Site icon Vistara News

Rinku Singh: ರಿಂಕು ಸಿಂಗ್​ ಭಾರತ ತಂಡದ ಭವಿಷ್ಯದ ತಾರೆ; ಕೋಚ್​ ದ್ರಾವಿಡ್ ವಿಶ್ವಾಸ

Rinku Singh

ಬೆಂಗಳೂರು: ಭಾರತ ತಂಡದ ಪರ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುತ್ತಿರುವ ಯುವ ಬ್ಯಾಟರ್​ ರಿಂಕು ಸಿಂಗ್(Rinku Singh)​ ಬಗ್ಗೆ ಟೀಮ್​ ಇಂಡಿಯಾ ಕೋಚ್(Indian cricket coach)​ ರಾಹುಲ್​ ದ್ರಾವಿಡ್(Rahul Dravid)​ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ರಿಂಕು ತಮ್ಮ ಬ್ಯಾಟಿಂಗ್‌ನಲ್ಲಿ ಸಂಪೂರ್ಣ ಪರಿಪಕ್ವತೆಯನ್ನು ಸಾಧಿಸಿದ್ದಾರೆಂದು ತಿಳಿಸಿದ್ದಾರೆ.

ಬುಧವಾರ ನಡೆದ ಅಫಘಾನಿಸ್ತಾನ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ತಂಡ 22 ರನ್​ಗ 4 ವಿಕೆಟ್​ ಕಳೆದುಕೊಂಡಾಗ ಬ್ಯಾಟಿಂಗ್​ ನಡೆಸಲು ಬಂದ ರಿಂಕು ತಂಡದ ಪರಿಸ್ಥಿತಿಯನ್ನು ಸರಿಯಾಗಿ ಅರಿತುಕೊಂಡು ಬ್ಯಾಟಿಂಗ್​ ನಡೆಸುವ ಮೂಲಕ ತಂಡಕ್ಕೆ ನೆರವಾದರು.

ನಾಯಕ ರೋಹಿತ್​ ಶರ್ಮ ಜತೆ ಸೇರಿಕೊಂಡು ಉತ್ತಮ ಜತೆಯಾಟ ನಡೆಸಿದರು. ಎಲ್ಲಿಯೂ ಕೆಟ್ಟ ಹೊಡೆತಕ್ಕೆ ಕೈ ಹಾಕದೆ. ಪಕ್ಕಾ ಕ್ರಿಕೆಟ್​ ಹೊಡೆತಗಳ ಮೂಲಕ ರನ್ ಗಳಿಸಿದರು. ಕ್ರೀಸ್​ಗೆ ಹೊಂದಿಕೊಂಡ ಬಳಿಕ ಬಿರುಸಿನ ಆಟಕ್ಕೆ ಒತ್ತುಕೊಟ್ಟರು. 39 ಎಸೆತಗಳಿಂದ ಅಜೇಯ 69 ರನ್​ ಬಾರಿಸಿದರು.

ರಿಂಕು ಬ್ಯಾಟಿಂಗ್​ ಸಾಹಸದ ಬಗ್ಗೆ ಪಂದದ ಬಳಿಕ ಮಾತನಾಡಿದ ಕೋಚ್​ ದ್ರಾವಿಡ್​, ರಿಂಕು ಸಿಂಗ್‌ ಭಯಾನಕ ಆಟಗಾರನಾಗಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಬಂದು ಕೇವಲ 5 ತಿಂಗಳಾಗಿದ್ದರೂ ಕೂಡ ಅವರ ಆಟ ನೋಡುವಾಗ ಯಾವುದೇ ಅನುಭವಿಗಿಂತ ಕಡಿಮೆ ಇಲ್ಲ. ಈ ಹಿಂದೆ ಅವರನ್ನು ಮ್ಯಾಚ್‌ ಫಿನಿಶರ್​ ಆಗಿ ಮಾತ್ರ ನೋಡಿದ್ದವು. ಅವರಲ್ಲಿ ಸಮಯಕ್ಕೆ ತಕ್ಕದಾದ ಆಟವೂ ಇದೆ ಎನ್ನುವ ವಿಚಾರ ಈ ಪಂದ್ಯದಿಂದ ಸಾಬೀತಾಯಿತು. ನಿಜಕ್ಕೂ ರಿಂಕು ಭಾರತದ ಭವಿಷ್ಯದ ಆಟಗಾರ” ಎಂದು ರಾಹುಲ್‌ ಗುಣಗಾನ ಮಾಡಿದರು.

ಇದನ್ನೂ ಓದಿ ಶತಕ ಬಾರಿಸಿ ಹಲವು ದಾಖಲೆ ಬರೆದ ರೋಹಿತ್​; ಕೊಹ್ಲಿ ದಾಖಲೆಯೂ ಉಡೀಸ್​

ರಿಂಕು ಸದ್ಯ ಭಾರತ ಪರ 15 ಟಿ20 ಪಂದ್ಯಗಳಲ್ಲಿ 11 ಇನಿಂಗ್ಸ್​ ಆಡಿ 356 ರನ್​ ಬಾರಿಸಿದ್ದಾರೆ. 2 ಅರ್ಧಶತಕ ಕೂಡ ಇದರಲ್ಲಿ ದಾಖಲಾಗಿದೆ. 2 ಏಕದಿನ ಪಂದ್ಯಗಳಿಂದ 55 ರನ್​ ಕಲೆಹಾಕಿದ್ದಾರೆ. ರಿಂಕು ಪ್ರದರ್ಶನ ಕಾಣುವಾಗ ಇದೇ ವರ್ಷ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಭಾರತ ತಂಡದಲ್ಲಿ ಅವರಿಗೆ ಸ್ಥಾನ ಖಚಿತ ಎನ್ನಬಹುದು.

ಐಪಿಎಲ್​ನಿಂದ ಖುಲಾಯಿಸಿ ಅದೃಷ್ಟ


ಕಳೆದ ವರ್ಷ ನಡೆದ 16ನೇ ಆವೃತ್ತಿಯ ಐಪಿಎಲ್(IPL)​ ಪಂದ್ಯದಲ್ಲಿ ಯಾರು ಊಹಿಸಿದ ರೀತಿಯಲ್ಲಿ ಬ್ಯಾಟಿಂಗ್​ ನಡೆಸಿದ ರಿಂಕು ಸಿಂಗ್(Rinku Singh)​, ಗುಜರಾತ್‌ ಟೈಟನ್ಸ್‌ ವಿರುದ್ಧದ ಪಂದ್ಯವೊಂದರಲ್ಲಿ ಯಶ್‌ ದಯಾಳ್ ಎಸೆತದಲ್ಲಿ ಸತತ ಐದು ಭರ್ಜರಿ ಸಿಕ್ಸರ್‌ಗಳನ್ನು ಸಿಡಿಸಿ ಕೋಲ್ಕತಾ ನೈಟ್‌ ರೈಡರ್ಸ್(KKR) ತಂಡವನ್ನು ಗೆಲ್ಲಿಸಿದ್ದರು. ಇದಾದ ಬಳಿಕ ಅವರ ಕೀರ್ತಿ ಎಲ್ಲಡೆ ಪಸರಿಸಿತು. ಅವರ ಈ ಪ್ರದರ್ಶನ ಕಂಡ ಬಿಸಿಸಿಐ, ಟೀಮ್​ ಇಂಡಿಯಾದಲ್ಲಿ ಆಡುವ ಅವಕಾಶ ಕಲ್ಪಿಸಿತು. ಸದ್ಯ ರಿಂಕು ಭಾರತ ಟಿ20 ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

Exit mobile version