡೆದ ಬಳಿಕ ಬಿಸಿಸಿಐ(BCCI) ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ರಿಂಕು ಸಿಂಗ್​,”ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸಾಗಿರುತ್ತದೆ. 35 ಸಂಖ್ಯೆಯ ಭಾರತ ತಂಡದ ಜೆರ್ಸಿ ನೋಡಿದ ಬಳಿಕ ತುಂಬಾ ಭಾವುಕನಾದೆ. ಈ ಮಟ್ಟಕ್ಕೇರಲು ನಾನು ಪಟ್ಟ ಕಷ್ಟ ಅಪಾರ. ಈಗ ಈ ಎಲ್ಲ ಕಷ್ಟಗಳು ಕೊನೆಗೊಂಡಂತೆ ಕಾಣುತ್ತಿದೆ. ನನ್ನ ಕನಸಿನ ಟೀಮ್ ಇಂಡಿಯಾ ಜೆರ್ಸಿ ನನ್ನ ಮುಂದೆ ಇದೆ” ಎಂದು ಭಾವುಕ ಮಾತುಗಳನ್ನಾಡಿದರು.

ತಾಯಿಯೇ ಪ್ರೇರಣೆ

ಇಂದು ನಾನು ಕ್ರಿಕೆಟ್​ ಆಡುತ್ತಿದ್ದೇನೆ ಎಂದರೆ ಅದಕ್ಕೆ ನನ್ನ ತಾಯಿಯೇ ಕಾರಣ. ಜೆರ್ಸಿಯನ್ನು ನಾನು ಅವಳಿಗೆ ಅರ್ಪಿಸುತ್ತೇನೆ. ಜತೆಗೆ ಧನ್ಯವಾದಗಳನ್ನು ತಿಳಿಸಿಸುತ್ತೇನೆ. ನನ್ನ ತಾಯಿ ನನಗೆ ಪ್ರಮುಖ ಆಧಾರ ಸ್ಥಂಭವಾಗಿದ್ದಾರೆ ನನಗೆ ಸಾಕಷ್ಟು ಪ್ರೇರಣೆ ನೀಡಿದ್ದಾಳೆ. ಅವಳ ಈ ಪ್ರೇರಣೆ ಇಲ್ಲವಾದಲ್ಲಿ ನಾನು ಖಂಡಿತ ಕ್ರಿಕೆಟಿಗನಾಗಿ ಇಂದು ನಿಮ್ಮ ಮುಂದೆ ಇರುತ್ತಿರಲಿಲ್ಲ ಎಂದು ರಿಂಕು ಹೇಳಿದರು.

ತಾಯಿಗೆ ಮೊದಲ ಕರೆ

ನಾನು ಎಂದಿನಂತೆ ನನ್ನ ಸ್ನೇಹಿತರ ಜತೆ ದಿಲ್ಲಿಯಲ್ಲಿ ಕ್ರಿಕೆಟ್​ ಅಭ್ಯಾಸ ಮಾಡುತ್ತಿದ್ದೆ ಈ ವೇಳೆ ಐರ್ಲೆಂಡ್​ ಸರಣಿಗೆ ಪ್ರಕಟವಾದ ಭಾರತ ತಂಡದಲ್ಲಿ ನನ್ನ ಹೆಸರು ಕೂಡ ಇತ್ತು. ಈ ವಿಷಯ ತಿಳಿದ ತಕ್ಷಣ ನಾನು ಮೊದಲು ತಾಯಿಗೆ ಕರೆ ಮಾಡಿ ಈ ವಿಚಾರವನ್ನು ತಿಳಿಸಿದೆ. ಇದನ್ನು ಕೇಳಿದ ನನ್ನ ತಾಯಿಯ ಸಂತಸಕ್ಕೆ ಪಾರವೇ ಇರಲಿಲ್ಲ. ಅವಳ ತ್ಯಾಗದಿಂದಲೇ ನಾನು ಕ್ರಿಕೆಟ್​ನಲ್ಲಿ ಬೆಳೆದೆ ಎಂದು ರಿಂಕು ಸಿಂಗ್​ ಹೇಳಿದರು.

ಇದನ್ನೂ ಓದಿ India vs Ireland: ಪಂದ್ಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಐರ್ಲೆಂಡ್‌ ಆಟಗಾರ

ಸಿಕ್ಸರ್​ ಕಿಂಗ್​ ರಿಂಕು ಸಿಂಗ್​

ಇದೇ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL)​ ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್​ ನಡೆಸಿದ ರಿಂಕು ಸಿಂಗ್​ ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯವೊಂದರಲ್ಲಿ ಯಶ್‌ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್‌ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು.

ಕೆಕೆಆರ್ ತಂಡದ ಕೀ ಪ್ಲೇಯರ್‌

ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು. 2017ರಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 10 ಲಕ್ಷ ರೂ.ಗೆ ಇವರನ್ನು ಖರೀದಿಸಿತು. ಮುಂದಿನ ವರ್ಷ 80 ಲಕ್ಷ ರೂ.ಗೆ ಕೆಕೆಆರ್‌ ಪಾಲಾದರು. ಆದರೆ ಬಳಿಕ ಬಿಡುಗಡೆ ಮಾಡಿತು. 2022ರಲ್ಲಿ ಮತ್ತೆ 55 ಲಕ್ಷ ರೂ.ಗೆ ಖರೀದಿಸಿತು. ಈಗ ಕೆಕೆಆರ್‌ನ ಕೀ ಪ್ಲೇಯರ್‌ ಆಗಿದ್ದಾರೆ. ಇದೀಗ ಟೀಮ್​ ಇಂಡೊಯಾಕ್ಕೂ ಕಾಲಿಟ್ಟ ಅವರು ಮುಂದಿನ ದಿನಗಳಲ್ಲಿ ತಂಡದ ಪ್ರಮುಖ ಆಟಗಾರನಾಗಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ನಿಷೇಧಕ್ಕೂ ಒಳಗಾಗಿದ್ದರು

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧವನ್ನು ಅನುಭವಿಸಿದ್ದರು.

Exit mobile version