ಮುಂಬಯಿ: ವಿಂಡೀಸ್ ವಿರುದ್ಧದ ಟಿ20 ಸರಣಿಗೆ ರಿಂಕು ಸಿಂಗ್(Rinku Singh) ಅವರನ್ನು ಆಯ್ಕೆ ಮಾಡದ ಕುರಿತು ಅನೇಕ ಮಾಜಿ ಆಟಗಾರರು ಬಿಸಿಸಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಇದೀಗ ಬಿಸಿಸಿಐ ಅಧಿಕಾರಿಯೊಬ್ಬರು ರಿಂಕು ಅವರನ್ನು ಯಾವ ಕಾರಣಕ್ಕೆ ಆಯ್ಕೆ ಮಾಡಿಲ್ಲ ಎಂಬ ಕಾರಣವನ್ನು ತಿಳಿಸಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ ಮುಂಬೈ ಇಂಡಿಯನ್ಸ್ ತಂಡದ ತಿಲಕ್ ವರ್ಮ, ರಾಜಸ್ಥಾನ್ ತಂಡದ ಯಶಸ್ವಿ ಜೈಸ್ವಾಲ್, ಆಯ್ಕೆಯಾಗಿದ್ದರು. ಆದರೆ ರಿಂಕು ಆಯ್ಕೆ ಆಗಿರಲಿಲ್ಲ. ಇದೇ ವಿಚಾರವಾಗಿ ಆಯ್ಕೆ ಸಮಿತಿ ಮತ್ತು ಬಿಸಿಸಿಐ ವಿರುದ್ಧ ಕೆಲ ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದರು.
ಮಧ್ಯಮ ಕ್ರಮಾಂಕದಲ್ಲಿ ಫಿನಿಶಿಂಗ್ ಪಾತ್ರ ನಿರ್ವಹಿಸುವ ರಿಂಕುಗೆ ಅವಕಾಶ ನೀಡಬೇಕಿತ್ತು. ಭಾರತ ಟ20 ತಂಡದಲ್ಲಿ ಎದ್ದು ಕಾಣುತ್ತಿರುವ ಸಮಸ್ಯೆ ಎಂದರೆ ಫಿನಿಶಿಂಗ್ ಪಾತ್ರ. ಕಳೆದ ಟಿ20 ವಿಶ್ವ ಕಪ್ನಲ್ಲಿಯೂ ಇದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಈ ಪಾತ್ರವನ್ನು ನಿಭಾಯಿಸಬಲ್ಲ ಆಟಗಾರ ಇದ್ದರೂ ಅವರಿಗೆ ಸೂಕ್ತ ಅವಕಾಶ ನೀಡುತ್ತಿಲ್ಲ” ಎಂದು ಆಯ್ಕೆ ಸಮಿತಿ ಮೇಲೆ ಅಸಮಾಧಾನಗೊಂಡಿದ್ದರು. ಇದೀಗ ಇದೇ ವಿಚಾರವಾಗಿ ಬಿಸಿಸಿಐ ಅಧಿಕಾರಿಯೊಬ್ಬರು ಸ್ಪಷ್ಟ ಉತ್ತರ ನೀಡಿದ್ದಾರೆ.
ಐಪಿಎಲ್‌ನಲ್ಲಿ ಮಿಂಚಿದ ಆಟಗಾರರನ್ನು ಒಂದೇ ಬಾರಿ ಪ್ರಯೋಗ ನಡೆಸಲು ಬಿಸಿಸಿಐ ಆಯ್ಕೆ ಸಮಿತಿಗೆ ಮನಸ್ಸಿಲ್ಲ. ಹೀಗಾಗಿ ಆಟಗಾರರನ್ನು ವಿಭಾಗಿಸಿ, ವಿವಿಧ ಸರಣಿಗಳಲ್ಲಿ ಅವಕಾಶ ನೀಡಲು ಬಿಸಿಸಿಐ ಮುಂದಾಗಿದೆ. ಈ ಮೂಲಕ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ಗೆ ತಂಡವನ್ನು ರಚಿಸಲಾಗುತ್ತಿದೆ. ರಿಂಕು ಅವರು ಐರ್ಲೆಂಡ್ ಸರಣಿಯಲ್ಲಿ ಅವಕಾಶ ಪಡೆಯಲಿದ್ದಾರೆ. ಇದೇ ಕಾರಣಕ್ಕೆ ಅವರನ್ನು ವಿಂಡೀಸ್ ಸರಣಿಗೆ ಆಯ್ಕೆ ಮಾಡಿಲ್ಲ ಎಂದು ಹೆಸರು ಹೇಳಲು ಇಚ್ಚಿಸದ ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಭಾರತ ಟಿ20 ತಂಡ
ಇಶಾನ್ ಕಿಶನ್, ಶುಭಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಹಾರ್ದಿಕ್ ಪಾಂಡ್ಯ(ನಾಯಕ), ಅಕ್ಷರ್ ಪಟೇಲ್, ಯಜುವೇಂದ್ರ ಚಹಲ್, ಕುಲ್ದೀಪ್ ಯಾದವ್, ರವಿ ಬಿಷ್ಟೋಯಿ, ಆರ್ಶ್ದೀಪ್ ಸಿಂಗ್, ಉಮ್ರಾನ್ ಮಲಿಕ್, ಆವೇಶ್ ಖಾನ್, ಮುಖೇಶ್ ಕುಮಾರ್.
ವೇಳಾಪಟ್ಟಿ
ಮೊದಲ ಟಿ20 ಪಂದ್ಯ ಆಗಸ್ಟ್ 3, ಸ್ಥಳ: ಟ್ರಿನಿಡಾಡ್
ದ್ವಿತೀಯ ಟಿ20 ಪಂದ್ಯ ಆಗಸ್ಟ್ 6, ಸ್ಥಳ: ಗಯಾನಾ
ಮೂರನೇ ಟಿ20 ಪಂದ್ಯ ಆಗಸ್ಟ್ 8, ಸ್ಥಳ: ಗಯಾನಾ
ನಾಲ್ಕನೇ ಟಿ20 ಪಂದ್ಯ ಆಗಸ್ಟ್ 12, ಸ್ಥಳ: ಫ್ಲೋರಿಡಾ
5ನೇ ಟಿ20 ಪಂದ್ಯ ಆಗಸ್ಟ್ 13, ಸ್ಥಳ: ಫ್ಲೋರಿಡಾ