ಬೆಂಗಳೂರು: ಭೀಕರ ಕಾರು ಅಪಘಾತದಲ್ಲಿ ಪವಾಡ ಸದೃಶ ರೀತಿಯಲ್ಲಿ ಪಾರಾದ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ರಿಷಭ್ ಪಂತ್(Rishabh Pant) ಅವರು ಪೂರ್ಣವಾಗಿ 2024ರ ಐಪಿಎಲ್(IPL 2024) ಆವೃತ್ತಿಯನ್ನು ಆಡಲಿದ್ದಾರೆ ಎಂದು ಡೆಲ್ಲಿ ಕ್ಯಾಪಿಟಲ್ಸ್(Delhi Capitals) ತಂಡದ ಮುಖ್ಯ ಕೋಚ್ ರಿಕಿ ಪಾಂಟಿಂಗ್(Ricky Ponting) ಹೇಳಿದ್ದಾರೆ.
ರಿಷಭ್ ಪಂತ್ ಅವರು 2024ರ ಐಪಿಎಲ್ ಟೂರ್ನಿಯಲ್ಲಿ(IPL 2024 season) ಆಡಲಿದ್ದಾರೆ ಎಂದು ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ವೇಳೆಯೇ ತಿಳಿದುಬಂದಿತ್ತು. ಅಲ್ಲದೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಕೂಡ ಪಂತ್ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ಹೇಳಿತ್ತು. ಇದೀಗ ಪಂತ್ ಸಂಪೂರ್ಣವಾಗಿ ಟೂರ್ನಿಯಲ್ಲಿ ಆಡಲಿದ್ದಾರೆ ಎಂದು ಹೇಳುವ ಮೂಲಕ ಡೆಲ್ಲಿ ತಂಡದ ಅಭಿಮಾನಿಗಳಿಗೆ ಕೋಚ್ ಪಾಂಟಿಂಗ್ ಸಿಹಿ ಸುದ್ದಿ ನೀಡಿದ್ದಾರೆ.
“ರಿಷಭ್ ಪಂತ್ ಅವರು ಈ ಬಾರಿಯ ಐಪಿಎಲ್ ಆಡಲು ತುಂಬಾ ಉತ್ಸುಕರಾಗಿದ್ದಾರೆ. ಜತೆಗೆ ಆತ್ಮವಿಶ್ವಾಸ ಕೂಡ ಹೆಚ್ಚಿಸಿಕೊಂಡಿದ್ದಾರೆ. ಕ್ರಿಕೆಟ್ ಆಡುವ ಎಲ್ಲ ಸಾಮರ್ಥ್ಯ ಅವರಲ್ಲಿದೆ. ಅವರು ಈ ಬಾರಿ ಸಂಪೂರ್ಣವಾಗಿ ಟೂರ್ನಿಯಲ್ಲಿ ಆಡುವುದು ಖಚಿತ. ಆದರೆ, ವಿಕೆಟ್ ಕೀಪಿಂಗ್ ಬಗ್ಗೆ ಯೋಚಿಸಲಿದ್ದೇವೆ” ಎಂದು ಪಾಂಟಿಂಗ್ ಹೇಳಿದರು.
ಇದನ್ನೂ ಓದಿ IPL 2024: ಮುಂಬೈ ಇಂಡಿಯನ್ಸ್ ಕೋಚ್ಗೆ ಟಾಂಗ್ ನೀಡಿದ ರೋಹಿತ್ ಪತ್ನಿ; ಪೋಸ್ಟ್ ವೈರಲ್
“ನಾನು ಪಂತ್ ಬಳಿ ಐಪಿಎಲ್ ಆಡುವ ಕುರಿತು ಪ್ರಶ್ನಿಸಿದ್ದೆ, ಇದಕ್ಕೆ ಅವರು ಪ್ರತಿ ಪಂದ್ಯವನ್ನು ಆಡುವ ಸಾಮರ್ಥ್ಯ ನನ್ನ ಬಳಿ ಇದೆ ಎಂದು ಉತ್ತರಿಸಿದ್ದರು. ಜತೆಗೆ ನಂ.4 ನಲ್ಲಿ ಬ್ಯಾಟಿಂಗ್ ಮಾಡುತ್ತೇನೆ” ಎಂದು ಪಂತ್ ಹೇಳಿದ್ದರು ಎಂದು ಪಾಂಟಿಂಗ್ ಹೇಳಿದರು.
ಇತ್ತೀಚೆಗಷ್ಟೇ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ರಿಷಭ್ ಪಂತ್ ಸಾರಥ್ಯದಲ್ಲೇ 17ನೇ ಆವೃತ್ತಿಯ ಐಪಿಎಲ್ನಲ್ಲಿ ತಂಡ ಕಣಕಿಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ಅಲ್ಲದೆ ಪಂತ್ ಈಗ ಆರೋಗ್ಯವಾಗಿದ್ದಾರೆ ಮತ್ತು ಅವರು ಐಪಿಎಲ್ ಆಡುವುದು ಖಚಿತ ಎಂದು ಪಿಟಿಐಗೆ ತಿಳಿಸಿದ್ದರು.
ಸದ್ಯ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಪುನಶ್ಚೇತನ ಶಿಬಿರದಲ್ಲಿರುವ ಪಂತ್ ಫಿಟ್ನೆಸ್ ಅಭ್ಯಾಸ ನಡೆಸುತ್ತಿದ್ದಾರೆ. ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ನಡೆಸಿದ ವಿಡಿಯೊಗಳು 2 ತಿಂಗಳ ಹಿಂದೆ ವೈರಲ್ ಆಗಿತ್ತು. ಅಲ್ಲದೆ ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಕ್ರಿಕೆಟ್ ಅಭ್ಯಾಸ ಪಂದ್ಯವೊಂದರಲ್ಲಿ ಪಂತ್ ಬ್ಯಾಟಿಂಗ್ ನಡೆಸಿದ್ದರು. ತಮ್ಮ ಎಂದಿನ ಶೈಲಿಯಲ್ಲೇ ಸಿಕ್ಸರ್ ಮತ್ತು ಬೌಂಡರಿ ಕೂಡ ಬಾರಿಸಿ ಮಿಂಚಿದ್ದರು.
Rishabh Pant's batting practice, recovery has been excellent.
— Johns. (@CricCrazyJohns) August 16, 2023
– Great news for Indian cricket. pic.twitter.com/KThpdkagDz
ಬಹುತೇಕ ಚೇತರಿಕೆ ಕಂಡಿರುವ ಅವರ ಫಿಟ್ನೆಸ್ ಮೇಲೆ ಬಿಸಿಸಿಐ ವೈದ್ಯಕಿಯ ತಂಡ ನಿಗಾ ಇರಿಸಿದೆ. ಪಂತ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳ ಬೇಕಾದರ ದೇಶೀಯ ಕ್ರಿಕೆಟ್ನಲ್ಲಿ ಆಡಿ ತಮ್ಮ ಫಿಟ್ಸೆನ್ ಸಾಬೀತುಪಡಿಸಬೇಕಿದೆ. ಸದ್ಯ ಪಂತ್ಗೆ ಫಿಟ್ಸೆನ್ ತೋರ್ಪಡಿಸಲು ಐಪಿಎಲ್ ಟೂರ್ನಿ ಉತ್ತಮ ವೇದಿಕೆಯಾಗಿದೆ.