Site icon Vistara News

Rishabh Pant Birthday: ಪವಾಡ ಸದೃಶ ರೀತಿಯಲ್ಲಿ ಪಾರಾದ ಪಂತ್‌ಗೆ 26ನೇ ಜನ್ಮ ದಿನದ ಸಂಭ್ರಮ

RishabhPant

ಬೆಂಗಳೂರು: ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಟೀಮ್‌ ಇಂಡಿಯಾದ ಸ್ಟಾರ್‌ ಆಟಗಾರ ರಿಷಭ್‌ ಪಂತ್‌(Rishabh Pant Birthday) 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರ ಜನ್ಮ ದಿನಕ್ಕೆ ಬಿಸಿಸಿಐ ಸೇರಿ ಹಲವು ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಶುಭ ಹಾರೈಸಿದ್ದಾರೆ. ಜತೆಗೆ ಅಂದಿನ ಅಪಘಾತವನ್ನು ಸ್ಮರಿಸಿಕೊಂಡಿದ್ದಾರೆ.

ಪಂತ್‌ ತಮ್ಮ ಹುಟ್ಟುಹಬ್ಬದ ಮುನ್ನ ದಿನ ಮಂಗಳವಾರ ಹಿಮಾಲಯದ ಮೇಲ್ಭಾಗದಲ್ಲಿರುವ ಕೇದಾರನಾಥ ಮತ್ತು ಬದರೀನಾಥ್‌ ಧಾಮಕ್ಕೆ ಭೇಟಿ ನೀಡಿದ್ದರು. ಚೇತರಿಕೆ ಹಾದಿಯಲ್ಲಿರುವ ಅವರು ಈ ಬಾರಿಯ ವಿಶ್ವಕಪ್‌ನಲ್ಲಿ ಮಿಸ್‌ ಮಾಡಿಕೊಂಡಿದ್ದಾರೆ. ಪಂತ್‌ ಭಾರತಕ್ಕೆ ಹಲವು ಸ್ಮರಣೀಯ ಗೆಲುವನ್ನು ತಂದುಕೊಟ್ಟಿದ್ದಾರೆ. ಭಾರತ ಪರ ಮೂರು ಮಾದರಿಯ ಕ್ರಿಕೆಟ್‌ನಲ್ಲಿ 129 ಇನಿಂಗ್ಸ್‌ ಆಡಿ 4123 ರನ್‌ ಗಳಿಸಿದ್ದಾರೆ. 6 ಶತಕಗಳು ಒಳಗೊಂಡಿದೆ.

ಡಿವೈಡರ್​ಗೆ ಡಿಕ್ಕಿಯಾದ ಕಾರು

ಕಳೆದ ಡಿಸೆಂಬರ್​ 30ರಂದು(rishabh pant accident date) ರಿಷಭ್​ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್​ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್​ ಪಂತ್​ ಪಾರಾಗಿದ್ದರು. ಡೆಹ್ರಾಡೂನ್​ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಮೊದಲ ಬಾರಿಗೆ ಪಂತ್​ ಅವರು ತಮ್ಮ ಚೇತರಿಕೆ ಅಪ್​ಡೇಟ್​ ನೀಡಿದ್ದು ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊ ಹಂಚಿಕೊಂಡು ಬಳಿಕ ಸ್ವಿಮಿಂಗ್​ ಪೂಲ್​ನಲ್ಲಿ ನಡೆದಾಡಿದ್ದು ಹೀಗೆ ಹಲವು ಚೇತರಿಕೆಯ ಹಂತವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಕ್ರಿಕೆಟ್​ ಮೈದಾನಕ್ಕೆ(rishabh pant comeback) ಬರಲಿ ಎಂಬುದು ಅವರ ಅಭಿಮಾನಿಗಳ(rishabh pant fans) ಆಶಯಾಗಿದೆ.

ಇದನ್ನೂ ಓದಿ ICC World Cup 2023: ವಿಶ್ವಕಪ್‌ ಟಿಕೆಟ್‌ ಕೇಳಬೇಡಿ; ಕೊಹ್ಲಿಯ ಕ್ಯೂಟ್‌ ರಿಕ್ವೆಸ್ಟ್‌

ದೇವರಿಗೆ ಧನ್ಯವಾದ ತಿಳಿಸಿದ್ದ ಪಂತ್​

ರಿಷಭ್​ ಪಂತ್​ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್​ ಕ್ರಿಕೆಟ್​ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್​ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್​ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಅಪಾಯದಿಂದ ಪಾರಾಗಿ ಮತ್ತೆ ಕ್ರಿಕೆಟ್​ ಆಡುವಂತಾಗಿದ್ದಾರೆ. ಇದೇ ಖಷಿಯಲ್ಲಿ ಪಂತ್​ ಅವರು “ನಾನು ಕತ್ತಲೆಯ ಸುರಂಗದಲ್ಲಿ ಮತ್ತೆ ಬೆಳಕನ್ನು ನೋಡಲಾರಂಭಿಸಿದೆ. ಇದನ್ನು ಕರುಣಿಸಿದ ದೇವರಿಗೆ ಧನ್ಯವಾದಗಳು” ಎಂದು ಬರೆದು ವರ್ಕೌಟ್​ ಮಾಡುತ್ತಿರುವ ವಿಡಿಯೊವನ್ನು ಇತ್ತೀಗೆ ಹಂಚಿಕೊಂಡಿದ್ದರು.

ತಿಂಗಳ ಹಿಂದೆ ರಿಷಭ್​ ಪಂತ್​ ಅವರು ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್​ ನಡೆಸಿ ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿ ಪಂತ್​ ಅವರು ತಮ್ಮ ಹಿಂದಿನ ಬ್ಯಾಟಿಂಗ್​ ಶೈಲಿಯಲ್ಲೇ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿದ್ದರು. ಪಂತ್​ ಬ್ಯಾಟಿಂಗ್​ನ ವಿಡಿಯೊ ವೈರಲ್​ ಕೂಡ ಆಗಿತ್ತು. ಅಲ್ಲದೆ ಫಿಟ್​ನೆಸ್​ ಪಾಸ್​ ಮಾಡುವ ಪರೀಕ್ಷೆಗೆ ಪೂರ್ವ ತಯಾರಿ ನಡೆಸಿದ್ದಾರೆ.

Exit mobile version