ಬೆಂಗಳೂರು: ಕಳೆದ ವಾರ ಜಿಮ್ನಲ್ಲಿ ದೀರ್ಘ ಅವಧಿಯ ವರೆಗೆ ಸೈಕ್ಲಿಂಗ್ ಮಾಡಿದ ವಿಡಿಯೊ ಹಂಚಿಕೊಂಡಿದ್ದ ರಿಷಭ್ ಪಂತ್(Rishabh Pant) ಅವರು ಇದೀಗ ಮತ್ತೊಂದು ವರ್ಕೌಟ್ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಪಂತ್ ಬೆಂಗಳೂರಿನ ರಾಷ್ಟ್ರೀಯ ಅಕಾಡೆಮಿ(ಎನ್‌ಸಿಎ)ಯಲ್ಲಿ ಪುನಶ್ಚೇತನಕ್ಕೆ(National Cricket Academy in Bengaluru) ಒಳಗಾಗುತ್ತಿದ್ದಾರೆ. ಫಿಟ್ನೆಸ್ ವರದಿಗಾಗಿ ಮಾಡುವ ತೀವ್ರತೆಯ ತಾಲೀಮು ನಡೆಸಿದ ವಿಡಿಯೊವನ್ನು ಪಂತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ತಮ್ಮ ಈ ಪ್ರಗತಿಗೆ ದೇವರೇ ಕಾರಣ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ತಾನು ಮತ್ತಷ್ಟು ಚೇತರಿಕಂಡಿದ್ದು ಶೀಘ್ರದಲ್ಲೇ ಕ್ರಿಕೆಟ್ಗೆ ಮರಳಲಿದ್ದೇನೆ ಎಂಬ ಅಪ್ಡೇಡ್ ನೀಡಿದ್ದಾರೆ.
ಎರಡು ವಾರಗಳ ಹಿಂದೆ ರಿಷಭ್ ಪಂತ್ ಅವರು ಕರ್ನಾಟಕದ JSW ವಿಜಯನಗರದಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ಬ್ಯಾಟಿಂಗ್ ನಡೆಸಿ ಗಮನ ಸೆಳೆದಿದ್ದರು. ಈ ಪಂದ್ಯದಲ್ಲಿ ಪಂತ್ ಅವರು ತಮ್ಮ ಹಿಂದಿನ ಬ್ಯಾಟಿಂಗ್ ಶೈಲಿಯಲ್ಲೇ ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದರು. ಪಂತ್ ಬ್ಯಾಟಿಂಗ್ನ ವಿಡಿಯೊ ವೈರಲ್ ಕೂಡ ಆಗಿತ್ತು. ಇದೀಗ ಫಿಟ್ನೆಸ್ ಪಾಸ್ ಮಾಡುವ ಪರೀಕ್ಷೆಗೆ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಮ್ಯಾಟ್ನಲ್ಲಿ ಜಂಪ್ ಮಾಡುತ್ತಾ ಓಡುತ್ತಿರುವ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ Rishabh Pant: ವಿಶ್ವಕಪ್ಗೆ ಪಂತ್ ಫಿಕ್ಸ್!; ಜಿಮ್ನಲ್ಲಿ ಭಾರಿ ಕಸರತ್ತು
ದೇವರಿಗೆ ಧನ್ಯವಾದ ತಿಳಿಸಿದ ಪಂತ್
ರಿಷಭ್ ಪಂತ್ ಅವರ ಗಂಭೀರ ಗಾಯವನ್ನು ಕಂಡ ಅನೇಕರು ಪಂತ್ ಕ್ರಿಕೆಟ್ ಬಾಳ್ವೆ ಇನ್ನು ಮಂದೆ ಕಷ್ಟ, ಒಂದೊಮ್ಮೆ ಅವರು ಕ್ರಿಕೆಟ್ಗೆ ಮರಳಬೇಕಾದರೂ ಹಲವು ವರ್ಷ ಬೇಕಾದಿತು ಹೀಗೆ ಹಲವು ಅಭಿಪ್ರಯಾಗಳನ್ನು ವ್ಯಕ್ತಪಡಿಸಿದ್ದರು. ಆದರೆ ಪಂತ್ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಶಸ್ತ್ರಚಿಕಿತ್ಸೆ ನಡೆದ ಒಂದೆರಡು ದಿನಗಳಿಂದಲೇ ಕಠಿಣ ವ್ಯಾಯಾಮ ನಡೆಸಲು ಆರಂಭಿಸಿದ್ದರು. ಅಪಾಯದಿಂದ ಪಾರಾಗಿ ಮತ್ತೆ ಕ್ರಿಕೆಟ್ ಆಡುವಂತಾಗಿದ್ದಾರೆ. ಇದೇ ಖಷಿಯಲ್ಲಿ ಪಂತ್ ಅವರು “ನಾನು ಕತ್ತಲೆಯ ಸುರಂಗದಲ್ಲಿ ಮತ್ತೆ ಬೆಳಕನ್ನು ನೋಡಲಾರಂಭಿಸಿದೆ. ಇದನ್ನು ಕರುಣಿಸಿದ ದೇವರಿಗೆ ಧನ್ಯವಾದಗಳು” ಎಂದು ಬರೆದು ವರ್ಕೌಟ್ ಮಾಡುತ್ತಿರುವ ವಿಡಿಯೊ ಹಂಚಿಕೊಂಡಿದ್ದಾರೆ.
ಪ್ರಾಣಾಪಾಯದಿಂದ ಪಾರಾಗಿದ್ದ ಪಂತ್
ಕಳೆದ ಡಿಸೆಂಬರ್ 30ರಂದು(rishabh pant accident date) ರಿಷಭ್ ಪಂತ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು ಡಿವೈಡರ್ಗೆ ಡಿಕ್ಕಿ(rishabh pant accident) ಹೊಡೆದಿತ್ತು. ಘಟನೆಯಲ್ಲಿ ಅವರ ಕಾರು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು. ಸುಟ್ಟ ಗಾಯಗಳು ಹಾಗೂ ಮಂಡಿಯ ಗಾಯಗೊಂಡಿಗೆ ರಿಷಭ್ ಪಂತ್ ಪಾರಾಗಿದ್ದರು. ಡೆಹ್ರಾಡೂನ್ನಲ್ಲಿ ಆರಂಭದಲ್ಲಿ ಚಿಕಿತ್ಸೆ ಪಡೆದಿದ್ದ ಅವರನ್ನು ಬಳಿಕ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಮೊದಲ ಬಾರಿಗೆ ಪಂತ್ ಅವರು ತಮ್ಮ ಚೇತರಿಕೆ ಅಪ್ಡೇಟ್ ನೀಡಿದ್ದು ಊರುಗೋಲಿನ ಸಹಾಯದಿಂದ ನಡೆದಾಡುವ ಫೋಟೊ ಹಂಚಿಕೊಂಡು ಬಳಿಕ ಸ್ವಿಮಿಂಗ್ ಪೂಲ್ನಲ್ಲಿ ನಡೆದಾಡಿದ್ದು ಹೀಗೆ ಹಲವು ಚೇತರಿಕೆಯ ಹಂತವನ್ನು ಅವರು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಕ್ರಿಕೆಟ್ ಮೈದಾನಕ್ಕೆ)rishabh pant comeback) ಬರಲಿ ಎಂಬುದು ಅವರ ಅಭಿಮಾನಿಗಳ(rishabh pant fans) ಆಶಯಾಗಿದೆ.