Site icon Vistara News

IND vs AUS: ಭಾರತ ತಂಡ ಗೆದ್ದದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ; ಮತ್ತೆ ಹೇಗೆ?

Rinku Singh

ವಿಶಾಖಪಟ್ಟಣ: ಗುರುವಾರ ರಾತ್ರಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತ ಕೊನೆಯ ಎಸೆತದಲ್ಲಿ ರನ್​ಗಳಿಸಿ ಗೆಲುವು ಸಾಧಿಸಿತ್ತು. ಒಂದು ಎಸೆತದಲ್ಲಿ ಒಂದು ರನ್​ ಬೇಕಿದ್ದಾಗ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿದರು. ಎಲ್ಲರು ಭಾರತ ರಿಂಕು ಬಾರಿಸಿದ ಸಿಕ್ಸರ್​ನಿಂದ ಗೆಲುವು ಸಾಧಿಸಿತ್ತು ಎಂದುಕೊಂಡರು. ಆದರೆ, ಭಾರತ ಗೆಲುವು ಕಂಡಿದ್ದು ಈ ಸಿಕ್ಸರ್​ನಿಂದಲ್ಲ.

ಹೌದು, ಭಾರತ ತಂಡದ ಗೆಲುವಿಗೆ ಅಂತಿಮ ಓವರ್​ನ 6 ಎಸೆತದಲ್ಲಿ 7 ರನ್​ ಅಗತ್ಯವಿತ್ತು. ಸೀನ್​ ಅಬೋಟ್​ ಎಸೆತ ಓ ಓವರ್​ನ ಮೊದಲ ಎಸೆತವನ್ನು ರಿಂಕು ಬೌಂಡರಿ ಬಾರಿಸಿದರು. ಮುಂದಿನ ಎಸೆತದಲ್ಲಿ ಒಂದು ರನ್​ ತೆಗೆದರು. ಉಳಿದ 4 ಎಸೆತದಲ್ಲಿ 2 ರನ್​ ಬೇಕಿದ್ದಾಗ ಅಕ್ಷರ್​ ಪಟೇಲ್​ ಔಟ್​ ಆದರು. ಬಳಿಕ ಬಂದ ರವಿ ಬಿಷ್ಣೋಯ್​ ಕೂಡ ರನೌಟ್​ ಆದರು. ಕೊನೆಎಗೆ 2 ಎಸೆತದಲ್ಲಿ 2 ರನ್​ ಬೇಕಿದ್ದಾಗ ಅರ್ಶದೀಪ್​ ಸಿಂಗ್​ ಒಂದು ರನ್​ ತೆಗೆದು ಮತ್ತೊಂದು ರನ್​ಗಾಗಿ ಓಡುವಾಗ ಅವರು ಕೂಡ ರನೌಟ್​ ಆದರು. ಕೊನೆಗೆ ಒಂದು ಎಸೆತದಲ್ಲಿ ಒಂದು ರನ್​ ತೆಗೆಯುವ ಸವಾಲು ಎದುರಾಯಿತು. ಈ ವೇಳೆ ರಿಂಕು ಚೆಂಡನ್ನು ಸಿಕ್ಸರ್​ಗೆ ಬಡಿದಟ್ಟಿದರು. ಭಾರತ ಗೆಲುವು ಸಾಧಿಸಿತು.

ವಾಸ್ತವವಾಗಿ ಭಾರತ ಗೆಲುವು ಸಾಧಿಸಿದ್ದು ರಿಂಕು ಬಾರಿಸಿದ ಸಿಕ್ಸರ್​ನಿಂದಲ್ಲ. ಬದಲಾಗಿ ನೋಬಾಲ್​ನಿಂದ. ಅಬೋಟ್​ ಅವರ ಅಂತಿಮ ಎಸೆತ ನೋಬಾಲ್​ ಆಗಿತ್ತು. ಹೀಗಾಗಿ ರಿಂಕು ಬಾರಿಸಿದ ಸಿಕ್ಸರನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಒಂದೊಮ್ಮೆ ಈ ಸಿಕ್ಸರ್​ ಪರಿಗಣನೆಗೆ ತೆಗೆದುಕೊಳ್ಳುತ್ತಿದ್ದರೆ ಭಾರತದ ಮೊತ್ತ 214 ರನ್​ ಆಗಿರುತ್ತಿತ್ತು. ನೋಬಾಲ್​ ರನ್​ ಗಣನೆಗೆ ತೆಗೆದುಕೊಂಡ ಕಾರಣ ಒಂದು ರನ್ ಮಾತ್ರ ನೀಡಿ 209 ರನ್​ ಗಳಿಸಿತು. ಅಲ್ಲದೆ ರಿಂಕು ಅವರಿಗೂ ಈ ಸಿಕ್ಸರ್​ನ ರನ್​ ಸಿಗಲಿಲ್ಲ.

ಇದನ್ನೂ ಓದಿ IND vs AUS: ಗೆಲುವಿನಲ್ಲೂ ದಾಖಲೆ ಬರೆದ ಯಂಗ್​ ಟೀಮ್​ ಇಂಡಿಯಾ

ವಿಶಾಖಪಟ್ಟಣದ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ ಆಹ್ವಾನ ಪಡೆದ ಆಸ್ಟ್ರೇಲಿಯಾ ಜೋಶ್​ ಇಂಗ್ಲಿಸ್(110)​ ಅವರ ಆಕರ್ಷಕ ಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ ​ ಮೂರು ವಿಕೆಟ್​ ಕಳೆದುಕೊಂಡು 208 ರನ್​ ಗಳಿಸಿತು. ಬೃಹತ್​ ಮೊತ್ತವನ್ನು ದಿಟ್ಟವಾಗಿ ಬೆನ್ನಟ್ಟಿಕೊಂಡು ಹೋದ ಭಾರತಕ್ಕೆ ಅಂತಿಮ ಓವರ್​ನಲ್ಲಿ ಗೆಲುವಿಗೆ 7 ರನ್​ ಬೇಕಿತ್ತು. ಈ ವೇಳೆ ನಾಟಕೀಯ ಕುಸಿತ ಕಂಡ ಭಾರತ ಸತತವಾಗಿ ಮೂರು ವಿಕಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತು. ಕೊನೆಯ ಎಸೆತದಲ್ಲಿ ಗೆಲುವಿಗೆ ಒಂದು ರನ್​ ಬೇಕಿದ್ದಾಗ ಆತ್ಮವಿಶ್ವಾಸ ಕಳೆದುಕೊಳ್ಳದ ರಿಂಕು ಸಿಂಗ್​ ಸಿಕ್ಸರ್​ ಬಾರಿಸಿ ವಿಜಯ ಪತಾಕೆ ಹಾರಿಸಿದರು. ಅಚ್ಚರಿ ಎಂದರೆ ಇದು ನೋಬಾಲ್​ ಕೂಡ ಆಗಿತ್ತು. ವಿಕೆಟ್​ ಪತನಗೊಂಡರೂ ಭಾರತ ಗೆಲುವು ಸಾಧಿಸುತ್ತಿತ್ತು.

Exit mobile version